ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಷ್ಠಿತ ಕ್ಷೇತ್ರ : ಮಾಜಿ ಸಿಎಂ ಸ್ಪರ್ಧೆಯ ಚಿಕ್ಕಬಳ್ಳಾಪುರ

|
Google Oneindia Kannada News

ಚಿಕ್ಕಬಳ್ಳಾಪುರ, ಮಾ.28 : ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಇಬ್ಬರು ಮಾಜಿ ಸಿಎಂಗಳು ಮತ್ತು ಒಬ್ಬರು ಮಾಜಿ ಸಚಿವರು ಮುಖಾಮುಖಿಯಾಗಿರುವ ಕ್ಷೇತ್ರದಲ್ಲಿ ಗೆಲುವು ಯಾರಿಗೆ ಎಂದು ಜನರು ಕಾದು ನೋಡುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿದಿದ್ದರಿಂದ ಕ್ಷೇತ್ರದ ಚುನಾವಣಾ ಲೆಕ್ಕಾಚಾರವೇ ತಲೆಕೆಳಗಾಗಿದೆ.

2009ರ ಲೋಕಸಭೆ ಚುನಾವಣೆಯಲ್ಲಿ 390,500 ಮತಗಳನ್ನು ಪಡೆದು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಚಿವ ಸ್ಥಾನವನ್ನು ಪಡೆದ ವೀರಪ್ಪ ಮೊಯ್ಲಿ ಈ ಬಾರಿಯು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ಹಲವಾರು ಲೆಕ್ಕಾಚಾರಗಳ ನಂತರ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಜೆಡಿಎಸ್ ಪಕ್ಷದಿಂದ ಅಂತಿಮ ಹಂತದಲ್ಲಿ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿಯವು ಮೂಲಕ ಕ್ಷೇತ್ರದ ಚುನಾವಣಾ ಕಾವನ್ನು ಹೆಚ್ಚಿಸಿದ್ದಾರೆ.

Chikkaballapur

ಕಳೆದ ಬಾರಿ ಗೆಲುವು ಸಾಧಿಸಿದ್ದು, ಕೇಂದ್ರ ಸಚಿವರಾಗಿ ಹಲವಾರು ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದು ಮೊಯ್ಲಿ ಅವರಿಗೆ ಬೆಂಬಲವಾಗಿದೆ. ಬಿಜೆಪಿಯ ಬಿಎನ್ ಬಚ್ಚೇಗೌಡರು ಸ್ಥಳೀಯರು ಜನರೊಂದಿಗೆ ಬೆರೆಯುತ್ತಾರೆ ಎಂಬುದು ಅವರಿ ಪ್ಲಸ್ ಪಾಯಿಂಟ್. ರಾಮನಗರ ಕ್ಷೇತ್ರದ ಶಾಸಕರಾದ ಕುಮಾರಸ್ವಾಮಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಒಬ್ಬರು ಮಾಜಿ ಸಚಿವರ ಹಣಾಹಣಿಯಿಂದ ಕ್ಷೇತ್ರ ಜನರಲ್ಲಿ ಕುತೂಹಲ ಮೂಡಿಸಿದೆ. ತನ್ನ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಮೊಯ್ಲಿ ಮತ್ತು ಕುಮಾರಸ್ವಾಮಿ ಹೆಸರು ಸೇರಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕ್ಷೇತ್ರದಲ್ಲಿ ಮಾಜಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಸಿಆರ್ ಪಿಎಫ್ ಕೆ.ಅರ್ಕೇಶ್ ಅವರನ್ನು ಕಣಕ್ಕಿಳಿಸಿದೆ. [ಚಿಕ್ಕಬಳ್ಳಾಪುರ ಕ್ಷೇತ್ರ ಪರಿಚಯ]

ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪುತ್ರ. ಮಾಜಿ ಮುಖ್ಯಮಂತ್ರಿಯಾಗಿ, ಪ್ರತಿಪಕ್ಷ ನಾಯಕರಾಗಿ, ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆದರೆ, ಹಾಲಿ ಅವರು ರಾಮನಗರ ಕ್ಷೇತ್ರದ ಶಾಸಕರು, ಅಲ್ಲಿನ ಕ್ಷೇತ್ರ ತೊರೆದು ಚಿಕ್ಕಬಳ್ಳಾಪುರದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ 2.80 ಲಕ್ಷ ಒಕ್ಕಲಿಗರಿದ್ದು, ಸಮುದಾಯದ ಪ್ರಬಲ ನಾಯಕ ಕುಮಾರಸ್ವಾಮಿ ಕೈ ಹಿಡಿಯುತ್ತಾರೆಯೇ? ಕಾದು ನೋಡಬೇಕು.

ಕುಮಾರಸ್ವಾಮಿ ಅವರು ತಾನು ಚಿಕ್ಕಬಳ್ಳಾಪುರದ ಅಳಿಯ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇದರ ಬಗ್ಗೆ ಜನರು ಅನುಮಾನಗೊಂಡಿದ್ದಾರೆ. ಏಕೆಂದರೆ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಚಿಂತಾಮಣಿ ತಾಲೂಕಿನವರು. ಟೆಕ್ನಿಕಲಿ, ಚಿಂತಾಮಣಿ ತಾಲೂಕು ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಕುಮಾರಸ್ವಾಮಿ ಕ್ಷೇತ್ರದ ಅಳಿಯ ಅಲ್ಲ ಎಂಬುದು ಜನರ ಲೆಕ್ಕಾಚಾರ.

ಎಂ.ವೀರಪ್ಪ ಮೊಯ್ಲಿ
ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿದ ವೀರಪ್ಪ ಮೊಯ್ಲಿ 2009ರ ಚುನಾವಣೆಯಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದರು. ಕೇಂದ್ರ ಪೆಟ್ರೋಲಿಯಂ ಖಾತೆ, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾಗಿ ಯುಪಿಎ ಸರ್ಕಾರದ ಭಾಗಿವಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತಂದಿದ್ದಾರೆ.

ಸಂಸದರ ನಿಧಿ ಸೇರಿದಂತೆ ನಾನಾ ಮೂಲಗಳಿಂದ ಕೋಟ್ಯಂತರ ರೂ. ಅನುದಾನವನ್ನು ನೀಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನೀರಿನ ಬವಣೆ ನೀಗಿಸಲು ಸತತ 4 ವರ್ಷಗಳಿಂದ ಶ್ರಮಿಸಿ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆಗೆ ನೆರವೇರಿಸಿದ್ದೇವೆ ಎಂದು ಎಂ.ವೀರಪ್ಪ ಮೊಯ್ಲಿ ಮತ ಕೇಳುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಮೊಯ್ಲಿ ವಿರೋಧಿ ಅಲೆ ಇದೆ ಎಂಬುದು ವಿರೋಧ ಪಕ್ಷಗಳ ಲೆಕ್ಕಾಚಾರ.

ಬಿ.ಎನ್.ಬಚ್ಚೇಗೌಡ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕ, ರೇಷ್ಮೆ ಖಾತೆಗಳನ್ನು ನಿರ್ವಹಿಸಿದ ಬಿ.ಎನ್.ಬಚ್ಚೇಗೌಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕ್ಷೇತ್ರದ ಒಕ್ಕಲಿಗರ ಮತಗಳನ್ನು ಸೆಳೆಯಬಹುದೆಂದು ಬಿಜೆಪಿ ಬಚ್ಚೇಗೌಡರನ್ನು ಕಣಕ್ಕೆ ಇಳಿಸಿದೆ. ಕೊನೆ ಕ್ಷಣದಲ್ಲಿ ಕುಮಾರಸ್ವಾಮಿ ಸ್ಪರ್ಧೆಯಿಂದ ಪಕ್ಷದ ಲೆಕ್ಕಚಾರ ಸ್ಪಲ್ಪ ತಪ್ಪಾಗಿದೆ. ಕ್ಷೇತ್ರದ ಒಕ್ಕಲಿಗರು ಬಚ್ಚೇಗೌಡ ಅಥವ ಕುಮಾರಸ್ವಾಮಿ ಯಾರನ್ನು ಬೆಂಬಲಿಸುತ್ತಾರೆ ಎಂದು ಕಾದು ನೋಡಬೇಕು.

ಆಪ್ ಅಭ್ಯರ್ಥಿ ಕೆ.ಅರ್ಕೇಶ್
ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಪಟ್ಟಿ ಮಾಡಿದ್ದ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಕುಮಾರಸ್ವಾಮಿ ಮತ್ತು ವೀರಪ್ಪ ಮೊಯ್ಲಿ ಹೆಸರಿತ್ತು. ಆದ್ದರಿಂದ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಆಪ್ ಕಣಕ್ಕಿಳಿಸಿದೆ. ಕೆ. ಅರ್ಕೇಶ್ (60) ಕ್ಷೇತದ ಅಭ್ಯರ್ಥಿಯಾಗಿದ್ದು, ಚಿಕ್ಕಬಳ್ಳಾಪುರದಲ್ಲೇ ಪಿಜಿ ಡಿಪ್ಲೋಮಾ ಶಿಕ್ಷಣ ಮುಗಿಸಿದವರು.

ಮಾಜಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಸಿಆರ್ ಪಿಎಫ್ ಆಗಿರುವ ಇವರು, ಕಾಡುಗಳ್ಳ ವೀರಪ್ಪನ್ ಹಿಡಿಯಲು ಹೊರಟ ತಂಡದ ಪ್ರಮುಖ ಮುಂದಾಳುವಾಗಿದ್ದರು. ಡಾ. ರಾಜ್ ಕುಮಾರ್ ಅಪಹರಣ ಪ್ರಕರಣದ ಸುಖ್ಯಾಂತದಲ್ಲಿ ಅರ್ಕೇಶ್ ಶ್ರಮವಹಿಸಿದ್ದು ಜನರಿಗೆ ತಿಳಿದಿದೆ. ವೀರಪ್ಪ ಮೊಯ್ಲಿ ಮತ್ತು ಕುಮಾರಸ್ವಾಮಿ ಅವರು ಮಾಡಿದ ಭ್ರಷ್ಟಾಚಾರವೇ ಇವರ ಚುನಾವಣಾ ವಿಷಯ.

English summary
Elections 2014 : Chikkaballapur Lok Sabha constituency to witness for former CMs fight. former Karnataka CM HD Kumaraswamy to take M Veerappa Moily in elections. former minister BN Bache Gowda is BJP candidate in constituency. AAP which had listed both Moily and Kumaraswamy in "most corrupt" politicians, has fielded a retired CRPF DIG Arkesh for the seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X