ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?

|
Google Oneindia Kannada News

ಬೆಂಗಳೂರು, ಜೂನ್ 27: ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಪರಿಷ್ಕರಣೆ ಮಾಡಿದ್ದು, ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸುವವರಿಗೆ ಭಾರಿ ದಂಡ ಬೀಳಲಿದೆ.

ಕರ್ನಾಟಕ ಮೋಟಾರು ವಾಹನ ಕಾಯ್ದೆಯ ಹೊಸನಿಯಮ ಜಾರಿಗೊಳಿಸಿ ಆದೇಶ. ನಿಯಮ ಉಲ್ಲಂಘನೆಯ ದಂಡದ ದರವನ್ನು ಏರಿಕೆಗೊಳಿಸಿ ಆದೇಶ ಹೊರಡಿಸಿದ ಸರ್ಕಾರ.

ಫ್ಲೈಓವರ್ ವಿಲೀನ, ಹೆಬ್ಬಾಳ ಔಟರ್ ರಿಂಗ್ ರಸ್ತೆ ಮಧ್ಯೆ ಸಂಚಾರ ಸುಗಮಫ್ಲೈಓವರ್ ವಿಲೀನ, ಹೆಬ್ಬಾಳ ಔಟರ್ ರಿಂಗ್ ರಸ್ತೆ ಮಧ್ಯೆ ಸಂಚಾರ ಸುಗಮ

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದಂಡವನ್ನು ಪರಿಷ್ಕರಣೆ ಮಾಡಲಾಗಿದ್ದು, ಮಿತಿಗಿಂತಲೂ ವೇಗವಾಗಿ ಅಥವಾ ಅತಿಯಾದ ವೇಗವಾಗಿ ಗಾಡಿ ಚಲಾಯಿಸಿದರೆ 1000 ರೂಪಾಯಿ ದಂಡ ಬೀಳಲಿದೆ. ವೇಗವಾಗಿ ಗಾಡಿ ಚಲಾಯಿಸುವಂತೆ ಸೂಚಿಸಿದರೆ ಅದಕ್ಕೆ 500 ರೂಪಾಯಿ ದಂಡ ಬೀಳಲಿದೆ.

ಮೊಬೈಲ್‌ನಲ್ಲಿ ಮಾತನಾಡುತ್ತಾ ಚಲಾಯಿಸಿದರೆ ದಂಡ ಎಷ್ಟು?

ಮೊಬೈಲ್‌ನಲ್ಲಿ ಮಾತನಾಡುತ್ತಾ ಚಲಾಯಿಸಿದರೆ ದಂಡ ಎಷ್ಟು?

ಅಪಾಯಕಾರಿಯಾಗಿ ಗಾಡಿ ಚಲಾಯಿಸಿದರೆ, ಗಾಡಿ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿದರೆ, ಅತಿಯಾದ ಭಾರ ಹೊರಿಸಿ ಗಾಡಿ ಚಲಾಯಿಸಿದರೆ ಅಂತಹವರಿಗೆ 1000 ರೂಪಾಯಿ ದಂಡ ಬೀಳಲಿದೆ. ಎರಡನೇಯ ಬಾರಿ ನಿಯಮ ಉಲ್ಲಂಘಿಸಿದರೆ 2000 ದಂಡ ಬೀಳಲಿದೆ.

ವಿಮೆ ಇಲ್ಲದ ಗಾಡಿ ಚಲಾಯಿಸಿದರೆ ದಂಡವೆಷ್ಟು?

ವಿಮೆ ಇಲ್ಲದ ಗಾಡಿ ಚಲಾಯಿಸಿದರೆ ದಂಡವೆಷ್ಟು?

ವಿಮೆ (ಇನ್ಶೂರೆನ್ಸ್‌) ಇಲ್ಲದ ಗಾಡಿಯನ್ನು ಚಲಾಯಿಸಿದಲ್ಲಿ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ನೊಂದಣಿ ರಹಿತ ವಾಹನವನ್ನು ಓಡಿಸಿದಲ್ಲಿ ಬರೋಬ್ಬರಿ 5000 ದಂಡ ತೆರಬೇಕಾಗುತ್ತದೆ, ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 10000 ದಂಡ ತೆರಬೇಕಾಗುತ್ತದೆ.

ವಿಧಾನಸೌಧ ಬಳಿ ಹೆವಿ ಟ್ರಾಫಿಕ್, ಮೆಟ್ರೋದಲ್ಲಿ ಪ್ರಯಾಣಿಸಿದ ಡಿಕೆಶಿ ವಿಧಾನಸೌಧ ಬಳಿ ಹೆವಿ ಟ್ರಾಫಿಕ್, ಮೆಟ್ರೋದಲ್ಲಿ ಪ್ರಯಾಣಿಸಿದ ಡಿಕೆಶಿ

ಎಫ್‌ಸಿ ಇಲ್ಲದ ವಾಹನ ಓಡಿಸಿದರೆ ಎಷ್ಟು ದಂಡ?

ಎಫ್‌ಸಿ ಇಲ್ಲದ ವಾಹನ ಓಡಿಸಿದರೆ ಎಷ್ಟು ದಂಡ?

ಎಫ್‌ಸಿ ಇಲ್ಲದ ವಾಹನವನ್ನು ಚಲಾಯಿಸಿದಲ್ಲಿ 2000 ರೂಪಾಯಿ ದಂಡ ತೆರಬೇಕಾಗುತ್ತದೆ. ಎರಡನೇಯ ಬಾರಿಗೆ ಈ ನಿಯಮ ಉಲ್ಲಂಘಿಸಿದರೆ 5000 ದಂಡ ತೆರಬೇಕಾಗುತ್ತದೆ.

ನೋ ಪಾರ್ಕಿಂಗ್‌ ನಿಲ್ಲಿಸಿದರೆ ದಂಡ ಎಷ್ಟು?

ನೋ ಪಾರ್ಕಿಂಗ್‌ ನಿಲ್ಲಿಸಿದರೆ ದಂಡ ಎಷ್ಟು?

ರಸ್ತೆ ನಿಯಮದ ಉಲ್ಲಂಘನೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಅಪಾಯಕಾರಿಯಾಗಿ ವಾಹನ ನಿಲ್ಲಿಸುವುದು, ಇವುಗಳಿಗೆ 1000 ರೂಪಾಯಿ ದಂಡ ತೆರಬೇಕಾಗುತ್ತದೆ.

ಮೈಸೂರಿನಲ್ಲಿ ಕಳೆದ ವರ್ಷದಿಂದ 40 ಲಕ್ಷ ಟ್ರಾಫಿಕ್ ಉಲ್ಲಂಘನೆ ಪ್ರಕರಣ ದಾಖಲುಮೈಸೂರಿನಲ್ಲಿ ಕಳೆದ ವರ್ಷದಿಂದ 40 ಲಕ್ಷ ಟ್ರಾಫಿಕ್ ಉಲ್ಲಂಘನೆ ಪ್ರಕರಣ ದಾಖಲು

ಟಿಕೆಟ್‌ ಖರೀದಿ, ವಿತರಣೆಯಲ್ಲಿ ನಡೆಯುವ ನಿಯಮ ಉಲ್ಲಂಘನೆ

ಟಿಕೆಟ್‌ ಖರೀದಿ, ವಿತರಣೆಯಲ್ಲಿ ನಡೆಯುವ ನಿಯಮ ಉಲ್ಲಂಘನೆ

ಬಸ್‌ ನಲ್ಲಿ ಸಂಚರಿಸುವಾಗ ಟಿಕೆಟ್‌ ನೀಡುವ, ಖರೀದಿಸುವಲ್ಲಿ ಮಾಡುವ ತಪ್ಪುಗಳಿಗೂ ದಂಡವನ್ನು ಹೆಚ್ಚಿಸಲಾಗಿದ್ದು, ಟಿಕೆಟ್ ಪಡೆಯದಿದ್ದರೆ, ಟಿಕೆಟ್ ನೀಡದಿದ್ದರೆ, ಹಳೆಯ ಟಿಕೆಟ್ ಅಥವಾ ಸಂಬಂಧವಿರದ ಟಿಕೆಟ್ ನೀಡಿದರೆ, ಕಡಿಮೆ ಮೊತ್ತದ ಅಥವಾ ಹೆಚ್ಚಿನ ಮೊತ್ತದ ಟಿಕೆಟ್ ನೀಡಿದರೆ, ಲಗೇಜಿಗೆ ಟಿಕೆಟ್ ನೀಡದೇ ಇದ್ದರೆ ಇಷ್ಟಕ್ಕೂ ಸಮನಾಗಿ 500 ರೂಪಾಯಿ ದಂಡ ತೆರಬೇಕಾಗುತ್ತದೆ.

English summary
State government revised fine amount to traffic rules violation. There is hike in traffic rule violation fines. Vehicle drivers and owners should be more carefull.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X