ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಸಾಲ ರೈಟ್ ಆಫ್ ಅಂದ್ರೇನು: ಕುಮಾರಸ್ವಾಮಿಗೆ ಸಿ.ಟಿ.ರವಿ ಮಾಡಿದ ಪಾಠ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ವಿವಿಧ ಬ್ಯಾಂಕುಗಳಿಂದ ತೆಗೆದುಕೊಂಡಿದ್ದ ಸಾಲಗಳನ್ನು ಮರು ಪಾವತಿಸದೇ, ದೇಶದಲ್ಲೇ ಇರುವ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿಗಳ ಸಾಲವನ್ನು ರಿಸರ್ವ್ ಬ್ಯಾಂಕ್ ರೈಟ್ ಆಫ್ ಮಾಡಿರುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

Recommended Video

ತಿನ್ನೋಕೆ ಊಟ ಇಲ್ಲದೆ ಮಕ್ಕಳ ಮುಂದೆ ಕಣ್ಣೀರು ಹಾಕಿದ ತಾಯಿ..! Chikkamagaluru | C T Ravi

ರಿಸರ್ವ್ ಬ್ಯಾಂಕಿನ ಈ ಕ್ರಮ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಎಚ್ಡಿಕೆ, "ಕೊರೊನಾದಿಂದ ಇಡೀ ದೇಶವೇ ನಲುಗುತ್ತಿರುವಾಗ, ಇಂತಹ ದೊಡ್ಡ ತಿಮಿಂಗಿಲಗಳೇ, ದೇಶದ ಆರ್ಥಿಕತೆಗೆ ತೊಂದರೆಯನ್ನುಂಟು ಮಾಡುತ್ತಿಲ್ಲವೇ" ಎಂದು ಟ್ವೀಟ್ ನಲ್ಲಿ ಬರೆದಿದ್ದರು.

ಉದ್ದಿಮೆದಾರರ ಸಾಲ WRITTEN OFF: ರಾಜಕೀಯ ನಾಯಕರ ಪ್ರತಿಕ್ರಿಯೆ ಉದ್ದಿಮೆದಾರರ ಸಾಲ WRITTEN OFF: ರಾಜಕೀಯ ನಾಯಕರ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ,"ಅಣ್ಣಾ.. ಎರಡೆರಡು ಬಾರಿ ನೀವು ಮುಖ್ಯಮಂತ್ರಿಯಾಗಿದ್ದವರು. ರೈಟ್ ಆಫ್ ಮತ್ತು ವೇವ್ ಆಫ್ ನಡುವಿನ ವ್ಯತ್ಯಾಸವನ್ನು ಮೊದಲು ತಿಳಿದುಕೊಳ್ಳಿ".

Tourisam Minister CT Ravi Reply To HD Kumaraswamy Over Bank Loan Write Off

"ಕುಮಾರಣ್ಣ.. ಯಾವುದೇ ಪ್ರೈಮರಿ ಶಾಲೆಯ ಮಕ್ಕಳನ್ನು ಕೇಳಿ ನೋಡಿ. ಕನ್ನಡಿಗರಿಗೆ ಇನ್ನೂ ನಿಮ್ಮ ಮೇಲೆ ಅಲ್ವಸ್ವಲ್ಪ ಗೌರವ ಅನ್ನೋದು ಇದೆ. ರಾಹುಲ್ ಗಾಂಧಿಯ ರೀತಿಯಲ್ಲಿ ಬೇಕಾಬಿಟ್ಟಿ ಹೇಳಿಕೆಯನ್ನು ನೀಡಿ, ನಿಮ್ಮ ಮೇಲಿರುವ ಗೌರವ ಕಮ್ಮಿಯಾಗದಂತೆ ನೋಡಿಕೊಳ್ಳಿ" ಎಂದು ಸಚಿವ ರವಿ, ಎಚ್ಡಿಕೆ ಟ್ವೀಟಿಗೆ ರಿಪ್ಲೈ ಮಾಡಿದ್ದಾರೆ.

ಭಾರತದ ಕೃಷಿ ಮತ್ತು ಕೈಗಾರಿಕೆಗೆ 'ಶಕ್ತಿ' ತುಂಬಲು 50,000 ಕೋಟಿ ಭಾರತದ ಕೃಷಿ ಮತ್ತು ಕೈಗಾರಿಕೆಗೆ 'ಶಕ್ತಿ' ತುಂಬಲು 50,000 ಕೋಟಿ

"ನಾ ಖಾವೂಂಗ, ನಾ ಖಾನೇ ದೂಂಗಾ ಎನ್ನುವ ಹೇಳಿಕೆ ಇನ್ನೊಂದು ಜುಮ್ಲಾವೇ? ವಿಜಯ್ ಮಲ್ಯ, ಚೋಕ್ಸಿ, ಜುಂಜುನ್ವಾಲ ಮುಂತಾದವರು ಕೇಂದ್ರ ಸರಕಾರಕ್ಕೆ ಬಹಳ ಆಪ್ತರೋ ಏನೋ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

ಉದ್ಯಮಿ ಮೆಹುಲ್ ಚೋಕ್ಸಿ, ವಿಜಯ್‌ ಮಲ್ಯ ಅವರ ಕಂಪನಿ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರೂ ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್‌ ಬ್ಯಾಂಕ್ ರೈಟ್ ಆಫ್ ಮಾಡಿತ್ತು.

English summary
Tourisam Minister CT Ravi Reply To HD Kumaraswamy Over Bank Loan Write Off
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X