ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬದಲಾವಣೆ: ಅಚ್ಚರಿ ಮೂಡಿಸಿದ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆ!

|
Google Oneindia Kannada News

ಬೆಂಗಳೂರು, ಜು. 23: ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಖಚಿತವಾಗಿದೆ. ರಾಜೀನಾಮೆ ಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಮಾನಸಿಕವಾಗಿ ಸಿದ್ಧವಾದಂತಿದೆ. ರಾಜಕೀಯ ಜಂಜಾಟಗಳ ಮಧ್ಯೆ ಬೆಂಗಳೂರು ಸಿಟಿ ರೌಂಡ್ಸ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರು ಅಭಿವೃದ್ಧಿಗೆ ತಮ್ಮ ಕೊಡುಗೆ ವೀಕ್ಷಣೆ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರ ದೃಷ್ಟಿ ಇದೀಗ ದೆಹಲಿಯತ್ತ ನೆಟ್ಟಿದೆ. ಮುಂದಿನ ಮುಖ್ಯಮಂತ್ರಿ ಯಾರೂ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ರಾಜ್ಯ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ವಿರೋಧ ಬಣದ ನಾಯಕ ಎಂದೇ ಬಿಂಬಿತವಾಗಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ 'ಬದಲಾವಣೆ' ಮಾತು ಆಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗುವುದನ್ನು ಸಚಿವ ಯೋಗೇಶ್ವರ್ ಅವರು ಉದ್ದೇಶಪೂರ್ವಕವಾಗಿಯೇ ತಪ್ಪಿಸಿದರು ಎಂಬ ಆರೋಪ ಎದುರಾಗಿತ್ತು. ಜೊತೆಗೆ ನಾಯಕತ್ವ ಬದಲಾವಣೆ ಕುರಿತು ಯೋಗೇಶ್ವರ್ ಅವರು ಪಕ್ಷದಲ್ಲಿ ಒತ್ತಡ ಹಾಕಿದ್ದು ಗುಟ್ಟಾಗಿ ಏನೂ ಉಳಿದಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಬದಲಾವಣೆ ಕುರಿತು ಸಿಪಿವೈ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮೊದಲ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ.

ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ

ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಕುರಿತು ಸಚಿವ ಸಿ.ಪಿ. ಯೋಗೇಶ್ವರ್ ಅವರು ಮೊದಲ ಸಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ನಂದಿ ಬೆಟ್ಟದಲ್ಲಿ ಮಾತನಾಡಿರುವ ಅವರು, "ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕುರಿತು ಸ್ವತಃ ಬಿ.ಎಸ್. ಯಡಿಯೂರಪ್ಪ ಅವರೇ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಹಿರಿಯರಿದ್ದಾರೆ. ಜೊತೆಗೆ ಅವರ ಬದಲಾವಣೆ ಕುರಿತು ನನಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಸ್ವತಃ ಮುಖ್ಯಮಂತ್ರಿಗಳೇ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟಪಡಿಸುತ್ತಿದ್ದಾರೆ. ನಾನೂ ಎಲ್ಲವನ್ನೂ ಗಮನಿಸುತ್ತೇದ್ದೇನೆ" ಎಂಬ ಕುತೂಹಲದ ಹೇಳಿಕೆ ಕೊಟ್ಟಿದ್ದಾರೆ.

ನನ್ನ ಸಮಸ್ಯೆ ಹೇಳಿಕೊಂಡಿದ್ದು ನಿಜ!

ನನ್ನ ಸಮಸ್ಯೆ ಹೇಳಿಕೊಂಡಿದ್ದು ನಿಜ!

ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಮಾತನ್ನು ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ. "ನನ್ನ ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾನು ಮಾತನಾಡಿದ್ದೇನೆ. ಜೊತೆಗೆ ನನಗೆ ಇತರ ಪಕ್ಷಗಳು ಕೊಟ್ಟಿರುವ ತೊಂದರೆಗಳ ಬಗ್ಗೆಯೂ ಮಾತನಾಡಿದ್ದೇನೆ. ಹೀಗಾಗಿ ನಮ್ಮ ವರಿಷ್ಠರು ಹಾಗೂ ಹಿರಿಯರು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದಿದ್ದಾರೆ.

ಇನ್ನು ಬೇರೆ ಪಕ್ಷಗಳಿಂದ ಬಂದು ಸಚಿವರಾದವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಅವರು, "ಬೇರೆ ಪಕ್ಷಗಳಿಂದ ಬಂದವರಿಗೆ ನಾಯಕತ್ವ ಬದಲಾವಣೆ ಆದ ಮೇಲೆ ಸಚಿವ ಸ್ಥಾನದ ಬಗ್ಗೆ ನನಗೆ ಗೊತ್ತಿಲ್ಲ. ಊಹಾಪೋಹಗಳಿಗೆ ಉತ್ತರ ನೀಡುವ ಹಕ್ಕು ನನಗಿಲ್ಲ. ಆದರೆ ಯಾರಿಗೂ ಕೂಡ ಮಂತ್ರಿಸ್ಥಾನ ಶಾಶ್ವತವಲ್ಲ" ಎನ್ನುವ ಮೂಲಕ ಯೋಗೇಶ್ವರ್ ಕುತೂಹಲ ಮೂಡಿಸಿದ್ದಾರೆ.

ಅವರು ನನ್ನ ರಾಜಕೀಯ ವಿರೋಧಿ

ಅವರು ನನ್ನ ರಾಜಕೀಯ ವಿರೋಧಿ

ಇನ್ನು ಯಡಿಯೂರಪ್ಪ ಅವರೊಂದಿಗಿನ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುರಿತು ಯೋಗೇಶ್ವರ್ ಮಾತನಾಡಿದ್ದಾರೆ. "ಕುಮಾರಸ್ವಾಮಿ ಅವರು ನನ್ನ ರಾಜಕೀಯ ವಿರೋಧಿ. ಅವರ ನಿಲುವಿನಲ್ಲಿ ಸದಾ ದ್ವಂದ್ವ ಇರುತ್ತದೆ. ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಹೋಗಿ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನಂತರ ಯಡಿಯೂರಪ್ಪ ಅವರನ್ನೇ ದೂರುತ್ತಾರೆ. ಹೀಗಾಗಿ ಕುಮಾರಸ್ವಾಮಿ ಅವರನ್ನು ದೂರ ಇಡಿ, ಅವರನ್ನು ನಂಬಬೇಡಿ, ಅವರನ್ನು ಹತ್ತಿರ ಇಟ್ಟುಕೊಳ್ಳಬೇಡಿ ಎಂದು ನಾನು ಹೇಳಿದ್ದೇನೆ. ನಾನಷ್ಟೇ ಅಲ್ಲ ಪಕ್ಷವೂ ಯಡಿಯೂರಪ್ಪ ಅವರಿಗೆ ಹೇಳಿದೆ" ಎಂದಿದ್ದಾರೆ.


"ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಎಲ್ಲ ಕೆಲಸ ಮಾಡಿಸಿಕೊಂಡು, ಮತ್ತೆ ಅವರನ್ನೇ ಟೀಕಿಸುತ್ತಾರೆ. ಇದು ಯಾವ ನ್ಯಾಯ?" ಎಂದು ಯೋಗೇಶ್ವರ್ ಪ್ರಶ್ನಿಸಿದರು.

ಅಚ್ಚರಿಯ ಮಾತು ಹೇಳಿದ ಯೋಗೇಶ್ವರ್!

ಅಚ್ಚರಿಯ ಮಾತು ಹೇಳಿದ ಯೋಗೇಶ್ವರ್!

"ರಾಜ್ಯದಲ್ಲಿ ಇನ್ಮುಂದೆ ಒಂದೇ ಪಕ್ಷದ ಸರ್ಕಾರ ಇರುತ್ತದೆ" ಎಂದು ಹೇಳುವ ಮೂಲಕ ಸಚಿವ ಸಿ.ಪಿ. ಯೋಗೇಶ್ವರ್ ಕುತೂಹಲ ಮೂಡಿಸಿದ್ದಾರೆ. ಜೊತೆಗೆ ಸಂಸದ ಡಿ.ಕೆ. ಸುರೇಶ್ ಅವರು ತಮ್ಮನ್ನು ಸಿಡಿ ಯೋಗೇಶ್ವರ್ ಎಂದು ಕರೆದಿದ್ದರ ಬಗ್ಗೆ ಪ್ರತಿಕ್ರಿಯೆ ಕೊಟ್ಟು, "ಡಿಕೆ ಸುರೇಶ್ ಅವರಿಗೆ ನಾನು ಸಹ ಕೆಡಿ ಸುರೇಶ್ ಎಂದು ಕರೆಯಬಹುದು. ಈ ತರಹದ ವಿರೋಧ ನಾನು ಎದುರಿಸುತ್ತೇನೆ. ನನಗೆ ಕಪ್ಪುಚುಕ್ಕೆ ತರಲು ಸುರೇಶ್ ಅವರು ಬಯಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಅಧಿಕಾರವನ್ನು ಹಿಡಿಯಲು ಹೊಸ ಬಟ್ಟೆಗಳನ್ನು ಹೊಲಿಸಿಕೊಂಡಿದ್ದರು. ಇದೀಗ ರಾಜ್ಯದಲ್ಲಿ ರಾಜಕೀಯ ಮರುಹಂಚಿಕೆ ಆಗುತ್ತಿದೆ. ಹೀಗಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಆದರಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಪ್ರವಾಸೋದ್ಯಮ ಸಚಿವ ಸಿಪಿವೈ ಪ್ರತಿಕ್ರಿಯೆ ನೀಡಿದರು.

English summary
Tourism Minister Yogeshwar makes curious statement on Yediyurappa's change. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X