ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಸವಾರರೇ ಎಚ್ಚರ: ಮತ್ತೆ ಬರಲಿದೆ ದುಬಾರಿ ಟ್ರಾಫಿಕ್ ದಂಡ

|
Google Oneindia Kannada News

ಬೆಂಗಳೂರು, ಜನವರಿ 29: ವಾಹನ ಸವಾರರೆ ಎಚ್ಚರಗೊಳ್ಳಿ ಮತ್ತೆ ದುಬಾರಿ ಟ್ರಾಫಿಕ್ ದಂಡ ಜಾರಿಗೆ ತರಲಾಗುತ್ತಿದೆ.

Recommended Video

ವಾಹನ ಸವಾರರೇ ಎಚ್ಚರ ಎಚ್ಚರ!! | TRAFFIC | BANGALORE | ONEINDIA KANNADA

ರಾಜ್ಯದಲ್ಲಿ ಕಳೆದ ವರ್ಷ ವಿವಿಧ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುತ್ತಿದ್ದ 5 ಸಾವಿರ ರೂ., 10 ಸಾವಿರದಂತಹ ಭಾರಿ ಪ್ರಮಾಣದ ದಂಡವನ್ನು ವಿಧಿಸಲು ಮತ್ತೆ ರಾಜ್ಯ ಸರ್ಕಾರ ಸಿದ್ಧವಾಗಿದೆ.

ಕಂಬಿ ಹಿಂದೆ ಹಾಕುತ್ತೇವೆ: 'ಸ್ವಿಗ್ಗಿ'ಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ಕಂಬಿ ಹಿಂದೆ ಹಾಕುತ್ತೇವೆ: 'ಸ್ವಿಗ್ಗಿ'ಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದರದ ವಾಹನ ನೋಂದಣಿ ತೆರಿಗೆ ಇದೆ. ಕಡಿಮೆ ತೆರಿಗೆ ಇರುವ ರಾಜ್ಯಗಳಿಗೆ ತೆರಳಿ ಇತರೆ ರಾಜ್ಯಗಳ ವಾಹನಗಳು ನೋಂದಣಿ ಮಾಡಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಒಂದೇ ರೀತಿಯ ತೆರಿಗೆ ಪದ್ಧತಿ ಜಾರಿಗೆ ತರಲು ಕೇಂದ್ರ ಮುಂದಾಗಿದೆ.

ಕಳೆದ ವರ್ಷ ಈ ನಿಯಮ ಜಾರಿಗೊಂಡಿತ್ತು

ಕಳೆದ ವರ್ಷ ಈ ನಿಯಮ ಜಾರಿಗೊಂಡಿತ್ತು

ಕಳೆದ ವರ್ಷ ಭಾರೀ ಪ್ರಮಾಣದ ದಂಡ ವಿಧಿಸುವ ಕೇಂದ್ರದ ನಿಯಮ ಜಾರಿಗೆ ತಂದಿದ್ದ ರಾಜ್ಯ ಸರ್ಕಾರ ನಂತರದಲ್ಲಿ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ವಿರೋಧ ಹಾಗೂ ಒತ್ತಡಕ್ಕೆ ಮಣಿದು ದಂಡದ ಮೊತ್ತವನ್ನು ಕಡಿಮೆ ಮಾಡಿತ್ತು.

ಸಂಚಾರಿ ನಿಯಮ ಉಲ್ಲಂಘನೆಯಿಂದ ಸಾವು-ನೋವು ಹೆಚ್ಚಳ

ಸಂಚಾರಿ ನಿಯಮ ಉಲ್ಲಂಘನೆಯಿಂದ ಸಾವು-ನೋವು ಹೆಚ್ಚಳ

ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ದೇಶದಲ್ಲಿ ಸಾವು-ನೋವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಕಾರಣ ಭಾರಿ ಪ್ರಮಾಣದ ದಂಡ ವಿಧಿಸುವ ನಿಯಮ ಜಾರಿ ಮಾಡುವಂತೆ ಕೇಂದ್ರ ಸರ್ಕಾರ ಮನವರಿಕೆ ಮಾಡಿತ್ತು.

ಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶ

ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019

ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019

ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆ 2019 ಕಾಯ್ದೆಯನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಾಯ್ದೆ ಪ್ರಕಾರ ಜಾರಿಗೆ ತರಬೇಕು, ರಾಷ್ಟ್ರಪತಿಗಳ ಒಪ್ಪಿಗೆ ನೀಡದ ಹೊರತು ಯಾವುದೇ ಕಾರಣಕ್ಕೂ ವಾಪಸ್ ಪಡೆಯಬಾರದು.

ರಾಜ್ಯಕ್ಕೆ ಸಾವಿರ ಕೋಟಿ ನಷ್ಟ

ರಾಜ್ಯಕ್ಕೆ ಸಾವಿರ ಕೋಟಿ ನಷ್ಟ

ಕೇಂದ್ರ ಸರ್ಕಾರ ಒಂದು ದೇಶ, ಒಂದು ತೆರಿಗೆ ಅಡಿಯಲ್ಲಿ ವಾಹನಗಳ ನೋಂದಣಿ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಿದ್ದು, ಈ ಯೋಜನೆಯಿಂದ ರಾಜ್ಯಕ್ಕೆ ಸುಮಾರು ಒಂದು ಸಾವಿರ ಕೋಟಿ ರೂ ತೆರಿಗೆ ಕಡಿಮೆಯಾಗಲಿದೆ. ಈ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಕಾನೂನು ತರಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ

ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!

English summary
Motorists are waking up again and expensive traffic Penalty For Traffic Rules Violation are being enforced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X