• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾರಿಗೆ ಮುಷ್ಕರ; ವಿಶೇಷ ರೈಲುಗಳ ವೇಳಾಪಟ್ಟಿ

|

ಬೆಂಗಳೂರು, ಏಪ್ರಿಲ್ 8; ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ಅನಿರ್ಧಿಷ್ಟಾವಧಿ ಮುಷ್ಕರದ ಹಿನ್ನಲೆಯಲ್ಲಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಮಾಡಿತ್ತು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ನೈಋತ್ಯ ರೈಲ್ವೆಗೆ ಪತ್ರವನ್ನು ಬರೆದಿದ್ದರು. ವಿಶೇಷ ರೈಲುಗಳನ್ನು ಓಡಿಸುವಂತೆ ಮನವಿಯನ್ನು ಮಾಡಿದ್ದರು. ಮುಂದಿನ ವಾರ ಯುಗಾದಿ ಹಬ್ಬವಿದ್ದು, ಜನರು ಹೆಚ್ಚಾಗಿ ಹೊರ ಜಿಲ್ಲೆಗಳಗೆ ಸಂಚಾರ ನಡೆಸಲಿದ್ದಾರೆ.

ಮೈಸೂರು-ತಾಳಗುಪ್ಪ ಹೊಸ ರೈಲು; ವೇಳಾಪಟ್ಟಿ ಮೈಸೂರು-ತಾಳಗುಪ್ಪ ಹೊಸ ರೈಲು; ವೇಳಾಪಟ್ಟಿ

ನೈಋತ್ಯ ರೈಲ್ವೆ ಸರ್ಕಾರದ ಪತ್ರಕ್ಕೆ ಒಪ್ಪಿಗೆ ನೀಡಿದೆ. 9 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸಾರಿಗೆ ನೌಕರರ ಮುಷ್ಕರ; ರೈಲು ಓಡಿಸಲು ಸರ್ಕಾರದ ಪತ್ರ ಸಾರಿಗೆ ನೌಕರರ ಮುಷ್ಕರ; ರೈಲು ಓಡಿಸಲು ಸರ್ಕಾರದ ಪತ್ರ

ರೈಲುಗಳ ವೇಳಾಪಟ್ಟಿ

* ಯಶವಂತಪುರ-ಬೆಳಗಾವಿ ರೈಲು ಏ.9ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 9.10ಕ್ಕೆ ಬೆಳಗಾವಿ ತಲುಪಲಿದೆ. ರಾತ್ರಿ 10ಕ್ಕೆ ಯಶವಂತಪುರಕ್ಕೆ ಹೊರಡಲಿದೆ.

ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು; ವೇಳಾಪಟ್ಟಿ ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು; ವೇಳಾಪಟ್ಟಿ

* ಯಶವಂತಪುರ-ವಿಜಯಪುರ ರೈಲು ಏ.9ರಂದು ಸಂಜೆ 6.20ಕ್ಕೆ ವಿಜಯಪುರಕ್ಕೆ ಹೊರಡಲಿದೆ.

* ಮೈಸೂರು-ಬೆಂಗಳೂರು ರೈಲು ಏ.9ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 2.30ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಹೊರಡಲಿದೆ.

* ಏ. 9 ಮತ್ತು 10ರಂದು ಮೈಸೂರು-ಯಶವಂತಪುರ ವಿಶೇಷ ರೈಲು ಸಂಚಾರ ನಡೆಸಲಿದೆ. ಮೈಸೂರಿನಿಂದ ಬೆಳಗ್ಗೆ 8.25ಕ್ಕೆ ಮತ್ತು ಯಶವಂತಪುರದಿಂದ ಮಧ್ಯಾಹ್ನ 1.15ಕ್ಕೆ ರೈಲು ಹೊರಡಲಿದೆ.

* ಮೈಸೂರು-ಬೀದರ್ ರೈಲು ಏಪ್ರಿಲ್ 9ರಂದು ರಾತ್ರಿ 8ಕ್ಕೆ ಮೈಸೂರಿನಿಂದ ಮತ್ತು ಮರುದಿನ ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡಲಿದೆ.

   ಬಸ್‌ ಸಂಚಾರ ಬಂದ್‌ ಹಿನ್ನೆಲೆ 10ಲಕ್ಷ ಪರಿಹಾರ ಕೋರಿ ಕೋಡಿಹಳ್ಳಿ ಚಂದ್ರಶೇಖರ್‌ಗೆ ನೊಟೀಸ್‌ ನೀಡಿದ ವಿದ್ಯಾರ್ಥಿನಿ | Oneindia Kannada

   * ಯಶವಂತಪುರ-ಬೀದರ್ ರೈಲು (ಕಲಬುರಗಿ ಮಾರ್ಗ) ಏಪ್ರಿಲ್ 10ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಮತ್ತು ಮರುದಿನ ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡಲಿದೆ.

   English summary
   As per the request by Karnataka government south western railway will run 9 special trains. Transport employees strike in Karnataka enter 2nd day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X