ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಮುಖಂಡರ ಮೇಲಿನ ಕೇಸ್ ವಾಪಾಸ್ ಪಡೆಯಲು ಸಂಪುಟದಲ್ಲಿ ನಿರ್ಧಾರ

|
Google Oneindia Kannada News

ಬೆಂಗಳೂರು, ಜೂ. 11: ರಾಜ್ಯದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿಂದೂ ಧರ್ಮದ ಮುಖಂಡರ ಮೇಲಿನ ಪ್ರಕರಣಗಳನ್ನು ವಾಪಾಸ್ ಪಡೆಯಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Recommended Video

DK Shivakumar finally gets good news from BS Yediyurappa | Oneindia Kannada

ಗಣಪತಿ ವಿಸರ್ಜನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 53 ಹಿಂದೂ ಧರ್ಮಕ್ಕೆ ಸೇರಿರುವ ಮುಖಂಡರ ಮೇಲಿನ‌ ಕೇಸ್ ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹೇಳಿದ್ದಾರೆ. ಸಂಪುಟ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

Todays Karnataka Cabinet Meeting Highlights

ಬೆಂಗಳೂರು ಸೆಂಟ್ರಲ್ ವಿಶ್ವ ವಿದ್ಯಾಲಯ ಹೆಸರು ಬದಲಾವಣೆ ಬೆಂಗಳೂರು ಸೆಂಟ್ರಲ್ ವಿಶ್ವ ವಿದ್ಯಾಲಯ ಹೆಸರು ಬದಲಾವಣೆ

ಸಂಪುಟ ಸಭೆಯ ಇತರ ನಿರ್ಣಯಗಳು ಹೀಗಿವೆ

* ರಾಜ್ಯ ವಿಶ್ವ ವಿದ್ಯಾಲಯ ತಿದ್ದುಪಡಿ ಕಾಯ್ದೆಗೆ ಸಮ್ಮತಿ ಕೊಡಲಾಗಿದೆ

* KSOU ಹೊರತು ಪಡಿಸಿ ಬೇರೆ ವಿವಿಗಳಿಗೆ ದೂರ ಶಿಕ್ಷಣ ಮಾನ್ಯತೆಯಿಲ್ಲ, ಬೇರೆ ಯಾವ ವಿವಿಗಳು ದೂರ ಶಿಕ್ಷಣ ನೀಡುವಂತಿಲ್ಲ

* ಮಹಾರಾಣಿ ಕ್ಲಸ್ಟರ್ ವಿಶ್ವಚಿದ್ಯಾಲಯ ಹಾಗೂ ಮಂಡ್ಯ ಕ್ಲಸ್ಟರ್ ವಿವಿಗಳಿಗೆ ವಿಶ್ವವಿದ್ಯಾಲಯದ ಮಾನ್ಯತೆ ಕೊಡಲು ನಿರ್ಧಾರ

* ಬೆಂಗಳೂರು ಸೆಂಟ್ರಲ್ ವಿವಿ ಹೆಸರು ಬದಲಾಯಿಸಿ ಬೆಂಗಳೂರು ಸಿಟಿ ವಿವಿ ಎಂದು ನಾಮಕರಣಕ್ಕೆ ಒಪ್ಪಿಗೆ

* ರಾಜ್ಯದಲ್ಲಿ 1694 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ನಿರ್ಧಾರ

* 1307 ಆರೋಗ್ಯ ಉಪಕೇಂದ್ರಗಳನ್ನು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಸಂಪುಟದ ಒಪ್ಪಿಗೆ

* ಹಾಸನ, ವಿಜಯಪುರದ ತೋಟಗಾರಿಕಾ ಕಾಲೇಜು ಮುಚ್ಚಲು ತೀರ್ಮಾನ

* ಬೆಂಗಳೂರಿನಲ್ಲಿ 86.75 ಕೋಟಿ ರೂ.ಗಳ ವೆಚ್ಚದಲ್ಲಿ ವಿಜ್ಞಾನ ಗ್ಯಾಲರಿ ಆರಂಭಿಸಲು ನಿರ್ಧಾರ

* ಕೆಂಗೇರಿ ಬಳಿ ಲೋಕಶಿಕ್ಷಣ ಟ್ರಸ್ಟ್ ಗೆ ಭೂಮಿ ಮಂಜೂರು

* ಚಿಕ್ಕಬೇಗೂರು ಬಳಿ ಎಸ್ಟಿಪಿ ಫ್ಲಾಂಟ್ ಗೆ ಅನುಮೋದನೆ

* ಉಡುಪಿ ಬೈಂದೂರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ

* ನಗರೋತ್ಥಾನ ಕಾಯ್ದೆ ತಿದ್ದುಪಡಿಗೆ ಸಮ್ಮತಿ

* ಕೋವಿಡ್ 19 ನಿಂದಾಗಿ ಮುಂದೂಡಲಾಗಿದ್ದ ಸಹಕಾರ ಸಂಘಗಳ ಚುನಾವಣೆಗೆ ನಿರ್ಧಾರ

* ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಚುನಾವಣೆಯನ್ನು ಹೊರತುಪಡಿಸಿ ಉಳಿದ ಸಹಕಾರಿ ಸಂಘಗಳಿಗೆ ಚುನಾವಣೆ ನಡೆಸಲು ತೀರ್ಮಾನ

* 1989ರ ಪ್ರೊಬೆಷನರಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಸೆಲೆಕ್ಷನ್ ನಂತೆ ವೇತನ ನೀಡಲು ನಿರ್ಧಾರ

* KSOU ತೆರಿಗೆ ಕಟ್ಟಲು ವಿನಾಯ್ತಿ

* ಜಾಗ ಬದಲಾಯಿಸಿ ಚಿಕ್ಕಮಗಳೂರು ಸಮೀಪದ ತೇಗೂರು ಬಳಿ ನೂತನ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಅನುಮತಿ

* ರೇರಾ ಕಾಯ್ದೆ ನಿಯಮಕ್ಕೆ ಬದಲಾವಣೆ, ಇನ್ನುಮುಂದೆ ಸೇಲ್ ಅಗ್ರಿಮೆಂಟ್ ದಾಖಲೆ ಎಂದು ಪರಿಗಣನೆ

* ಗ್ರಾಹಕರಿಗೆ ಅನುಕೂಲವೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ

* ಆನೇಕಲ್ ಬಳಿ ವಸತಿಯೋಜನೆಯಡಿ ಮನೆ ನಿರ್ಮಾಣವು ಸೇರಿದಂತೆ ಹಲವು ನಿರ್ಧಾರಗಳನ್ನು ಇಂದಿನ ಸಂಪುಟ ಸಭೆ ತೆಗೆದುಕೊಂಡಿದೆ.

* 1 ರಿಂದ 7ನೇ ತರಗತಿ ವರೆಗೆ ಆನ್ ಲೈನ್ ಶಿಕ್ಷಣಕ್ಕೆ ನಿಷೇಧ, ಸರ್ಕಾರದ ಪರಿಣಾಮಕಾರಿ ನಿರ್ಧಾರ

* ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ ಮಾಡುವುದರಿಂದ ಹಿಂದೆ ಸರಿದ ಸರ್ಕಾರ, ಬದಲಿಗೆ ಆಡಳಿತಾಧಿಕಾರಿ ನೇಮಕ

* ಮುಂದಿನ 6 ತಿಂಗಳೊಳಗೆ ಪಂಚಾಯಿತಿ ಚುನಾವಣೆ ನಡೆಸಲು ತೀರ್ಮಾನ

English summary
Several resolutions, including the ban on distance education and the amendment of the RERA Act, were taken at today's cabinet meeting held in Vidhanasoudha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X