ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿಗೆ ಅನುಚಿತ ಸ್ಪರ್ಶ ಕೂಡ ಲೈಂಗಿಕ ದೌರ್ಜನ್ಯ ವ್ಯಾಖ್ಯಾನ ವ್ಯಾಪ್ತಿಗೆ- ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು. ಜೂ.12: ಮಗುವಿನೊಡನೆ ಅನುಚಿತವಾಗಿ ಸ್ಪರ್ಶಿಸುವುದೂ ಕೂಡ ಪೋಕ್ಸೋ ಕಾಯಿದೆ 2012ರ ಸೆಕ್ಷನ್ 7ರಡಿ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೈಕೋರ್ಟ್ ಪೋಕ್ಸೋ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ.ಕೋಲಾರದ ಮಾಲೂರು ತಾಲೂಕಿನ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪೋಕ್ಸೋ ಕಾಯಿದೆ 2012ರ ಸೆಕ್ಷನ 7 ರ ವ್ಯಾಪ್ತಿಯ 'ಲೈಂಗಿಕ ದೌರ್ಜನ್ಯ' ವ್ಯಾಪ್ತಿಗೆ ಎರಡು ಭಾಗಗಳು ಒಳಪಡುತ್ತವೆ. ಒಂದನೇ ಭಾಗದಲ್ಲಿ ಲೈಂಗಿಕ ಉದ್ದೇಶದಿಂದ ನಿರ್ದಿಷ್ಟ ಅಂಗಗಳನ್ನು ಸ್ಪರ್ಶಿಸುವುದು ಮತ್ತು ಎರಡನೇ ಭಾಗ, ಅತ್ಯಾಚಾರವಲ್ಲದೆ ಲೈಂಗಿಕ ಉದ್ದೇಶದಿಂದ ಇತರೆ ಅಂಗಗಳನ್ನು ಸ್ಪರ್ಶಿಸುವುದು. ಈ ಪ್ರಕರಣದಲ್ಲಿ ಎರಡನೇ ಭಾಗ ಅನ್ವಯಿಸುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಮಗು ಕೂಡ ಆರೋಪಿಯು ತನ್ನ ದೇಹದ ಯಾವ್ಯಾವ ಅಂಗಗಳನ್ನು ಸ್ಪರ್ಶಿಸಿದರೆಂದು ಹೇಳಿದೆ. ಹಾಗಾಗಿ ಕ್ರಿಮಿನಲ್ ಕೇಸ್ ರದ್ದು ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.

ಫೋಕ್ಸೋ ಪ್ರಕರಣ: ಸಂತ್ರಸ್ತೆಯ ಪಾಟೀ ಸವಾಲಿಗೂ ಅವಕಾಶವಿದೆಯೆಂದ ಹೈಕೋರ್ಟ್ ಫೋಕ್ಸೋ ಪ್ರಕರಣ: ಸಂತ್ರಸ್ತೆಯ ಪಾಟೀ ಸವಾಲಿಗೂ ಅವಕಾಶವಿದೆಯೆಂದ ಹೈಕೋರ್ಟ್

ವಿಚಾರಣೆ ಆರಂಭವಾಗಿ ಮೂರು ವರ್ಷಗಳ ನಂತರ ಆರೋಪ ಪಟ್ಟಿಯಲ್ಲಿ ಸೆಕ್ಷನ್ 7 ಸೇರ್ಪಡೆ ಮಾಡಿರುವುದು ಸರಿಯಲ್ಲವೆಂಬ ಅರ್ಜಿದಾರರು ಆಕ್ಷೇಪವನ್ನೂ ನ್ಯಾಯಾಲಯ ತಳ್ಳಿಹಾಕಿದೆ.

 Touching of Child Inappropriately Will Also Fall in Sexual Assault Definition: HC

ಸಿಆರ್ ಪಿಸಿ ಸೆಕ್ಷನ್ 316 (1)ರ ಪ್ರಕಾರ ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನ ಯಾವುದೇ ಹಂತದಲ್ಲಿ ಬೇಕಾದರೂ ಆರೋಪಪಟ್ಟಿಯಲ್ಲಿ ಮಾರ್ಪಾಡು ಮಾಡಿ ಅಗತ್ಯ ಅಂಶಗಳನ್ನು ಸೇರಿಸಬಹುದಾಗಿದೆ. ಆ ರೀತಿ ಆರೋಪಪಟ್ಟಿಯಲ್ಲಿ ಬದಲಾವಣೆ ಮಾಡುವ ಅಕಾರವಿದ್ದು, ಅದನ್ನು ಯಾರೂ ಕುಸಿದುಕೊಳ್ಳಲಾಗುದು ಎಂದೂ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಪಾಟೀ ಸವಾಲಿಗೆ ಒಳಪಡಿಸಬಹುದು: ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತ ಮಗುವನ್ನು ಪದೇಪದೆ ಪಾಟೀ ಸವಾಲಿಗೆ ಒಳಪಡಿಸಬಾರದು ಎಂಬ ನಿಯಮವಿದೆಯಾದರೂ, ಸಂತ್ರಸ್ತರಿಗೆ 18 ವರ್ಷ ತುಂಬಿದ ಅವರನ್ನು ಮತ್ತೆ ಪಾಟೀ ಸವಾಲಿಗೆ ಒಳಪಡಿಸಲು ಯಾವುದೇ ಅಡ್ಡಿಯಿಲ್ಲ ಎಂದು ಆದೇಶಿಸಿದೆ.

ಪೋಕ್ಸೋ ಪ್ರಕರಣವೊಂದರ ಸಂತ್ರಸ್ತೆಯನ್ನು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 311ರ ಪ್ರಕಾರ ಮರು ವಿಚಾರಣೆಗೆ ಕರೆಸಿಕೊಳ್ಳಬೇಕೆಂದು ಕೋರಿ ಆರೋಪಿ ಮಹಮ್ಮದ್ ಅಲಿ ಅಕ್ಬರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪೋಕ್ಸೋ ಪ್ರಕರಣಗಳ ಸಂತ್ರಸ್ತರನ್ನು ಮತ್ತ ಮತ್ತೆ ನ್ಯಾಯಾಲಯಗಳಿಗೆ ಕರೆಸಿಕೊಂಡು ವಿಚಾರಣೆಗೊಳಪಡಿಸಬಾರದು ಎಂದು ಕಾಯ್ದೆಯ ಸೆಕ್ಷನ್ 33(5) ಹೇಳುತ್ತದೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆಯ ವಯಸ್ಸು 18 ವರ್ಷ ದಾಟಿರುವ ಕಾರಣ ಸೆಕ್ಷನ್ 33 (5) ದುರ್ಬಲಗೊಳ್ಳುತ್ತದೆ. ಆದ್ದರಿಂದ, ಆರೋಪಿಯ ಮನವಿಯಂತೆ ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಮತ್ತೆ ಅವಕಾಶವಿಲ್ಲ: ಆರೋಪಿಯ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ನಿರಾಕರಿಸಿ 2022ರ ಏ.7ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಜತೆಗೆ, ಸೆಷನ್ಸ್ ಕೋರ್ಟ್ ನಿಗದಿಪಡಿಸುವ ದಿನಾಂಕದಂದು ಆರೋಪಿಯು ಸಂತ್ರಸ್ತೆಯನ್ನು ಹೆಚ್ಚುವರಿ ಪಾಟೀ ಸವಾಲಿಗೆ ಒಳಪಡಿಸಬಹುದಾಗಿದೆ. ಇದೇ ಅಂತಿಮ ಅವಕಾಶವಾಗಿದ್ದು, ಸೆಷನ್ ಜಡ್ಜ್ ನಿಗದಿಪಡಿಸುವ ದಿನವೇ ಪಾಟೀ ಸವಾಲು ಪೂರ್ಣಗೊಳಿಸಬೇಕು. ಆರೋಪಿಯು ಸಿಆರ್‌ಪಿಸಿ ಸೆಕ್ಷನ್ 311ರ ಅಡಿಯಲ್ಲಿ ಮತ್ತೆ ಮತ್ತೆ ಅವಕಾಶ ಕೋರಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮಕ್ಕಳ ಸಹಾಯವಾಣಿ: 1098

English summary
Karnataka High Court in its latest judgement said Inappropriately touching a child can also be considered under Section 7 of the Protection of Children from Sexual Offences Act (Pocso) Act 2012
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X