• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಟೋಬರ್ ತಿಂಗಳ ಟಾಪ್ ಟ್ರೆಂಡಿಂಗ್ ವಿಡಿಯೋಗಳು

By Mahesh
|

ಸುದ್ದಿ ಸ್ವಾರಸ್ಯಗಳ ಜತೆಗೆ ವೈವಿಧ್ಯಮಯ ವಿಡಿಯೋಗಳ ಮೂಲಕ ಓದುಗರನ್ನು ತಲುಪುವ ಸಾಧ್ಯತೆಯನ್ನು ಒನ್ ಇಂಡಿಯಾ ಕನ್ನಡ ಮೈಗೂಡಿಸಿಕೊಂಡಿದೆ.

ದೃಶ್ಯ-ಶ್ರವ್ಯ ಪ್ರಪಂಚದಲ್ಲಿ ಇನ್ನೂ ಪುಟ್ಟ ಹೆಜ್ಜೆ ಇಡುತ್ತಿರುವ ಒನ್ಇಂಡಿಯಾ ಕನ್ನಡದ ಯೂಟ್ಯೂಬ್ ಚಾನೆಲ್/ಡೈಲಿ ಮೋಷನ್ ನಲ್ಲಿ ಅಕ್ಟೋಬರ್ 2017 ತಿಂಗಳಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳು ಇಲ್ಲಿವೆ

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡು ಸುದ್ದಿ ಹಾಗೂ ಸಿನಿಮಾ ಜಗತ್ತಿನ ಆಗು ಹೋಗುಗಳನ್ನು ನಿಮ್ಮ ಮುಂದಿಡುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ.

ಒನ್ಇಂಡಿಯಾ ಯೂಟ್ಯೂಬ್ ಚಾನೆಲ್ ಗೆ ಚಂದಾದಾರರಾಗುವುದು ಹೇಗೆ

* ನಿಮ್ಮ ಬ್ರೌಸರ್ ನಲ್ಲಿ(ಡೆಸ್ಕ್ ಟಾಪ್ ಅಥವಾ ಮೊಬೈಲ್) ಗೂಗಲ್ ಸರ್ಚ್ ಓಪನ್ ಮಾಡಿ

* oneindia kannada youtube channel ಎಂದು ಟೈಪಿಸಿ

* ಮೊದಲಿಗೆ ಬರುವ oneindia kannada- youtube ಲಿಂಕ್ ಕ್ಲಿಕ್ ಮಾಡಿ

* ನಿಮ್ಮ ಮುಂದೆ ಕಾಣುವ ಪುಟದ ಬಲತುದಿಯಲ್ಲಿರುವ ಕೆಂಪು ಬಣ್ಣದ Subscribe ಬಟನ್ ಒತ್ತಿ.

ಅಂದ ಹಾಗೆ, ನೀವು ಚಂದಾದಾರರಾಗಲು ಯಾವುದೇ ಒಂದು ಜೀಮೇಲ್ ಐಡಿಯಿಂದ ಲಾಗಿನ್ ಆಗಿದ್ದರೆ ಸಾಕು.

ಒನ್ಇಂಡಿಯಾ ಕನ್ನಡ ಯೂಟ್ಯೂಬ್ ಚಾನೆಲ್ ನೇರ ಲಿಂಕ್ ಇಲ್ಲಿದೆ (ಒನ್ ಇಂಡಿಯಾ ಸುದ್ದಿ) ಟಾಪ್ ಟ್ರೆಂಡಿಂಗ್ ವಿಡಿಯೋಗಳನ್ನು ಮುಂದೆ ನೋಡಿ...

ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯ

ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯ

ಇಲ್ಲಿ ಓದಿ

ವಿಡಿಯೋ ನೋಡಲು ಕ್ಲಿಕ್ ಮಾಡಿ

ಸ್ವಾಮೀಜಿಯ ಪುತ್ರನ ರಾಸಲೀಲೆ ಬಯಲು

ಸ್ವಾಮೀಜಿಯ ಪುತ್ರನ ರಾಸಲೀಲೆ ಬಯಲು

ಯಲಹಂಕದ ಮದ್ದೇವಣಾಪುರ ಮಠದ ಸ್ವಾಮೀಜಿಯ ಪುತ್ರನ ರಾಸಲೀಲೆಯ ವಿಡಿಯೋ ಬಯಲಾಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಮದ್ದೇವಣಾಪುರ ಮಠದ ಪೀಠಾಧಿಪತಿ ಶೀವಾಚರ್ಯ ಸ್ವಾಮೀಜಿ ಪುತ್ರ ದಯಾನಂದ ಅಲಿಯಾಸ್ ನಂಜೇಶ್ವರ ಸ್ವಾಮೀಜಿ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯ ವಿವಿಧ ಮಾಧ್ಯಮಗಳಲ್ಲಿ ಹರಿದಾಡಿದ್ದು, ಭಾರಿ ಸದ್ದು ಮಾಡಿತ್ತು. ವಿಡಿಯೋ ಕ್ಲಿಪ್ಪಿಂಗ್ ನೋಡಿ

ಸಿಲಿಕಾನ್ ಸಿಟಿಯಲ್ಲಿ ಅಂಬುಲೆನ್ಸ್ ದುರ್ಬಳಕೆ

ಸಿಲಿಕಾನ್ ಸಿಟಿಯಲ್ಲಿ ಅಂಬುಲೆನ್ಸ್ ದುರ್ಬಳಕೆ

ಬೆಂಗಳೂರಿನಲ್ಲಿ ಅಂಬುಲೆನ್ಸ್ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ..ಅಂಬುಲೆನ್ಸ್ ನಲ್ಲಿ ರೋಗಿ ಇರಲಿಲ್ಲದಿದ್ದರೂ ಸೈರನ್ ಹಾಕಿಕೊಂಡು ಹೋಗುತ್ತಾರೆ. ಖಾಸಗಿ ಆಸ್ಪತ್ರೆ ಅಂಬುಲೆನ್ಸ್ ಚಾಲಕನೊಬ್ಬ, ರೋಗಿಗಳ ಬದಲು ವಿದ್ಯಾರ್ಥಿಗಳ ಕರೆದೊಯುತ್ತಿರುವ ಅಂಬುಲೆನ್ಸ್ ಟ್ರಾಫಿಕ್ ನಲ್ಲಿ ಕಂಡು ಬಂದಿತ್ತು. ಪ್ರತ್ಯಕ್ಷದರ್ಶಿಯಿಂದ ಮೊಬೈಲ್ ನಲ್ಲಿ ಸೆರೆಹಿಡಿದ ದೃಶ್ಯಗಳು ಇಲ್ಲಿವೆ ನೋಡಿ

ತುಳಸಿ ವಿವಾಹದ ವಿಡಿಯೋ, ಹಬ್ಬದ ಮಹತ್ವ

ತುಳಸಿ ವಿವಾಹದ ವಿಡಿಯೋ, ಹಬ್ಬದ ಮಹತ್ವ

ಪ್ರತಿವರ್ಷ ಉತ್ಥಾನ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಹಿಗ್ಗುವವರು ನಾವು!ನ.1, ಬುಧವಾರದಂದು ಉತ್ಥಾನ ದ್ವಾದಶಿ. ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ತುಳಸಿ ವಿವಾಹ ಮಾಡುವ ಪರಿಪಾಠ ನಮ್ಮಲ್ಲಿ ಎಂದಿನಿಂದಲೋ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತುಳಸಿ ವಿವಾಹದ ಕುರಿತ ಒಂದಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ

ಪೇದೆಯ ಕರ್ತವ್ಯ ನಿಷ್ಠೆ

ಪೇದೆಯ ಕರ್ತವ್ಯ ನಿಷ್ಠೆ

ಮೈಸೂರು: ಸಿಎಂ ಆಗಮಿಸುತ್ತಿದ್ದರೂ ಆಂಬ್ಯೂಲೆನ್ಸ್ ಗೆ ದಾರಿ ಮಾಡಿಕೊಟ್ಟ ಪೇದೆ. ನಿಜಕ್ಕೂ ಪೇದೆಯ ಕರ್ತವ್ಯ ನಿಷ್ಠೆಯನ್ನು ಮೆಚ್ಚಲೇಬೇಕು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ತಿಳಿಯಲು ಈ ವೀಡಿಯೋ ನೋಡಿ.

English summary
Top viewed and trending videos of October 2017 Month on Oneindia Kannada. The list includes stories on Tulsi Festival, Mysore Police constable dedication, Yelahanka junior Pontiff's scam, Ambulance misuse and news across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more