ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಂದು ತಿಂಗಳಲ್ಲಿ ಕರ್ನಾಟಕದಲ್ಲಿ ಕೊರೊನಾ ಸ್ಥಿತಿ ಹೇಗಿರುತ್ತೆ? ಇಲ್ಲಿದೆ ವಿಶ್ಲೇಷಕರ ಮಾತು...

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಮುಂದಿನ ತಿಂಗಳಷ್ಟರ ಹೊತ್ತಿಗೆ ಕರ್ನಾಟಕದಲ್ಲಿ ಸುಮಾರು ಎರಡು ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಲಿವೆ ಎಂದು ವಿಶ್ಲೇಷಕರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಜಾಗೃತಿ ಹಾಗೂ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿರುವ ಜೀವನ್ ರಕ್ಷಾ ಯೋಜನೆಯ ವಿಶ್ಲೇಷಕರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಏಪ್ರಿಲ್ 11ರಂದು ಕರ್ನಾಟಕದಲ್ಲಿ 10,65,290 ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಈ ಅಂಕಿ ಸಂಖ್ಯೆಯು ಮೇ 10ರ ವೇಳೆಗೆ 12,90,000 ಆಗಲಿದ್ದು, ಇನ್ನು ಮುಂದಿನ 30 ದಿನಗಳಲ್ಲಿ 2,24,710 ಹೊಸ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುವುದಾಗಿ ತಿಳಿಸಿದ್ದಾರೆ. ಮುಂದೆ ಓದಿ...

ಬೆಂಗಳೂರಲ್ಲಿ 9917 ಸೇರಿ ಕರ್ನಾಟಕದಲ್ಲಿ 14,859 ಮಂದಿಗೆ ಕೊರೊನಾ ಸೋಂಕು ಬೆಂಗಳೂರಲ್ಲಿ 9917 ಸೇರಿ ಕರ್ನಾಟಕದಲ್ಲಿ 14,859 ಮಂದಿಗೆ ಕೊರೊನಾ ಸೋಂಕು

 ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚುತ್ತದೆ

ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚುತ್ತದೆ

ಕೊರೊನಾ ಸೋಂಕಿನ ಪ್ರಕರಣಗಳೊಂದಿಗೆ, ಸೋಂಕಿನಿಂದಾಗಿ ಸಾವನ್ನಪ್ಪುವವರ ಸಂಖ್ಯೆಯೂ ಏರಿಕೆಯಾಗಲಿದ್ದು, ಮುಂದಿನ 30 ದಿನಗಳಲ್ಲಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ ಎನ್ನಲಾಗಿದೆ. ಏಪ್ರಿಲ್ 11ರವರೆಗೂ ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ 12,889 ಮಂದಿ ಸಾವನ್ನಪ್ಪಿದ್ದು, ಮೇ 10ರ ವೇಳೆಗೆ ಈ ಸಂಖ್ಯೆ 13,600ಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

 ಒಂದು ತಿಂಗಳಲ್ಲಿ ಸೋಂಕಿನ ಪ್ರಮಾಣ 20% ಹೆಚ್ಚಳ

ಒಂದು ತಿಂಗಳಲ್ಲಿ ಸೋಂಕಿನ ಪ್ರಮಾಣ 20% ಹೆಚ್ಚಳ

ಮೇ 10ರ ವೇಳೆಗೆ ರಾಜ್ಯದ ಸೋಂಕಿನ ಪ್ರಮಾಣದಲ್ಲಿ 20% ಹೆಚ್ಚಳವಾಗಲಿದೆ. ಈ ಅವಧಿಯಲ್ಲಿ 700ಕ್ಕೂ ಹೆಚ್ಚು ಜನರು ಸಾವನ್ನಪ್ಪಲಿದ್ದಾರೆ. ಸೋಂಕಿನ ತಡೆಗೆ ಪರಿಣಾಮಕಾರಿ ಮಾರ್ಗಗಳ ಅನುಸರಣೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಬೆಂಗಳೂರಿನಲ್ಲಿ ಸೂಕ್ತ ಪ್ರಮಾಣದಲ್ಲಿ ಕೊರೊನಾ ಪರೀಕ್ಷೆ ನಡೆಯದಿರುವುದು ನಗರದಲ್ಲಿ ಸೋಂಕು ಹೆಚ್ಚಳಕ್ಕೆ ಬಹುಮುಖ್ಯ ಕಾರಣ ಎನ್ನಲಾಗಿದೆ.

ಸರ್ಕಾರದಿಂದ 84 ಸಾವಿರ ರೆಮಿಡಿಸ್ವಿರ್ ಖರೀದಿ: ಸುಧಾಕರ್ಸರ್ಕಾರದಿಂದ 84 ಸಾವಿರ ರೆಮಿಡಿಸ್ವಿರ್ ಖರೀದಿ: ಸುಧಾಕರ್

 ಕೊರೊನಾ ಪರೀಕ್ಷೆ ಪ್ರಮಾಣದಲ್ಲಿಯೂ ಇಳಿಕೆ

ಕೊರೊನಾ ಪರೀಕ್ಷೆ ಪ್ರಮಾಣದಲ್ಲಿಯೂ ಇಳಿಕೆ

ಕರ್ನಾಟಕದಲ್ಲಿ ಈಚೆಗೆ ಕೊರೊನಾ ಪರೀಕ್ಷೆಯ ಪ್ರಮಾಣದಲ್ಲಿಯೂ ಇಳಿಕೆ ಕಂಡುಬಂದಿದೆ. ಅಕ್ಟೋಬರ್ -ಜನವರಿ ವೇಳೆಗೆ ಕರ್ನಾಟಕದಲ್ಲಿ 95,000 ರಿಂದ 100,000 ಪರೀಕ್ಷೆಗಳು ನಡೆದಿದ್ದವು. ಈ ಸಂಖ್ಯೆ ಫೆಬ್ರವರಿಯಲ್ಲಿ 62,000ಕ್ಕೆ ಇಳಿದಿದ್ದು, ಕಳೆದ ನವೆಂಬರ್‌ಗೆ ಹೋಲಿಸಿದರೆ ಫೆಬ್ರವರಿಯಲ್ಲಿ ದಿನನಿತ್ಯದ ಪರೀಕ್ಷೆಯು ಶೇ 40ರಷ್ಟು ಇಳಿದಿರುವುದಾಗಿ ಅಂದಾಜಿಸಲಾಗಿದೆ.

 ಬದ್ಧ ತಂಡಗಳ ಅವಶ್ಯಕತೆಯಿದೆ

ಬದ್ಧ ತಂಡಗಳ ಅವಶ್ಯಕತೆಯಿದೆ

ಸದ್ಯಕ್ಕೆ ಕಂಟೇನ್ಮೆಂಟ್ ನಿರ್ವಹಣೆ ಹಾಗೂ ಲಸಿಕಾ ಕಾರ್ಯಕ್ಕೆ ಎರಡು ಪ್ರತ್ಯೇಕ ಹಾಗೂ ಬದ್ಧ ತಂಡಗಳು ರಾಜ್ಯಕ್ಕೆ ಅವಶ್ಯಕತೆಯಿದ್ದು, ತಾಲೂಕು ಮಟ್ಟದಲ್ಲಿ ಸ್ವತಂತ್ರ ಟಾಸ್ಕ್‌ ಫೋರ್ಸ್ ಅವಶ್ಯಕತೆ ಇದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಶುಕ್ರವಾರ 14,859 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದೇ ದಿನ 78 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 13,190 ಮಂದಿ ಸಾವನ್ನಪ್ಪಿದ್ದಾರೆ.

Recommended Video

ಕುಂಭಮೇಳದಲ್ಲಿ 3,700ಕ್ಕೂ ಅಧಿಕ ಜನರಿಗೆ ಸೋಂಕು | Oneindia Kannada

English summary
Karnataka will see over 2 lakh new Covid cases in the next month, says an analysis of Jeevan Raksha project,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X