ಸಾರಿಗೆ ನೌಕರರ ಮುಷ್ಕರ; ಖಾಸಗಿ ಬಸ್‌ಗಳಿಗೆ ದರ ನಿಗದಿ ಮಾಡಿದ ಸರ್ಕಾರ
ಬೆಂಗಳೂರು, ಏಪ್ರಿಲ್ 8; ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದೆ. ಸರ್ಕಾರ ಮತ್ತು ನೌಕರರ ಪ್ರತಿಷ್ಠೆ ಮುಂದುವರೆದಿದ್ದು, ಮುಷ್ಕರ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಸರ್ಕಾರವೇ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶವನ್ನು ನೀಡಿದೆ. ಸರ್ಕಾರಿ ಬಸ್ ನಿಲ್ದಾಣದಿಂದಲೇ ಬಸ್‌ಗಳು ಜನರನ್ನು ವಿವಿಧ ಪ್ರದೇಶಗಳಿಗೆ ಕರೆದುಕೊಂಡು ಹೋಗುತ್ತಿವೆ.
ಸಾರಿಗೆ ನೌಕರರ ಮುಷ್ಕರ; ಸರ್ಕಾರವೇ ಹೊಣೆ ಎಂದ ಸಿದ್ದರಾಮಯ್ಯ
ಖಾಸಗಿ ಬಸ್‌ಗಳು ಹೆಚ್ಚಿನ ದರವನ್ನು ಕೇಳುತ್ತಿವೆ ಎಂಬ ಆರೋಪವಿತ್ತು. ಗುರುವಾರ ಜಯನಗರ ಆರ್‌ಟಿಓ ಕಚೇರಿಯಲ್ಲಿ ಸಭೆ ನಡೆಸಿದ ಸಾರಿಗೆ ಇಲಾಖೆ, ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಖಾಸಗಿ ಬಸ್‌ಗಳಿಗೆ ದರವನ್ನು ನಿಗದಿ ಮಾಡಿದೆ.
ಮುಷ್ಕರ; 6ನೇ ವೇತನ ಆಯೋಗದ ಬಗ್ಗೆ ಸರ್ಕಾರದ ನಿಲುವೇನು?
ದರ ಪಟ್ಟಿ ಹೀಗಿದೆ; ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಖಾಸಗಿ ಬಸ್‌ಗಳಿಗೆ ದರವನ್ನು ನಿಗದಿ ಮಾಡಲಾಗಲಾಗಿದೆ.
ಸಾರಿಗೆ ನೌಕರರ ಮುಷ್ಕರ; ರೈಲು ಓಡಿಸಲು ಸರ್ಕಾರದ ಪತ್ರ
ಬೆಂಗಳೂರು-ಹಾಸನ 209 ರೂ., ಬೆಂಗಳೂರು-ಚಿಕ್ಕಮಗಳೂರು 280 ರೂ., ಬೆಂಗಳೂರು-ಶಿವಮೊಗ್ಗ 298, ಬೆಂಗಳೂರು-ದಾವಣಗೆರೆ 312, ಬೆಂಗಳೂರು-ಚಿತ್ರದುರ್ಗ 237, ಬೆಂಗಳೂರು-ಹೊಸದುರ್ಗ 173, ಬೆಂಗಳೂರು-ಪಾವಗಡ 164, ಬೆಂಗಳೂರು-ಮಧುಗಿರಿ 111 ರೂ.ಗಳು.
ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರ
— oneindiakannada (@OneindiaKannada) April 8, 2021
ಖಾಸಗಿ ಬಸ್ ಗಳಿಗೆ ಕೊನೆಗೂ ದರ ನಿಗದಿ ಮಾಡಿದ ಸಾರಿಗೆ ಇಲಾಖೆ
ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್ ಗಳಿಗೆ ದರ ನಿಗದಿ#PrivateBus #Fare #KSRTC @KSRTC_Journeys pic.twitter.com/alYkbL1FCK
ಬೆಂಗಳೂರು-ಕೊರಟಗೆರೆ 96, ಬೆಂಗಳೂರು-ಗೌರಿಬಿದನೂರ 88, ಬೆಂಗಳೂರು-ಚಿಕ್ಕಬಳ್ಳಾಪುರ 69, ಬೆಂಗಳೂರು-ಬಾಗೆಪಲ್ಲಿ 117, ಬೆಂಗಳೂರು-ಕೋಲಾರ 76, ಬೆಂಗಳೂರು ಟು ಮುಳಬಾಗಿಲು 105 ರೂ. ಗಳು.
ಬೆಂಗಳೂರು-ತುಮಕೂರು 80, ಬೆಂಗಳೂರು-ಬಳ್ಳಾರಿ 360, ಬೆಂಗಳೂರು-ಧರ್ಮಸ್ಥಳ 343,
ಬೆಂಗಳೂರು-ಉಡುಪಿ 470, ಬೆಂಗಳೂರು-ಮಡಿಕೇರಿ 326, ಬೆಂಗಳೂರು-ಬಿಜಾಪುರ 678 ರೂ.ಗಳು.
ಬೆಂಗಳೂರು-ಮಂಗಳೂರು 401 ರೂ., ಬೆಂಗಳೂರು-ಕೊಪ್ಪಳ 462, ಬೆಂಗಳೂರು-ಕಲಬುರಗಿ 691,
ಬೆಂಗಳೂರು-ಹುಬ್ಬಳ್ಳಿ 489 ರೂ.ಗಳು.