ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ಮುಷ್ಕರ; ಆ ಒಂದು ಬೇಡಿಕೆ ಮಾತ್ರ ಸಾಧ್ಯವಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

|
Google Oneindia Kannada News

ಬೀದರ್, ಏಪ್ರಿಲ್ 6: ಕೊರೊನಾ ವೈರಸ್ ನೆಪವೊಡ್ಡಿ ಬೇರೆ ಬೇರೆ ರಾಜ್ಯಗಳಲ್ಲಿ ಸಾರಿಗೆ ಇಲಾಖೆಯ ನೌಕರರಿಗೆ ಶೇ.20ರಿಂದ ಶೇ.30ರಷ್ಟು ಸಂಬಳ ಕಟ್ ಮಾಡಿದ್ದಾರೆ. ಆದರೆ ನಾವು ಮಾಡಿಲ್ಲ. ನಾವು ಸಾರಿಗೆ ನೌಕರರರಿಗೆ ಸಂಬಳ ನೀಡಿದ್ದೇವೆ ಎಂದು ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಸಾರಿಗೆ ನೌಕರರು ಒಂಭತ್ತು ಬೇಡಿಕೆ ಇಟ್ಟಿದ್ದರು, ಅದರಲ್ಲಿ 8 ಬೇಡಿಕೆಗಳ ಈಡೇರಿಸಿದ್ದೇವೆ. ಸದ್ಯಕ್ಕೆ ಸಂಬಳ ಪರಿಷ್ಕರಣೆಯ ಒಂದು ಬೇಡಿಕೆ ಮಾತ್ರ ಬಾಕಿ ಇದೆ, ಸದ್ಯಕ್ಕೆ ಅದು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಸಾರಿಗೆ ನೌಕರರಿಗೆ ಎಚ್ಚರಿಕೆ: ಕೊವಿಡ್ ನಿಯಮ ಪಾಲಿಸಿ, ಇಲ್ಲವೇ 'ನೋ ವರ್ಕ್ ನೋ ಪೇ' ಜಾರಿಸಾರಿಗೆ ನೌಕರರಿಗೆ ಎಚ್ಚರಿಕೆ: ಕೊವಿಡ್ ನಿಯಮ ಪಾಲಿಸಿ, ಇಲ್ಲವೇ 'ನೋ ವರ್ಕ್ ನೋ ಪೇ' ಜಾರಿ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, "ಕೊರೊನಾ ಸೋಂಕು ಬರುವುದಕ್ಕಿಂತ ಮುಂಚೆ ನಮ್ಮ ಬಸ್ ಗಳಲ್ಲಿ ದಿನಕ್ಕೆ 1 ಕೋಟಿಯಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ, ಈಗ ಒಂದು ದಿನಕ್ಕೆ 60 ಲಕ್ಷ ಜನ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ' ಎಂದರು.

Karnataka Transport Employees Salary cant be increased: DCM Lakshman Savadi

Recommended Video

Semi LockDown New Rules : ಬೆಂಗಳೂರಿನಲ್ಲಿ ಕೊರೊನ ಕಾರಣ ಹೊಸ ನಿಯಮಗಳು ಹೀಗಿರಲಿವೆ | Oneindia Kannada

ಈಗ ಬರುತ್ತಿರುವ ಆದಾಯದಿಂದ ಸಂಬಳಕ್ಕೆ ಮತ್ತು ಇಂಧನಕ್ಕೂ ಹಣ ಕೊರತೆಯಾಗುತ್ತಿದೆ. ಈ ಹಣದ ಕೊರತೆ ನೀಗಿಸಲು ಸರಕಾದಿಂದ 1,962 ಕೋಟಿ ರೂ. ಹಣ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ. ಇನ್ನು ಇಂತಹ ಪರಿಸ್ಥಿತಿಯಲ್ಲಿ ಸಂಬಳ ಪರಿಷ್ಕರಣೆ ಮಾಡಿದರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ' ಎಂದು ಡಿಸಿಎಂ ಸವದಿ ಸ್ಪಷ್ಟನೆ ನೀಡಿದರು.

English summary
Transport employees had nine demands, of which 8 were fulfilled, Transport Minister Lakshman Savadi Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X