• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶತಕ ಬಾರಿಸಿದ ಟೊಮೆಟೋ ಬೆಲೆ: ಕುತೂಹಲಕಾರಿ ಟ್ವೀಟ್‌ಗಳು!

|
Google Oneindia Kannada News

ಬೆಂಗಳೂರು, ಮೇ 19; ದಿನದಿಂದ ದಿನಕ್ಕೆ ಟೊಮೆಟೋ ಬೆಲೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರನ್ನು ಕಂಗೆಡಿಸಿದೆ. ಭಾರತೀಯ ಅಡುಗೆ ಮನೆಯಲ್ಲಿ ಪ್ರಮುಖ ತರಕಾರಿಯಾಗಿರುವ ಟೊಮೆಟೋ ಬೆಲೆ 100 ರೂ. ದಾಟಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮೀಮ್‌ಗಳು ಟ್ರೆಂಡ್ ಆಗಿದ್ದು ಗಮನ ಸೆಳೆಯುತ್ತಿವೆ.

ಭಾರತದಲ್ಲಿ ಪ್ರತಿ ಅಡುಗೆ ಮನೆಯಲ್ಲಿ ಕಾಣಸಿಗುವ ಮುಖ್ಯ ತರಕಾರಿ ಟೊಮೆಟೋ. ಸಾಂಬಾರ್, ದಾಲ್, ರಸಂ, ಸಬ್ಜಿಯಂತಹ ಅಡುಗೆಯಲ್ಲಿ ಟೊಮೆಟೋ ಬೇಕೇಬೇಕು. ಸಲಾಡ್ ರೂಪದಲ್ಲೂ ಟೊಮೆಟೋವನ್ನು ಹಸಿಯಾಗಿ ತಿನ್ನುವ ರೂಢಿ ಇದೆ.

ಭಾರತದಲ್ಲಿ ತರಕಾರಿ ಬಲು ದುಬಾರಿ; ಮಾರುಕಟ್ಟೆಯಲ್ಲಿ ರೇಟು ಹೇಗಿದೆ ತಿಳಿಯಿರಿಭಾರತದಲ್ಲಿ ತರಕಾರಿ ಬಲು ದುಬಾರಿ; ಮಾರುಕಟ್ಟೆಯಲ್ಲಿ ರೇಟು ಹೇಗಿದೆ ತಿಳಿಯಿರಿ

ಸಾಮಾನ್ಯವಾಗಿ 10-20 ರೂ.ಗಳಿಗೆ ಲಭ್ಯವಿರುತ್ತಿದ್ದ ಕೆಜಿ ಟೊಮೆಟೋ ಬೆಲೆ ಈಗ 100ರ ಗಡಿ ದಾಟಿದೆ. ನೆಚ್ಚಿನ ತರಕಾರಿ ದರ ಕಂಡು ಕಂಗಾಲಾಗಿರುವ ಜನರು ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಅಕಾಲಿಕ ಮಳೆ ಹೀಗೆ ಮುಂದುವರೆದರೆ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.

ದೇಶದ ಹಲವೆಡೆ ಟೊಮೆಟೋ ಬೆಲೆ

ದೇಶದ ಹಲವೆಡೆ ಟೊಮೆಟೋ ಬೆಲೆ

ವರದಿಗಳ ಪ್ರಕಾರ ಟೊಮೆಟೋ ದೇಶದೆಲ್ಲೆಡೆ ಸಾಮಾನ್ಯ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಕರ್ನಾಟಕದಲ್ಲೂ ಟೊಮೆಟೋ ದರ ಗಗನಕ್ಕೇರಿದೆ ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತುತ ಕೆಜಿ ಟೊಮೆಟೋ ದರ 100 ರೂ. ಗಡಿದಾಟಿದೆ.

ಪುಣೆಯಲ್ಲೂ ಟೊಮೆಟೋ ದುಬಾರಿಯಾಗಿದ್ದು ಪ್ರತಿ ಕೆಜಿ 60 ರೂ.ಗಳಿಗೆ ಹೆಚ್ಚಾಗಿದೆ. ಒಡಿಶಾದ ಭುವನೇಶ್ವರದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮೆಟೋ ದರ 120 ರೂಪಾಯಿಗಳಿಗೆ ಏರಿಕೆಯಾಗಿದೆ. ಮತ್ತೊಂದೆಡೆ ಆಂಧ್ರ ಪ್ರದೇಶದಲ್ಲೂ ದರ ಪ್ರತಿ ಕೆಜಿಗೆ 70 ರೂ. ಇದೆ.

ಟೊಮೆಟೋ ಬೆಲೆ ಹೆಚ್ಚಳಕ್ಕೆ ಕಾರಣಗಳು

ಟೊಮೆಟೋ ಬೆಲೆ ಹೆಚ್ಚಳಕ್ಕೆ ಕಾರಣಗಳು

ಅಸಾನಿ ಚಂಡಮಾರುತದ ಹೊಡೆತ ಟೊಮೆಟೋ ದರ ಹೆಚ್ಚಳಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಬಿರು ಬೇಸಿಗೆಯ ಹೊಡೆತದಿಂದ ಟೊಮೆಟೋ ಬೆಳೆ ಸರಿಯಾಗಿ ಬರದೇ ಇರುವುದು, ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಹವಾಮಾನ ವೈಪರೀತ್ಯದಿಂದ ಇಳುವರಿಯಲ್ಲೂ ಕುಂಠಿತವಾಗಿದೆ. ಅವಧಿಗೂ ಮುನ್ನವೇ ಮಳೆ ಹೆಚ್ಚಾಗಿದ್ದು ಟೊಮೆಟೋ ಬೆಳೆಯ ಮೇಲೆ ಪರಿಣಾಮ ಬೀರಿದೆ. ಮಾತ್ರವಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯೂ ಬೆಲೆ ಹೆಚ್ಚಳದಲ್ಲಿ ಪಾತ್ರ ವಹಿಸಿದೆ.

ತರಕಾರಿಗಳ ಬೆಲೆ ಹೆಚ್ಚಳ

ತರಕಾರಿಗಳ ಬೆಲೆ ಹೆಚ್ಚಳ

ದಿನೇ ದಿನೇ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ರೈತರಿಗೆ ಲಾಭ ಸಿಗುತ್ತಿಲ್ಲ. ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ನಿಂತಿಲ್ಲ. ಟೊಮೊಟೋ, ಬೀನ್ಸ್, ಕ್ಯಾರೇಟ್, ಸೊಪ್ಪು ಸೇರಿದಂತೆ ಎಲ್ಲಾ ತರಕಾರಿ ಬೆಲೆ ಹೆಚ್ಚಾಗುತ್ತಿದ್ದು ಜನರು ಕಂಗಾಲಾಗಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಅಗತ್ಯವಸ್ತುಗಳ ಬೆಲೆಯೂ ಜಾಸ್ತಿಯಾಗುತ್ತಿದೆ. ಮಾರುಕಟ್ಟೆಗೆ ಹೋದರೆ ತರಕಾರಿ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ. ಈರುಳ್ಳಿ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲಾ ತರಕಾರಿ ದುಬಾರಿಯಾಗಿದೆ.

  ಎಂಥಾ ಕ್ಯಾಚ್!!!ಮ್ಯಾಕ್ಸ್ವೆಲ್ ಹಿಡಿದ ಕ್ಯಾಚ್ ನೋಡಿ ಅಚ್ಚರಿಗೊಂಡ ಕ್ರಿಕೆಟ್ ಲೋಕ | OneIndia Kannada
  ಸಾಮಾಜಿಕ ಜಾಲತಾಣದಲ್ಲಿ ಮೀಮ್ ಟ್ರೆಂಡಿಂಗ್

  ಸಾಮಾಜಿಕ ಜಾಲತಾಣದಲ್ಲಿ ಮೀಮ್ ಟ್ರೆಂಡಿಂಗ್

  ಟೊಮೆಟೋ ಬೆಲೆ ಏರಿಕೆಗೆ ನಾಗರೀಕರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟೊಮೆಟೋ ಹ್ಯಾಶ್‌ಟ್ಯಾಗ್ ಬಳಸಿ ಮೀಮ್ ಮತ್ತು ಜೋಕ್‌ಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದ್ದವು.

  "ಟೊಮೆಟೋ ಸಾರ್ವಕಾಲಿಕ ಅತ್ಯಧಿಕ ಬೆಲೆ ಬಂದಿದೆ, ಟೊಮೆಟೋ ಮತ್ತು ನಿಂಬೆಹಣ್ಣು ರೇಸ್‌ನಲ್ಲಿವೆ" ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

  ಇನ್ನೊಬ್ಬ ವ್ಯಕ್ತಿ "ಭಾರತದಲ್ಲಿ ಟೊಮೆಟೋಗಳು ಮಾಣಿಕ್ಯಗಳಂತೆ ದುಬಾರಿಯಾಗಿದೆ. ಆದರೆ ನಿಂಬೆಹಣ್ಣಿನ ಬೆಲೆಯನ್ನು ನೀಲಮಣಿಗೆ ಹೋಲಿಸಬಹುದು!" ಎಂದು ಟ್ವೀಟ್ ಮಾಡಿದ್ದಾರೆ.

  "ಎಲ್‌ಐಸಿ ಷೇರುಗಳು ಶೇ.5 ರಷ್ಟು ಕುಸಿದಿದೆ ಎಂದು ಚಿಂತೆ ಮಾಡುವವರು ಟೊಮೆಟೋದಲ್ಲಿ ಹೂಡಿಕೆ ಮಾಡಲು ಯೋಚಿಸಬೇಕು, ಒಂದೇ ದಿನದಲ್ಲಿ 70 ರಿಂದ 100 ರೂ.ಗೆ ಹೆಚ್ಚಳವಾಗಿದೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

  English summary
  After Tomato price hike people took to Twitter to react the price hike issue. Here are the memes and jokes around tomato price.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X