19 ರಾಜ್ಯ ಹೆದ್ದಾರಿಗಳಲ್ಲಿ ನೂತನ ಟೋಲ್: ರಾಜ್ಯ ಸರ್ಕಾರ ಅಂಕಿತ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 19:ವಿಸ್ತರಿಸಲ್ಪಟ್ಟಿರುವ ಹತ್ತೊಂಭತ್ತು ರಾಜ್ಯ ಹೆದ್ದಾರಿಗಳ ಸುಮಾರು 1,530 ಕಿ.ಮೀ. ವ್ಯಾಪ್ತಿಯ ರಸ್ತೆಗಳ ಬಳಕೆಗೆ ನೂತನವಾಗಿ ಶುಲ್ಕ ಸಂಗ್ರಹಿಸುವ ನಿರ್ಧಾರಕ್ಕೆ ರಾಜ್ಯ ಸ ಚಿವ ಸಂಪುಟ ಮಾರ್ಚ್ 18ರಂದು ಒಪ್ಪಿಗೆ ನೀಡಿದೆ.

ಹೆದ್ದಾರಿಗಳ ಈ ವಿಸ್ತರಣೆಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕರ್ನಾಟಕ ರಸ್ತೆ ಅಭಿವೃದ್ಧಿ ಕಾರ್ಪೊರೇಷನ್ ನಿರ್ಮಿಸಿದೆ. ಈ ವಿಸ್ತರಿಸಲ್ಪಟ್ಟ ರಸ್ತೆಗಳಲ್ಲಿ ಶೀಘ್ರವೇ ಟೋಲ್ ಪ್ಲಾಜ್ ಶುಲ್ಕ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲು ಸಚಿವ ಸಂಪುಟ ಅಸ್ತು ಎಂದಿದೆ.

Toll collection for 19 State Highway stretches gets Cabinet nod

ವಿಸ್ತರಣೆಗೊಂಡಿರುವ ಹಾಗೂ ಟೋಲ್ ನಿಗದಿಗೊಳಿಸಲಾಗುವ ರಸ್ತೆಗಳ ಪಟ್ಟಿ ಹೀಗಿದೆ...

- ಮುದಗಲ್ ನಿಂದ ಗಂಗಾವತಿ (74 ಕಿ.ಮೀ)

- ಪಡುಬಿದ್ರಿಯಿಂದ ಕಾರ್ಕಳ (28 ಕಿಮೀ)

- ಹಾವೇರಿಯಿಂದ ಹಾನಗಲ್ (33 ಕಿಮೀ)

- ಧಾರವಾಡದಿಂದ ಸವದತ್ತಿ (36 ಕಿಮೀ)

- ಹೊಸಕೋಟೆಯಿಂದ ಚಿಂತಾಮಣಿ (80 ಕಿಮೀ)

- ತಿಂತಿಣಿಯಿಂದ ಕಲ್ಮಲ (74 ಕಿಮೀ)

- ದಾಬಸ್ ಪೇಟೆಯಿಂದ ಕಂಬೂರಿ (ಆಂಧ್ರಪ್ರದೇಶ) (91 ಕಿಮೀ)

- ನವಲಗುಂದದಿಂದ ಮುಂಡರಗಿ (80 ಕಿಮೀ)

- ಗುಬ್ಬಿಯಿಂದ ಯಡಿಯೂರು (49 ಕಿಮೀ)

- ಯಡಿಯೂರಿನಿಂದ ಮಂಡ್ಯ (60 ಕಿಮೀ)

-ದಾವಣಗೆರೆಯಿಂದ ಬೀರೂರು (149 ಕಿಮೀ)

- ಸವದತ್ತಿಯಿಂದ ಪಟ್ಟದಕಲ್ಲು (130 ಕಿಮೀ)

- ಹಾನಗಲ್ ನಿಂದ ತಡಸ (144 ಕಿಮೀ)

- ಶಿಕಾರಿಪುರದಿಂದ ಹಾನಗಲ್ (128 ಕಿಮೀ)

- ಮಳವಳ್ಳಿಯಿಂದ ಕೊರಟಗೆರೆ (150 ಕಿಮೀ)

- ಮುಧೋಳದಿಂದ ನಿಪ್ಪಾಣಿ (108 ಕಿಮೀ)

- ಸಿಂಧನೂರಿನಿಂದ ಕುಷ್ಟಗಿ (75 ಕಿಮೀ)

- ಹುಬ್ಬಳ್ಳಿಯಿಂದ ಲಕ್ಷ್ಮೇಶ್ಮರ (43 ಕಿಮೀ)

- ಬಳ್ಳಾರಿಯಿಂದ ಮೋಕಾ (26 ಕಿಮೀ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The state cabinet has given approval to collect the toll for extensions of 19 state highways of Karnataka. These roads are constructed by Karnataka Road development Corporation.
Please Wait while comments are loading...