ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಇಲಾಖೆಯಿಂದ ರಕ್ತದಾನಿಗಳಿಗಾಗಿ ವಾಹನದ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಲಾಕ್ ಡೌನ್ ಪರಿಣಾಮ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ರಕ್ತದಾನಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರ ನಡೆಸಲು ತೊಂದರೆಯಾಗಿದೆ.

Recommended Video

ರೈತನ ಪತ್ನಿ ವಿಡಿಯೋ ನೋಡಿದ ಕೂಡಲೇ ಫೋನ್ ಮಾಡಿದ C M..? | Oneindia Kannada

ಸರಿಯಾದ ಸಮಯಕ್ಕೆ ರಕ್ತ ದೊರಕದಿದ್ದರೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೂ ತೊಂದರೆಯಾಗಲಿದೆ. ಕರ್ನಾಟಕದ ಆರೋಗ್ಯ ಇಲಾಖೆ ರಕ್ತದಾನಿಗಳಿಗೆ ನೆರವಾಗಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಕ್ತದಾನಿಗಳಿಗಾಗಿಯೇ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. ರಕ್ತ ದಾನ ಮಾಡುವವರು ಇಲಾಖೆ ನೀಡಿರುವ ನಂಬರ್‌ಗೆ ಕರೆ ಮಾಡಿದರೆ ಅವರನ್ನು ರಕ್ತ ನೀಡುವ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ.

Transport Service For Blood Donors In Karnataka

ಲಾಕ್ ಡೌನ್ ಸಂದರ್ಭದಲ್ಲಿ ರಕ್ತ ದಾನಿಗಳು ಮತ್ತು ರಕ್ತವನ್ನು ಪಡೆಯುವ ಜನರಿಗೆ ತೊಂದರೆ ಆಗಬಾರದು ಎಂದು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಇದರಿಂದಾಗಿ ನೂರಾರು ರೋಗಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಹಲವಾರು ಆಟೋ ಚಾಲಕರು, ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವವರು, ಸಂಘಟನೆಗಳ ಕಾರ್ಯಕರ್ತರು ರಕ್ತ ನೀಡುತ್ತಾರೆ. ಆದರೆ, ಈಗ ಒಂದು ಪ್ರದೇಶದಿಂದ ಮತ್ತೊಂದು ಕಡೆ ಸಂಚಾರ ನಡೆಸುವುದು ಕಷ್ಟವಾಗಿದೆ.

ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿರುವ ಆರೋಗ್ಯ ಇಲಾಖೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡವವರಿಗೆ ವಾಹನದ ವ್ಯವಸ್ಥೆ ಮಾಡಿದೆ. ರಕ್ತದಾನ ಮಾಡಲು ಹೋಗುವವರು 9154153920 ನಂಬರ್‌ಗೆ ಕರೆ ಮಾಡಬಹುದಾಗಿದೆ.

English summary
Karnataka Health and family welfare department arranged a transport service for those who volunteer to save lives by donating blood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X