ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪರೀಕ್ಷೆಗೆ ಹೋಗುವ ಜನರಿಗೆ ಸಲಹೆಗಳು

|
Google Oneindia Kannada News

ಬೆಂಗಳೂರು, ಜುಲೈ 16 : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಗುರುವಾರ ಒಂದೇ ದಿನ 4169 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದೆ.

Recommended Video

ಕೋಟಿ ಬೆಲೆಯ ಕಾರುಗಳನ್ನು ಬಿಟ್ಟು ಟ್ರ್ಯಾಕ್ಟರ್ ಏರಿದ ಡಿ ಬಾಸ್.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ -19 ಪರೀಕ್ಷೆಗೆ ಹೋಗುವ ಜನರಿಗೆ ಹಲವು ಸಲಹೆಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.

ಅಂಚೆ ಮೂಲಕ ಕೊವಿಡ್ 19 ಪ್ರತಿರೋಧಕ ಕಷಾಯ ಮನೆ ಮನೆಗೆ ಅಂಚೆ ಮೂಲಕ ಕೊವಿಡ್ 19 ಪ್ರತಿರೋಧಕ ಕಷಾಯ ಮನೆ ಮನೆಗೆ

ಕೋವಿಡ್ - 19 ಪರೀಕ್ಷೆ ಮಾಡಿಸಿಕೊಂಡ ಬಳಿಕ ಜನರು ಏನು ಮಾಡಬೇಕು?, ಸೋಂಕು ಇಲ್ಲವೆಂದು ವರದಿ ಬಂದರೆ ಏನು ಮಾಡಬೇಕು? ಎಂದು ಇಲಾಖೆ ಜನರಿಗೆ ಮಾಹಿತಿ ನೀಡಿದೆ.

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

Tpis For The People Who Go For Coronavirus Test

ಸೋಂಕು ಇಲ್ಲದ ವ್ಯಕ್ತಿಗಳು

* ಜ್ವರ, ಕೆಮ್ಮುಅಥವ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಆಪ್ತಮಿತ್ರ 14410 ನಂಬರ್‌ಗೆ ಕರೆ ಮಾಡುವುದು.

* ಅತ್ಯಾವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಹೊರ ಹೋಗುವುದನ್ನು ನಿಲ್ಲಿಸಿ

* ಹೊರ ಹೋಗುವಾಗ ಮಾಸ್ಕ್‌ ಧರಿಸಿರಿ

* ಸುರಕ್ಷಿತವಾಗಿರಿ, ಆರೋಗ್ಯವಾಗಿರಿ

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಕೋವಿಡ್ ಸೋಂಕು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಕೋವಿಡ್ ಸೋಂಕು

ಸೋಂಕಿತ ವ್ಯಕ್ತಿಗಳು

* ಉಸಿರಾಟದ ತೊಂದರೆ ಲಕ್ಷಣಗಳು ಇದ್ದಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಉಚಿತ ಅಂಬ್ಯುಲೆನ್ಸ್ ಸೇವೆಗಾಗಿ 108ಕ್ಕೆ ಕರೆ ಮಾಡಿ.

* ಯಾವುದೇ ಲಕ್ಷಣಗಳು ಇಲ್ಲವಾದಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಿ. ತಮ್ಮ ವೈದ್ಯಕೀಯ ಸ್ಥಿತಿಯನ್ನು ಪರಿಶೀಲಿಸಲು ಆದ್ಯತೆಯ ಮೇರೆಗೆ ಸರ್ಕಾರಿ ಅಧಿಕಾರಿಗಳು ಶೀಘ್ರದಲ್ಲೇ ತಮ್ಮನ್ನು ಸಂಪರ್ಕಿಸಲಿದ್ದಾರೆ.

* ಭಯ ಪಡಬೇಡಿ, ಸಮಾಧಾನದಿಂದ ಇರಿ

* ಶೇ 95ರಷ್ಟು ಕ್ಕಿಂತಲೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

* ಅಗತ್ಯವಿದ್ದಾಗ ಸಹಾಯವನ್ನು ಪಡೆಯಿರಿ. ನೀವು ಒತ್ತಡದಲ್ಲಿದ್ದರೆ, ಆತಂಕಕ್ಕೆ ಒಳಗಾಗಿದ್ದರೆ ನಿದ್ರೆ ಹಾಗೂ ಹೊಟ್ಟೆಯಲ್ಲಿ ತೊಂದರೆಯಿದ್ದರೆ 104ಕ್ಕೆ ಕರೆ ಮಾಡಿ 4 ಅನ್ನು ಒತ್ತಿ.

English summary
Karnataka health department tips for the people who will go for the Coronavirus test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X