• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ತಿಂಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ 15 ಸುದ್ದಿಗಳಿವು

By Mahesh
|
Google Oneindia Kannada News

ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಗ್ರಹ ಇಲ್ಲಿದೆ. ಕರ್ನಾಟಕ ಜಿಲ್ಲಾಸುದ್ದಿ, ಕ್ರೀಡೆ, ಉದ್ಯೋಗ, ಜ್ಯೋತಿಷ್ಯ, ರಾಜಕೀಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳು ಇದರಲ್ಲಿ ಸೇರಿವೆ.

ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುದ್ದಿಗಳಿವುಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುದ್ದಿಗಳಿವು

ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪೈಕಿ ವೈವಿಧ್ಯಮಯ ಸುದ್ದಿಗಳ ಜತೆ ಸಾರ್ವಜನಿಕರ ಟೀಕೆ ಟಿಪ್ಪಣಿಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗಿದೆ. ತೀರಾ ಕೆಟ್ಟ ಭಾಷೆ ಬಳಕೆ ಕಾಮೆಂಟ್ ಗಳನ್ನು ಅರಗಿಸಿಕೊಂಡು, ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.

ಕಳೆದ ವಾರ ಅತೀ ಹೆಚ್ಚು ಓದಲಾದ ಅತ್ಯುತ್ತಮ ಲೇಖನಗಳು

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ).

ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ನೋಡಬಹುದು.

ಮಾಜಿ ಸಚಿವ ಮೇಟಿ ಪ್ರಸಂಗ

ಮಾಜಿ ಸಚಿವ ಮೇಟಿ ಪ್ರಸಂಗ

ಮಾಜಿ ಸಚಿವ ಎಚ್ ವೈ ಮೇಟಿ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಪಿಎ ಸಂತೋಷ್ ಅವರಿಗೆ ಸಿಐಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ತಂದಿತು..ಈ ಸುದ್ದಿ ಬಿಸಿ ಇನ್ನೂ ಜಾರಿಯಲ್ಲಿದೆ

ಗುಜರಾತ್ ರಾಜ್ಯ ಸಭೆ ಚುನಾವಣೆ

ಗುಜರಾತ್ ರಾಜ್ಯ ಸಭೆ ಚುನಾವಣೆ

ಗುಜರಾತಿನಿಂದ ರಾಜ್ಯಸಭೆಗೆ ನಡೆದ ಮೂರು ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಹ್ಮದ್ ಪಟೇಲ್ ಅವರಿಗೆ ಪೂರಕವಾದ ಎರಡು ಮತಗಳ ಕುರಿತು ಬಂದ ಲೇಖನ ಹೆಚ್ಚು ಗಮನ ಸೆಳೆಯಿತು.

ಆಳ್ವಾಸ್ ಕಾಲೇಜಿನ ಕಾವ್ಯ ಸಾವು

ಆಳ್ವಾಸ್ ಕಾಲೇಜಿನ ಕಾವ್ಯ ಸಾವು

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಕಾವ್ಯ ಸಾವಿನ ಸುದ್ದಿ ಪಡೆದ ರೋಚಕತೆ, ತಿರುವು, ಪ್ರತಿಭಟನೆಗಳ ಬಗ್ಗೆ ಬಂದ ಸುದ್ದಿ

ಬ್ರಾಹ್ಮಿನ್ ಲಂಚ್

ಬ್ರಾಹ್ಮಿನ್ ಲಂಚ್

ಆನ್ ಲೈನ್ ಹಾಗೂ ಫೋನ್ ಮೂಲಕ ಆರ್ಡರ್ ಪಡೆದು ಶುದ್ಧ ಆಹಾರ ಒದಗಿಸಲು ಮುಂದಾಗಿರುವ ಯುವಕರ ಬಗ್ಗೆ ಬರೆದ ಲೇಖನ

ಬ್ರಾಹ್ಮಣ ಮಹಾಸಭಾ ಗರಂ

ಬ್ರಾಹ್ಮಣ ಮಹಾಸಭಾ ಗರಂ

ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ಅಸಭ್ಯವಾಗಿ ಪ್ರಸಂಗವನ್ನು ಮಾಡಿಸಿ, ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ಬ್ರಾಹ್ಮಣ ಮಹಾಸಭಾದವರು ಜೀ ಕನ್ನಡ ವಾಹಿನಿಯ ಕ್ಷಮೆ ಆಗ್ರಹಿಸಿದರು.

ಬೆಳ್ತಂಗಡಿಯ ಬಾರ್

ಬೆಳ್ತಂಗಡಿಯ ಬಾರ್

ಕೇರಳದಲ್ಲಿ ಕಂಡು ಬಂದ ಚಾಲಾಕಿತನ ದಕ್ಷಿಣ ಕನ್ನಡದ ಬೆಳ್ತಂಗಡಿಗೂ ಹಬ್ಬಿ, ಸುಪ್ರೀಂಕೋರ್ಟ್ ಆದೇಶವನ್ನು ಬಾರ್ ಮಾಲೀಕರು ಪಾಲಿಸಿದ ರೀತಿ ಎಲ್ಲರ ಹುಬ್ಬೇರಿಸಿತು.

ಡಿಕೆಶಿ ಮನೆಯಲ್ಲಿ ವಿಚಿತ್ರ ಸಮಸ್ಯೆಗಳು

ಡಿಕೆಶಿ ಮನೆಯಲ್ಲಿ ವಿಚಿತ್ರ ಸಮಸ್ಯೆಗಳು

ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಎದುರಿಸಿದ ವಿಚಿತ್ರ ಸಮಸ್ಯೆಗಳ ಬಗ್ಗೆ ಲೇಖನ.

ತಿಂಗಳ ಭವಿಷ್ಯ

ತಿಂಗಳ ಭವಿಷ್ಯ

ಆಗಸ್ಟ್ 2017ರ ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯದ ಲೇಖನ ಈಗಲೂ ಹೆಚ್ಚು ಟ್ರೆಂಡಿಂಗ್ ನಲ್ಲಿದೆ.

ಡಿಕೆಶಿ ಹಾಗೂ ತೇಜಸ್ವಿನಿ

ಡಿಕೆಶಿ ಹಾಗೂ ತೇಜಸ್ವಿನಿ

ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಅವರು ತಿರುಗಿ ಬೀಳುತ್ತಾರಾ? ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಇಲ್ಲಿದೆ

ಡಿಕೆಶಿ ಆಸ್ತಿ ಎಷ್ಟಿದೆ

ಡಿಕೆಶಿ ಆಸ್ತಿ ಎಷ್ಟಿದೆ

ಡಿಕೆ ಶಿವಕುಮಾರ್ ಅವರ ಘೋಷಿತ ಆಸ್ತಿ 251 ಪ್ಲಸ್ ಕೋಟಿ ಹಾಗೂ ವಿವಿಧ ಮೂಲಗಳಲ್ಲಿ ಅವರು ಮಾಡಿಕೊಂಡಿರುವ ಸಾಲ ಸೋಲಗಳ ವಿವರ ಇಲ್ಲಿದೆ.

ಅಕ್ರಮ ಸಂಪಾದನೆಗೆ ಕಡಿವಾಣ ಬೀಳಲಿ

ಅಕ್ರಮ ಸಂಪಾದನೆಗೆ ಕಡಿವಾಣ ಬೀಳಲಿ

ಅಕ್ರಮ ಸಂಪಾದನೆಗೆ ಕಡಿವಾಣ ಬೀಳಲಿ, ಎಲ್ಲಾ ಭ್ರಷ್ಟರಿಗೆ ಶಿಕ್ಷೆಯಾಗಲಿ ಎಂದು ಓದುಗರು ನೀಡಿದ ಅಭಿಪ್ರಾಯ ಸಂಗ್ರಹ ಇಲ್ಲಿದೆ.

ಕರ್ಕ ರಾಶಿಗೆ ರಾಹು ಪ್ರವೇಶ

ಕರ್ಕ ರಾಶಿಗೆ ರಾಹು ಪ್ರವೇಶ

ಆಗಸ್ಟ್ ತಿಂಗಳಿನಲ್ಲಿ ಕರ್ಕ ರಾಶಿಗೆ ರಾಹು ಹಾಗೂ ಮಕರ ರಾಶಿಗೆ ಕೇತು ಪ್ರವೇಶದಿಂದ ಏನು ಲಾಭ? ಏನು ನಷ್ಟ?

ಡಿಕೆಶಿ ಮನೆ ಮೇಲೆ ಐಟಿ ದಾಳಿ

ಡಿಕೆಶಿ ಮನೆ ಮೇಲೆ ಐಟಿ ದಾಳಿ

ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಜೊತೆಗೆ ಆ ದಿನದ ಪ್ರಮುಖ 10 ಬೆಳವಣಿಗೆಗಳ ರೌಂಡಪ್ ಚಿತ್ರಣ ಓದುಗರಿಗೆ ಮೆಚ್ಚುಗೆಯಾಯಿತು.

ಡಿಕೆಶಿ ಪಿಎ ಹೇಳಿದ ಸತ್ಯ

ಡಿಕೆಶಿ ಪಿಎ ಹೇಳಿದ ಸತ್ಯ

ಡಿಕೆ ಶಿವಕುಮಾರ್ ಅವರ ಆಪ್ತ ಸಹಾಯಕ ಬಾಯ್ಬಿಟ್ಟ ಸತ್ಯದಿಂದಾಗಿ ಹೈಕಮಾಂಡ್ ಗರಮ್ ಆದ ಸುದ್ದಿ ಹೆಚ್ಚು ಗಮನ ಸೆಳೆಯಿತು.

ಚೀನಾದಿಂದ ಗಡಿಯಲ್ಲಿ ತಂಟೆ

ಚೀನಾದಿಂದ ಗಡಿಯಲ್ಲಿ ತಂಟೆ

ಚೀನಾದಿಂದ ಗಡಿಯಲ್ಲಿ ತಂಟೆ, ಪ್ರಧಾನಿ ಮೋದಿ ನೀಡಿದ ಎಚ್ಚರಿಕೆ, ಉಭಯ ದೇಶಗಳ ನಡುವಿನ ಸೇನೆಗಳ ಬಗ್ಗೆ ಮಾಹಿತಿ ಜನರನ್ನು ಹೆಚ್ಚು ಸೆಳೆಯಿತು.

English summary
Top read trending stories of August Month(Till 20th) on Oneindia Kannada are here. The list includes stories on DK Shivakumar, Eclipse, Jobs, Politics, China and news across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X