ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 2ರ ಸುದ್ದಿಸಾರ: ನೀವು ಓದಲೇಬೇಕಾದ 10 ಸುದ್ದಿಗಳು

|
Google Oneindia Kannada News

ಬೆಂಗಳೂರು, ಜೂನ್ 2: ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಬಡ ಹಾಗೂ ಮುದಿ ದಂಪತಿಗಳಿಬ್ಬರು ಚಿಕಿತ್ಸೆಗಾಗಿ ಪಡಬಾರದ ಪಡಿಪಾಟಲು ಪಟ್ಟಿರುವುದು ಹಾಗೂ ಬಿಸಿಸಿಐ ಆಡಳಿತ ಮಂಡಳಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಲೇಖಕ ರಾಮಚಂದ್ರ ಗುಹಾ, ಧೋನಿ, ದ್ರಾವಿಡ್ ವಿರುದ್ಧ ಕಿಡಿ ಕಾರಿದ್ದು ದೊಡ್ಡ ಮಟ್ಟದ ಸುದ್ದಿಯಾಯಿತು.

ಈ ಸುದ್ದಿಗಳ ಭರಾಟೆಯಲ್ಲಿ ಕೆಲವು ಸುದ್ದಿಗಳು ಕಂಡೂ ಕಾಣದಂತೆ ಮಾಯವಾಗುವುದು ಸಹಜ. ಅವೆಲ್ಲವನ್ನೂ ಇಲ್ಲಿ ಒಟ್ಟಾಗಿ, ಓದುಗರ ಜ್ಞಾನಾರ್ಜನೆಯ ದೃಷ್ಟಿಯಿಂದ ಟಾಪ್ 10 ಸುದ್ದಿಗಳನ್ನು ಆಯ್ದು ನಿಮ್ಮ ಮುಂದಿಟ್ಟಿದ್ದೇವೆ. ಓದು ನಿಮ್ಮದಾಗಲಿ.

1. ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ

ಬದುಕುವುದು ಸಾವಿಗಿಂತ ಕಷ್ಟವೇ ಎಂದೆನಿಸುವಂಥ ಘಟನೆ ಶಿವಮೊಗ್ಗದ ಮೆಗಾನ್ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆ ಬಗ್ಗೆ ವಿಡಿಯೋ ಹರಿದಾಡುತ್ತಿದ್ದು, ಹಿರಿಯ ಮಹಿಳೆಯೊಬ್ಬರು ತಮ್ಮ ಪತಿಯನ್ನು ಎಕ್ಸ್ ರೇ ಕೋಣೆಯೊಳಗೆ ಕರೆದೊಯ್ಯುತ್ತಿರುವ ರೀತಿ ಮನ ಕಲಕುವಂತಿದೆ. (ಮುಂದೆ ಓದಿ...)1. ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ

/news/business/it-warns-against-cash-dealings-of-rs-2-lakh-or-more-seeks-tip-off-119116.html

2. ಧೋನಿ ಗವಾಸ್ಕರ್ ಜನ್ಮ ಜಾಲಾಡಿದ ರಾಮಚಂದ್ರ ಗುಹಾ

ವೈಯಕ್ತಿಕ ಕಾರಣಕ್ಕಾಗಿ ಬಿಸಿಸಿಐ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾಗಿ ಹೇಳಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಅವರು, ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಗಾರರ ಸಮಿತಿಯ ಚೇರ್ಮನ್ ವಿನೋದ್ ರೈ ಅವರಿಗೆ ಪತ್ರ ಬರೆದಿದ್ದು, ಧೋನಿ ಸೇರಿದಂತೆ ಹಲವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. (ಮುಂದೆ ಓದಿ...)

3. ಮತ್ತೊಂದು ಹಗರಣ ಬಯಲಿಗೆಳೆದ ಅರ್ನಬ್: ಈ ಬಾರಿ ಸೋನಿಯಾ ಅಳಿಯ

ಕಾರ್ಯಾರಂಭಗೊಂಡ ನಂತರ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುವ ರಿಪಬ್ಲಿಕ್ ವಾಹಿನಿ, ಗುರುವಾರ (ಜೂ 1) ಮತ್ತೊಂದು ಹಗರಣವನ್ನು ಬಯಲುಗೆಳೆದಿದೆ. ಲಾಲೂ ಪ್ರಸಾದ್ ಯಾದವ್, ಶಶಿ ತರೂರ್ ನಂತರ ಅರ್ನಬ್ ಗೋಸ್ವಾಮಿ ಬಯಲುಗೆಳೆದದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾಧ್ರಾ ಅವರ ಬಹುಕೋಟಿ ಲ್ಯಾಂಡ್ ಡೀಲ್. (ಮುಂದೆ ಓದಿ...)

4. ನಾಣ್ಯ ನಿಷೇಧದ ಮೂಲಕ ಹೊಸ ಶಾಕ್ ಕೊಡಲು ಮೋದಿ ಸಿದ್ಧತೆ

ನಾಣ್ಯಗಳ ಮೇಲೆ ನಿಷೇಧ ಹೇರಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರಾ? ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡುವ ಸಾಧ್ಯತೆ ಇದೆ ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ. (ಮುಂದೆ ಓದಿ...)

5. ಈಜುಕೊಳದಲ್ಲಿ ಮುಳುಗಿ ಆಂಧ್ರದ ಟೆಕ್ಕಿ ಮತ್ತು ಮಗನ ದಾರುಣ ಸಾವು

ದುರಂತ ಎಂದರೆ ಇದೇ ಇರಬೇಕು! ತಾಯ್ನೆಲವನ್ನು ಬಿಟ್ಟು, ತುತ್ತಿನ ಚೀಲ ಅರಸಿ ಅಮೆರಿಕಕ್ಕೆ ತೆರಳಿದ್ದ ಆಂಧ್ರ ಪ್ರದೇಶದ ನಾಗರಾಜು ಸುರೇಪಳ್ಳಿ ಮೂವತ್ತೊಂದರ ವಯಸ್ಸಿನಲ್ಲಿಯೇ ಶವವಾಗಿ ತಾಯ್ನಾಡು ಸೇರುತ್ತಾರೆಂಬ ಊಹೆ ಯಾರಿಗೂ ಇರಲಿಲ್ಲ. ಇನ್ನೂ ದುರಂತವೆಂದರೆ, ಆಗಿನ್ನೂ ತೊದಲು ನುಡಿಯುತ್ತಿದ್ದ ಅವರ ಮೂರು ವರ್ಷದ ಪುಟ್ಟ ಮಗ ಸಹ ತಂದೆಯೊಂದಿಗೆ ಇಂಥ ದಾರುಣ ಅಂತ್ಯ ಕಾಣುತ್ತಾನೆಂದರೆ ನಂಬಲಿಕ್ಕಾಗುವುದಿಲ್ಲ! (ಮುಂದೆ ಓದಿ...)

/news/business/it-warns-against-cash-dealings-of-rs-2-lakh-or-more-seeks-tip-off-119116.html

6. ಬಿಎಸ್ವೈ ಸಿನಿಮಾಕ್ಕೆ ಆರಂಭದಲ್ಲೇ ವಿಘ್ನ, ಯಡಿಯೂರಪ್ಪ ಗರಂ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಸಿನಿಮಾ ಬರುತ್ತಿದೆ. ಬಿಜೆಪಿ ಅಭಿಮಾನಿಗಳು ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಸಿನಿಮಾ ಮಾಡ್ತಾ ಇದ್ದಾರೆ ಎಂಬ ಸುದ್ದಿ ಓದಿರುತ್ತೀರಿ. ಈ ಬಗ್ಗೆ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೇ ಪ್ರತಿಕ್ರಿಯಿಸಿದ್ದಾರೆ. (ಮುಂದೆ ಓದಿ...)

7. 400ಕೆಜಿ ಚಿನ್ನ, 20 ಕೋಟಿಯ ವಜ್ರಕ್ಕಾಗಿ ಚೆನ್ನೈ ಕಟ್ಟಡದಲ್ಲಿ ಹುಡುಕಾಟ

ಭಾರೀ ಬೆಂಕಿ ಕಾಣಿಸಿಕೊಂಡ ನಂತರ ಚೆನ್ನೈನ ಟಿ ನಗರದಲ್ಲಿದ್ದ ಚೆನ್ನೈ ಸಿಲ್ಕ್ಸ್ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಕಟ್ಟಡ ಹೋಗಿದ್ದಕ್ಕೆ ಮಾಲಿಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ, ಈ ಕಟ್ಟಡದ ಲಾಕರುಗಳಲ್ಲಿ 400 ಕೆಜಿ ಚಿನ್ನ ಹಾಗೂ ಸುಮಾರು 20 ಕೋಟಿ ಮೌಲ್ಯದ ವಜ್ರಗಳನ್ನು ಇಡಲಾಗಿತ್ತು. ಇದೀಗ ಕಟ್ಟಡದ ಮಾಲಿಕರಿಗೆ ಇವುಗಳದ್ದೇ ಚಿಂತೆ ಕಾಡುತ್ತಿದೆ. (ಮುಂದೆ ಓದಿ...)

8. ಜಿಎಸ್ ಟಿ ಜಾರಿಯಾದ್ರೆ ಚಿತ್ರರಂಗಕ್ಕೆ ವಿದಾಯ: ಕಮಲ್ ಹಾಸನ್

ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಗೆ ನಟ ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಮುಂದೆ ಓದಿ...)

9. ಬಿಜೆಪಿ ವಕ್ತಾರನನ್ನು ಡಿಬೇಟ್ ನಿಂದ ಹೊರಗೆ ಕಳುಹಿಸಿದ ಎನ್ಡಿಟಿವಿ

ಕೇಂದ್ರದ ಗೋಹತ್ಯಾ ನಿಷೇಧದ ಬಗ್ಗೆ ಎನ್ಡಿಟಿವಿ ಸುದ್ದಿವಾಹಿನಿಯಲ್ಲಿ ನಡೆಯುತ್ತಿದ್ದ ಗ್ರೂಪ್ ಚರ್ಚೆಯ ವೇಳೆ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾರನ್ನು ವಾಹಿನಿ ಕಾರ್ಯಕ್ರಮದಿಂದಲೇ ಹೊರಗೆ ಕಳುಹಿಸಿದೆ. (ಮುಂದೆ ಓದಿ...)

10. ಎರಡು ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರ ನಡೆಸಿದರೆ ಶೇ.100ರಷ್ಟು ದಂಡ

ಎರಡು ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಅಷ್ಟೇ ಪ್ರಮಾಣದ ದಂಡ ಹಾಕುವುದಾಗಿ ಶುಕ್ರವಾರ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. (ಮುಂದೆ ಓದಿ...)

/news/business/it-warns-against-cash-dealings-of-rs-2-lakh-or-more-seeks-tip-off-119116.html
English summary
Here are the top 10 news of June 2, 2017. Ill treatment for poor couple in Shivamogga Meggan Hospital and former member of BCCI administration committee Ramachandra Guha's dig towards Dhoni and Dravid were the major news. But, some other important news are listed here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X