• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಲಾಕ್‌ಡೌನ್, ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ನಿಷೇಧ: ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಮೇ 07: ರಾಜ್ಯದಲ್ಲಿ ಕೊರೊನಾ ಸೋಂಕು ವಿಪರೀತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಮೇ 10 ರಿಂದ ಮೇ 24ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದೆ, ಜಿಲ್ಲೆಯಿಂದ ಜಿಲ್ಲೆಗೆ ಓಡಾಟವನ್ನು ನಿಷೇಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಿಂದ ಜಿಲ್ಲೆಗೆ ಓಡಾಟವನ್ನು ನಿಷೇಧಿಸಲಾಗಿದೆ, ಕೂಲಿ ಕಾರ್ಮಿಕರು ಕೂಡ ಬೆಂಗಳೂರು ಬಿಟ್ಟು ಹೊರಹೋಗಬಾರದು ಎಂದು ತಿಳಿಸಲಾಗಿದೆ. ಕಟ್ಟಡ ಕಾಮಗಾರಿಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಲಾಗಿದೆ, ಬಾರ್ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ.

ಬೆಳಗ್ಗೆ 10ರ ನಂತರ ಯಾರೂ ರಸ್ತೆಗೆ ಇಳಿಯುವಂತಿಲ್ಲ ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆಮ ಸರ್ಕಾರಿ ಕಚೇರಿಗಳು ಭಾಗಶಃ ತೆರೆದಿರಲಿವೆ.

ಕೋವಿಡ್ ನಿಯಂತ್ರಣ ಮಾಡಲು ಕಟ್ಟು ನಿಟ್ಟಿನನ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಅತ್ಯಂತ ಪ್ರಬಲವಾಗಿದ್ದು, ತೀವ್ರ ಪರಿಣಾಮಗಳನ್ನು ಬೀರುತ್ತಿದೆ. ಅದನ್ನು ನಿಯಂತ್ರಿಸಲು ಕೊರೊನಾ ನಿಯಂತ್ರಿಸುವ ಪರಿಣಾಮ ಬೀರುತ್ತಿಲ್ಲ. ಮೇ 10 ರ ಬೆಳಿಗ್ಗೆೆ 24 ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು.

ಈ ಅವಧಿಯಲ್ಲಿ ಅಂಗಡಿ ಮುಗ್ಗಟ್ಟು ಹೊಟೆಲ್, ಕೈಗಾರಿಕಾ ಚಟುವಟಿಕೆ ನಿಬಂಧಿಸಲಾಗಿದೆ. ಆಹಾರ, ಹಾಲು, ಹಣ್ಣು ಮಾಂಸದ ಅಂಗಡಿ ಮಾರಾಟಕ್ಕೆ ತೊಂದರೆ ಆಗದಂತೆ ಬೆಳಿಗ್ಗೆೆ 6 ರಿಂದ 10 ರವರೆಗೆ ತೆರೆಯಲು ಅವಕಾಶವಿದೆ.

ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ. ಆಸ್ಪತ್ರೆೆ ವೈದ್ಯಕೀಯ ಚಿಕಿತ್ಸೆೆಗೆ ಅವಕಾಶವಿದೆ. ಸರ್ಕಾರಿ ಕಚೇರಿಗಳು ಭಾಗಶಃ ಕೆಲಸ ಮಾಡಲಿವೆ.

   ಸೋಮವಾರದಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್- ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ | Oneindia Kannada

   ರಸ್ತೆ ಕಾಮಗಾರಿಗಳಿಗೆ ಯಾವುದೇ ರೀತಿಯ ಅಡ್ಡಿಯಿಲ್ಲ. ಕಟ್ಟಡ ಕಾರ್ಮಿಕರಿಗೆ ಇರುವ ಸ್ಥಳದಲ್ಲಿಯೇ ನೆರವೇರಿಸಲು ಅವಕಾಶ ವಿವಾಹ ಕಾರ್ಯಕ್ರಮದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ.

   ಹೆಚ್ಚಿನ ಜನರು ಭಾಗವಹಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಲಾಕ್‌ಡೌನ್ ತಾತ್ಕಾಲಿಕ ಕ್ರಮವಾಗಿದ್ದು, ಕಾರ್ಮಿಕರು ಬೆಂಗಳೂರು ಬಿಟ್ಟು ಬೇರೆ ಕಡೆ ಹೋಗಬಾರದು. ಕಟ್ಟಡ ಕಾರ್ಮಿಕರು ಇರುವ ಕಡೆಯಲ್ಲಿಯೇ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರು ಭಯ ಪಡುವ ಅಗತ್ಯವಿಲ್ಲ.

   English summary
   Chief minister Yeidiyurappa Karnataka To Go Under Complete Lockdown From May 10 To May 24.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X