• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ 1ರ ಸುದ್ದಿ ಸಾರ:ನೀವು ಓದಲೇಬೇಕಾದ ಟಾಪ್ 10 ನ್ಯೂಸ್

|

ಬೆಂಗಳೂರು, ಜೂನ್ 2: ಕನ್ನಡ ಮಾಧ್ಯಮ ಲೋಕದಲ್ಲಿ ಗುರುವಾರ ದರ್ಬಾರು ನಡೆಸಿದ ಸುದ್ದಿಗಳೆಂದರೆ, ಅದು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಸುದ್ದಿಗಳು, ಬಂಡಾಯವೆದ್ದಿದ್ದ ಸಪ್ತ ಶಾಸಕರಿಗೆ ದೇವೇಗೌಡರು ಬಳಸಿದ ರಾಜಕೀಯ ಅಸ್ತ್ರ, ಐಎಎಸ್ ನಲ್ಲಿ ಪ್ರಥಮ ಶ್ರೇಯಾಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದ ನಂದಿನಿ ಅವರ ಸಂದರ್ಶನ... ಇತ್ಯಾದಿ.

ಇದರ ಜತೆಗೆ, ಯುನೈಟೆಡ್ ಸಂಸದೀಯ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಕೇಂದ್ರ ಸರ್ಕಾರ ವೀಕ್ಷಕಿಯನ್ನಾಗಿ ಕಳುಹಿಸುತ್ತಿರುವುದು, ಬಿಎಸ್ ವೈ ಬಗ್ಗೆ ಚಿತ್ರ ಶುರುವಾಗಲಿರುವುದು, ಕೊಹ್ಲಿ- ಕುಂಬ್ಳೆ ನಡುವಿನ ಮನಸ್ತಾಪದ ಸುದ್ದಿಗಳೂ ಗಮನ ಸೆಳೆದವು.

ಅಷ್ಟೇ ಅಲ್ಲ, ಸದ್ಯಕ್ಕೆ ಕ್ರಿಕೆಟ್ ಪ್ರಿಯರ ಡಾರ್ಲಿಂಗ್ ಆಗಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸುದ್ದಿಗಳೂ ಸದ್ದು ಮಾಡಿದವು.

1. ಗೌಡ್ರ ರಾಜಕೀಯ ದಾಳಕ್ಕೆ ತತ್ತರಿಸಿದ ಸಪ್ತ ಬಂಡಾಯ ಶಾಸಕರು

ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದ ನಂತರ 'ಶ್ರೀಮಂತ' ಬೆಂಗಳೂರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಕಸರತ್ತು ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ವೇಳೆ, ಆರ್ ಅಶೋಕ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, 'ದೇವೇಗೌಡ್ರ ಮುಂದೆ ರಾಜಕೀಯ ಮಾಡೋಕೆ ಆಗುತ್ತಾ' ಎನ್ನುವ ಕಿವಿಮಾತನ್ನು ಹೇಳಿದ್ರಂತೆ. ()

2. ನಟ ದರ್ಶನ್ ರ ಮೈಸೂರು ಮನೆ ಹೆಸರು - 'ಮುತ್ತುರಾಜ್ - ಪಾರ್ವತಮ್ಮ'

ನಟ ಸಾರ್ವಭೌಮ ಎಂದು ಬಿರುದಾಂಕಿತರಾದ ರಾಜ್ ಕುಮಾರ್ ಕುಟುಂಬದ್ದು ಸಹ ನಟರಿಗಾಗಿ ಬಾಗುವ ಮನಸ್ಸು. ಅವರ ಮನೆಗೆ ಯಾರೇ ಬರಲಿ ಅದು ಸಹಾಯಾರ್ಥಕ್ಕಾಗಿರಲಿ ಅಥವಾ ಭೇಟಿಯಾಗಿರಲಿ ಎಲ್ಲರನ್ನು ವಿನಯದಿಂದಲೇ ನಡೆಸಿಕೊಳ್ಳುತ್ತಿದ್ದ ಮನೆಯ ಯಜಮಾನಿ ಪಾರ್ವತಮ್ಮರದ್ದು ದೊಡ್ಡ ಔದಾರ್ಯತೆ. ಅದಕ್ಕೆ ಈ ಉದಾಹರಣೆಯೇ ಸಾಕ್ಷಿ. (ಮುಂದೆ ಓದಿ)

3. ಕುಂಬ್ಳೆಯಿಂದ ಕೊಹ್ಲಿ ಜತೆಗಿನ ಖಾಸಗಿ ಚಾಟ್ ಬಹಿರಂಗ?

ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಕೆಲ ನಂಬಿಕಸ್ಥ ಮಾಧ್ಯಮದ ಸ್ನೇಹಿತರೊಂದಿಗೆ ವಾಟ್ಸಪ್ ಚಾಟ್ ಹಂಚಿಕೊಂಡಿರುವ ವಿಷಯ ತಿಳಿದುಬಂದಿದೆ. ತಂಡದ ಹಿರಿಯ ಅಟಗಾರರೊಂದಿಗೆ ನಡೆಸಿದ ಕೆಲ ಗೌಪ್ಯ ಚರ್ಚೆಗಳು, ಕೊಹ್ಲಿ ಜತೆಗಿನ ಖಾಸಗಿ ಚರ್ಚೆಗಳನ್ನು ಕುಂಬ್ಳೆ ಅವರು ಸೋರಿಕೆ ಮಾಡಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಡಿಎನ್ಎ ಪತ್ರಿಕೆಗೆ ತಿಳಿಸಿದ್ದಾರೆ. (ಮುಂದೆ ಓದಿ)

4. ಸ್ಟೇಟ್ ಬ್ಯಾಂಕ್ ಸೇವಾ ಶುಲ್ಕ ಪರಿಷ್ಕರಣೆ, ನೂತನ ದರಗಳು ಇಲ್ಲಿವೆ

ಜೂನ್ 1ರಿಂದ ಅನ್ವಯವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿವಿಧ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದೆ. ದೇಶದಾದ್ಯಂತ ಎಲ್ಲಾ ಸ್ಟೇಟ್ ಬ್ಯಾಂಕ್ ಶಾಖೆಗಳಲ್ಲೂ ಈ ಹೊಸ ನಿಯಮ ಅನ್ವಯವಾಗಲಿದೆ. ಈ ಶುಲ್ಕ ಪರಿಷ್ಕರಣೆ ದೇಶದಾದ್ಯಂತ ಇರುವ ಬ್ಯಾಂಕಿನ ಲಕ್ಷಕ್ಕೂ ಅಧಿಕ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. (ಮುಂದೆ ಓದಿ)

5. ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ

ನಾನ್ಯಾವತ್ತೂ ಇಡೀ ದಿನ ಓದುತ್ತಿರಲಿಲ್ಲ, ವಾಲಿಬಾಲ್ ಆಡುತ್ತಿದ್ದೆ, ಸಾಹಿತ್ಯ ಓದುತ್ತಿದ್ದೆ. ಯುಪಿಎಸ್ ಸಿ ಪರೀಕ್ಷೆಗೆ ಓದುವ ಸಮಯದಲ್ಲಿ ತುಂಬಾ ಏಕಾಗ್ರತೆಯಿಂದ ಓದುತ್ತಿದ್ದೆ...' ಇದು ನಿನ್ನೆ (ಮೇ 31) ಹೊರಬಿದ್ದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ)ದ ನಾಗರಿಕ ಸೇವಾ ಪರೀಕ್ಷೆ- 2016ರಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕದ ನಂದಿನಿ ಕೆ.ಆರ್. ಮಾತು. (ಮುಂದೆ ಓದಿ)

6. ಟೀಂ ಇಂಡಿಯಾ ಕೋಚ್ ಹುದ್ದೆ: ಜಂಬೋಗೆ ಸೆಹ್ವಾಗ್ ಪೈಪೋಟಿ

ದೆಹಲಿಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು, ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.ಇದರೊಂದಿಗೆ, ಈ ಪ್ರತಿಷ್ಠಿತ ಹುದ್ದೆಗೇರಲು ಪೈಪೋಟಿಯಲ್ಲಿರುವವರ ಸಂಖ್ಯೆ 6ಕ್ಕೇರಿದೆ. ಮಾಜಿ ಕ್ರಿಕೆಟಿಗರಾದ ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್, ಟಾಮ್ ಮೂಡಿ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದಾರೆ. ಇನ್ನು, ಹಾಲಿ ಕೋಚ್ ಅನಿಲ್ ಕುಂಬ್ಳೆ ಕೂಡಾ ಈ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. (ಮುಂದೆ ಓದಿ)

7 . ಬ್ರಿಟನ್ ಚುನಾವಣೆಗೆ ವೀಕ್ಷಕರಾಗಿ ಶೋಭಾ ಕರಂದ್ಲಾಜೆ ನೇಮಕ

ಬ್ರಿಟನ್ ಸಂಸತ್ತಿಗೆ ನಡೆಯಲಿರುವ ಚುನಾವಣೆಗೆ ವೀಕ್ಷಕರಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ತೆರಳಲಿದ್ದಾರೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ 'ಯುಕೆ ಎಲೆಕ್ಷನ್ ಅಸೈನ್ ಮೆಂಟ್ ಮಿಷನ್' ಅಡಿಯಲ್ಲಿ ಅಧಿಕೃತ ವೀಕ್ಷಕರಾಗಿ ಶೋಭಾ ಕರಂದ್ಲಾಜೆಯವರನ್ನು ಆಯ್ಕೆ ಮಾಡಿದ್ದಾರೆ. (ಮುಂದೆ ಓದಿ)

8. ಕರ್ನಾಟಕದ ಹೆಮ್ಮೆ ಕೋಲಾರಕ್ಕೆ ನಂದಿನಿ ಎಂಬ ಮತ್ತೊಂದು ಕೋಡು!

ಕರ್ನಾಟಕದ ಜನತೆ ಸಂಭ್ರಮಿಸುವುದಕ್ಕೆ ಈ ಬಾರಿಯ ಲೋಕಸೇವಾ ಆಯೋಗದ ಫಲಿತಾಂಶ ತುಂಬ ಒಳ್ಳೆ ಕಾರಣ. ಕನ್ನಡದಲ್ಲೇ ಪರೀಕ್ಷೆ ಬರೆದು, ಅತ್ಯುನ್ನತ ಅಂಕ ಪಡೆಯಬಹುದು ಎಂಬ ಆತ್ಮವಿಶ್ವಾಸ ತಂದುಕೊಟ್ಟಿದ್ದಾರೆ ನಂದಿನಿ. ವರ್ಷಗಳಿಂದ ಇದ್ದ ಕೊರತೆಯನ್ನು ಕೋಲಾರದ ನಂದಿನಿ ಅಂಥವರು ನಿವಾರಿಸಿದ್ದಾರೆ. ಇನ್ನು ಮುಂದೆ ಕೇಂದ್ರ ಸರಕಾರದ ಇತರ ಪರೀಕ್ಷೆಗಳಿಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯತ್ನಿಸಬಹುದು ಅನ್ನಿಸುತ್ತಿದೆ. (ಮುಂದೆ ಓದಿ)

9. ಕುಮಾರಸ್ವಾಮಿ ಚಿತ್ರಕ್ಕೆ ಸೆಡ್ಡು ಹೊಡೆಯಲು ಬಿಎಸ್ ವೈ ಚಿತ್ರ ತೆರೆಗೆ!

ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ಸ್ವತಂತ್ರ ಹೋರಾಟಗಾರರ ಕುರಿತು ಹಲವು ಚಿತ್ರಗಳು ತೆರೆಮೇಲೆ ಬಂದಿವೆ. ಈಗ ಕರ್ನಾಟಕದ ರಾಜಕಾರಣಿಗಳ ಕುರಿತು ಸಿನಿಮಾವಾಗ್ತಿವೆ. ಹೌದು.. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಚ ಎಚ್ ಡಿ ಕುಮಾರಸ್ವಾಮಿ ಅವರ ಭೂಮಿಪುತ್ರ ಸಿನಿಮಾಗೆ ಚಾಲನೆ ನೀಡಲಾಯಿತು. ಇದೀಗ ಇದಕ್ಕೆ ಸೆಡ್ಡು ಹೊಡೆಯಲು ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯೊಬ್ಬರ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಮೂಡಿ ಬರಲಿದೆ. (ಮುಂದೆ ಓದಿ)

10. ಸಂಕ್ರಾಂತಿ ನಂತರ ಮತ್ತೆ ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಪ್ರತ್ಯಕ್ಷ!

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೊಮ್ಮೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಗಣಿ ಉದ್ಯಮಿ ಗಾಲಿ ರೆಡ್ಡಿ ಅವರು ಮಗಳು-ಅಳಿಯನೊಂದಿಗೆ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಆಚರಿಸಲು ತಮ್ಮ ಊರಿಗೆ ಬಂದಿದ್ದರು. ಈಗ ತಮ್ಮ ಮದುವೆ ವಾರ್ಷಿಕೋತ್ಸವ ಆಚರಣೆಗೆ ಬಂದಿದ್ದಾರೆ. (ಮುಂದೆ ಓದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here are the top 10 news on June 1st, 2017. Team India in Champions trophy news, Parvathamma Rajkumar related stories are few among those.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more