ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ಮುಷ್ಕರ; ಮಾಸಿಕ ಪಾಸು ಪಡೆದವರಿಗೆ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 11; ಕರ್ನಾಟಕದಲ್ಲಿ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಸರ್ಕಾರಿ ಬಸ್‌ಗಳ ಸಂಚಾರ ರದ್ದುಗೊಂಡಿದ್ದರಿಂದ ಮಾಸಿಕ ಪಾಸು ಪಡೆದು ಸಂಚಾರ ನಡೆಸುವ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.

ಸಾರಿಗೆ ಮುಷ್ಕರ : ಬಿಎಂಟಿಸಿ ಪಾಸು ಖರೀದಿ ಮಾಡಿದವರಿಗೆ ಮಹಾ ಮೋಸ !ಸಾರಿಗೆ ಮುಷ್ಕರ : ಬಿಎಂಟಿಸಿ ಪಾಸು ಖರೀದಿ ಮಾಡಿದವರಿಗೆ ಮಹಾ ಮೋಸ !

ಭಾನುವಾರ ಕೆಎಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಪಾಸು ಪಡೆದು ಪ್ರಯಾಣಿಸುವ ಜನರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ಕುರಿತು ಕೆಎಸ್ಆರ್‌ಟಿಸಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ಸಾರಿಗೆ ಮುಷ್ಕರ; ಜನರ ತೊಂದರೆ ನಿವಾರಿಸಲು ಮೂರು ಕ್ರಮ ಸಾರಿಗೆ ಮುಷ್ಕರ; ಜನರ ತೊಂದರೆ ನಿವಾರಿಸಲು ಮೂರು ಕ್ರಮ

Transport Employees Strike Monthly Pass Validity Extended

ನಿಗಮದ ವಿದ್ಯಾರ್ಥಿ ಬಸ್ ಪಾಸುಗಳು ಹಾಗೂ ಮಾಸಿಕ ಬಸ್ ಪಾಸುಗಳನ್ನು ಹೊಂದಿರುವ ಸಾರ್ವಜನಿಕರಲ್ಲಿ ಮನವಿ, ಮುಷ್ಕರದಿಂದಾಗಿ ತಮಗಾದ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸುತ್ತದೆ ಎಂದು ತಿಳಿಸಲಾಗಿದೆ.

ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಯಡಿಯೂರಪ್ಪ ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಯಡಿಯೂರಪ್ಪ

ಮುಷ್ಕರದ ಅವಧಿಯ ದಿನಗಳಿಗೆ ಸರಿಸಮಾನವಾಗಿ, ಬಸ್ ಪಾಸುಗಳ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿಯನ್ನು ನೀಡಲಾಗಿದೆ.

ವರ್ಗಾವಣೆ ಇಲ್ಲ; ಮುಷ್ಕರ ನಿರತ ಕಾರ್ಮಿಕರು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಪದೇ ಪದೇ ಕರೆ ನೀಡುತ್ತಿದ್ದಾರೆ.

ಮುಷ್ಕರಕ್ಕೆ ಪ್ರಚೋದನೆ ನೀಡಿ, ಕರ್ತವ್ಯ ನಿರ್ವಹಿಸುತ್ತಿರುವ ಸಹ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿ, ಬಸ್ಸುಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ತೊಂದರೆ ಮಾಡುತ್ತಿರುವ ನೌಕರರ ಅಂತರ ನಿಗಮ ವರ್ಗಾವಣೆ ಕೋರಿಕೆಯನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ.

ಈಗಾಗಲೇ ಕೋರಿಕೆ ಮೇರೆಗೆ ಅಂತರ ವಿಭಾಗ ವರ್ಗಾವಣೆಗೊಂಡು,‌ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಈ ಅವಧಿಯಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಈ ಸಂಬಂಧ ‌ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿ, ಮೂಲ ವಿಭಾಗಕ್ಕೆ ಮರು ವರ್ಗಾವಣೆ ಮಾಡಲಾಗುವುದು ಎಂದು ನೌಕರರಿಗೆ ಎಚ್ಚರಿಕೆ ನೀಡಲಾಗಿದೆ.

Recommended Video

ಆರೋಗ್ಯ ಸಚಿವರ ಸ್ವಕ್ಷೇತ್ರದಲ್ಲಿ ಕೋವಿಡ್ ರೂಲ್ಸ್ ಉಲ್ಲಂಘನೆ | Oneindia Kannada

English summary
Due to transport employees strike monthly pass validity will be extended said KSRTC. Transport employees strike entered 5th day in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X