ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿಯ ಒಂದೇ ಒಂದು ಹೇಳಿಕೆ ಜಾರಕಿಹೊಳಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿತೇ? ಅಬ್ಬಬ್ಬಾ..ಏನಿದು ಕುಮಾರಣ್ಣನ ನೆಟ್ವರ್ಕ್

|
Google Oneindia Kannada News

ಜೆಡಿಎಸ್ ತಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಮುಂದಿನ ಚುನಾವಣೆಯಲ್ಲು ಕಷ್ಟವಾಗಬಹುದು. ಆದರೆ, ರಾಜ್ಯ ರಾಜಕೀಯದಲ್ಲಿ ಕಿಂಗ್ ಮೇಕರ್ ಹೇಗೆ ಆಗಬಹುದು ಎನ್ನುವುದನ್ನು ಎಚ್.ಡಿ.ಕುಮಾರಸ್ವಾಮಿ ಎರಡ್ಮೂರು ಬಾರಿ ತೋರಿಸಿಕೊಟ್ಟಿದ್ದಾಗಿದೆ.

ಕಿಂಗ್ ಮೇಕರ್ ಎನ್ನುವುದು ಬರೀ ಸರಕಾರ ರಚಿಸಲು ಅಲ್ಲ, ಕುಮಾರಸ್ವಾಮಿ ನೀಡುವ ಕೆಲವು ಹೇಳಿಕೆಗಳು ಎಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ ಹತ್ತು ಹಲವಾರು ಉದಾಹರಣೆಗಳು ಸಿಗುತ್ತವೆ. ಅದಕ್ಕೆ ಲೇಟೆಸ್ಟ್ ಸೇರ್ಪಡೆ ರಮೇಶ್ ಜಾರಕಿಹೊಳಿ ಪ್ರಕರಣ.

ಜಾರಕಿಹೊಳಿ ವಿರುದ್ದ ಕೇಸ್ ಏನೋ ವಾಪಸ್ ಪಡೆಯಲಾಯಿತು: ಆದರೆ..?ಜಾರಕಿಹೊಳಿ ವಿರುದ್ದ ಕೇಸ್ ಏನೋ ವಾಪಸ್ ಪಡೆಯಲಾಯಿತು: ಆದರೆ..?

ಜಾರಕಿಹೊಳಿ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟಿನ ಸುದ್ದಿಯಾಗುತ್ತಿದ್ದಂತೆಯೇ ಮತ್ತು ಇನ್ನಷ್ಟು ಸಿಡಿಗಳು ಹೊರಬರುತ್ತವೆ ಎನ್ನುವ ಹೇಳಿಕೆಗಳಿಗೆ ಕುಮಾರಸ್ವಾಮಿ ಕೊಟ್ಟ ಪ್ರತಿಕ್ರಿಯೆ ಬಹಳ ಮಹತ್ವದ್ದು.

ಜಾರಕಿಹೊಳಿ ಸಿಡಿ: ಹುಬ್ಬಳ್ಳಿಯಿಂದ ಬ್ರೇಕಿಂಗ್ ನ್ಯೂಸ್ ಕೊಟ್ಟ ಶ್ರೀರಾಮುಲುಜಾರಕಿಹೊಳಿ ಸಿಡಿ: ಹುಬ್ಬಳ್ಳಿಯಿಂದ ಬ್ರೇಕಿಂಗ್ ನ್ಯೂಸ್ ಕೊಟ್ಟ ಶ್ರೀರಾಮುಲು

ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡು ಬಂದ ಜೆಡಿಎಸ್, ದೂರುದಾರನನ್ನೇ ಬೆಂಡೆತ್ತಲು ಆರಂಭಿಸಿತು. ಅದರಲ್ಲಿ, ಕುಮಾರಸ್ವಾಮಿಯವರ ಐದು ಕೋಟಿ ಡೀಲ್ ಹೇಳಿಕೆ ಕೂಡಾ ಒಂದು. ಕುಮಾರಸ್ವಾಮಿಯವರ ಈ ಪ್ರತಿಕ್ರಿಯೆ ಹಾರಿಕೆಯ ಸ್ಟೇಟ್ಮೆಂಟ್ ಆಗಿರಲಿಲ್ಲ.

ದಿನೇಶ್ ಅವರ ಈ ನಡೆಯನ್ನು ಬ್ಲ್ಯಾಕ್ ಮೇಲ್ ಎಂದ ಎಚ್ಡಿಕೆ

ದಿನೇಶ್ ಅವರ ಈ ನಡೆಯನ್ನು ಬ್ಲ್ಯಾಕ್ ಮೇಲ್ ಎಂದ ಎಚ್ಡಿಕೆ

ದೂರುದಾರ ದಿನೇಶ್ ಕಲ್ಲಹಳ್ಳಿ ರಮೇಶ್ ಜಾರಕಿಹೊಳಿಯವರ ಸಿಡಿಯನ್ನು ಪೊಲೀಸರಿಗೆ ದೂರು ನೀಡುವ ಮೊದಲೇ ಮಾಧ್ಯಮಗಳಿಗೆ ನೀಡಿದ್ದರು. ಕುಮಾರಸ್ವಾಮಿ ಈ ವಿಚಾರವನ್ನು ಕೂಡಾ ಪ್ರಸ್ತಾವಿಸಿದ್ದರು. ದಿನೇಶ್ ಅವರ ಈ ನಡೆಯನ್ನು ಬ್ಲ್ಯಾಕ್ ಮೇಲ್ ಎಂದು ಎಚ್ಡಿಕೆ ದೂರಿದ್ದರು.

ಐದು ಕೋಟಿ ಡೀಲ್ ನಡೆದಿರುವ ಸಾಧ್ಯತೆ

ಐದು ಕೋಟಿ ಡೀಲ್ ನಡೆದಿರುವ ಸಾಧ್ಯತೆ

ರಾಜ್ಯದ ಹಲವು ರಾಜಕಾರಣಿಗಳ ಈ ರೀತಿಯ ಸಿಡಿ ಇನ್ನಷ್ಟು ಸಮಯ ಸಂದರ್ಭದಲ್ಲಿ ಸಿಡಿಯಲಿದೆ ಎನ್ನುವ ಗಿರೀಶ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಎಚ್ಡಿಕೆ, ಇಂತವರನ್ನು ಮೊದಲು ಏರೋಪ್ಲೇನ್ ಹತ್ತಿಸಬೇಕು ಎಂದು ಹೇಳಿದ್ದರು. ಜೊತೆಗೆ, ನನಗಿರುವ ಮಾಹಿತಿಯ ಪ್ರಕಾರ, ಎರಡು ದಿನಗಳಿಂದ ಈ ಬಗ್ಗೆ ನನಗೆ ಮಾಹಿತಿ ಬರುತ್ತಿದ್ದು, ಐದು ಕೋಟಿ ಡೀಲ್ ನಡೆದಿರುವ ಸಾಧ್ಯತೆಯಿದೆ ಎನ್ನುವ ಹೇಳಿಕೆಯನ್ನು ನೀಡಿದ್ದರು.

ಅರ್ಜಿ ವಾಪಸ್ ಪಡೆಯಲು ಕುಮಾರಸ್ವಾಮಿಯವರ ಹೇಳಿಕೆ ಕಾರಣ

ಅರ್ಜಿ ವಾಪಸ್ ಪಡೆಯಲು ಕುಮಾರಸ್ವಾಮಿಯವರ ಹೇಳಿಕೆ ಕಾರಣ

ಇನ್ನು ದೂರುದಾರ ಕೂಡಾ ಅರ್ಜಿ ವಾಪಸ್ ಪಡೆಯಲು ಕುಮಾರಸ್ವಾಮಿಯವರ ಐದು ಕೋಟಿ ಡೀಲ್ ಹೇಳಿಕೆ ಕಾರಣ ಎಂದು ಹೇಳಿದ್ದಾರೆ. ಇಲ್ಲಿ, ಆಡಳಿತ ಪಕ್ಷದಲ್ಲಿದ್ದು, ಗುಪ್ತಚರ ತಮ್ಮ ಕಂಟ್ರೋಲ್ ನಲ್ಲಿದ್ದರೂ ಬಿಜೆಪಿಯವರಿಗೆ ಇಂತಹ ಸಿಡಿಯೊಂದು ಪಕ್ಷದ ಇಮೇಜಿಗೆ ಧಕ್ಕೆ ತರಬಹುದು ಎನ್ನುವ ಅಲರ್ಟ್ ಇಲ್ಲದೇ ಹೋಗಿದ್ದು.

Recommended Video

HDK ಮಾತಿಗೆ ಕಲ್ಲಹಳ್ಳಿ ಗಡ ಗಡ!! | Oneindia Kannada
ಏನಿದು ಕುಮಾರಣ್ಣನ ನೆಟ್ವರ್ಕ್

ಏನಿದು ಕುಮಾರಣ್ಣನ ನೆಟ್ವರ್ಕ್

ಆದರೆ, ಕುಮಾರಸ್ವಾಮಿಯವರಿಗೆ ಈ ವಿಚಾರದ ಬಗ್ಗೆ ಎರಡು ದಿನಗಳ ಹಿಂದೆಯೇ ನನಗೆ ಮಾಹಿತಿಯಿತ್ತು ಎಂದಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ ಕುಮಾರಸ್ವಾಮಿಯವರಿಗೆ ಇರುವ ನೆಟ್ವರ್ಕ್. ಸರಕಾರ ಯಾವುದೇ ಇರಲಿ. ಮಾಹಿತಿ ಅಥವಾ ದಾಖಲೆಗಳನ್ನು ಕಲೆಹಾಕುವಲ್ಲಿ ಕುಮಾರಸ್ವಾಮಿ ನಿಸ್ಸೀಮರು. ತಮ್ಮದೇ ಪಕ್ಷದವರಿರಬಹುದು ಅಥವಾ ವಿರೋಧ ಪಕ್ಷದವರಾಗಿರಬಹುದು, ಅವರ ವಿರುದ್ದ ಏನಾದರೂ ಪ್ರಮುಖ ಮಾಹಿತಿ ಎಚ್ಡಿಕೆ ಬಳಿ ಇರುತ್ತದೆ ಎನ್ನುವುದಕ್ಕೆ ಹಲವು ನಿರ್ದರ್ಶನಗಳಿವೆ. ಹಾಗಾಗಿ, ಇವರ ನೆಟ್ವರ್ಕ್ ಯಾವರೀತಿ ಇರಬಹುದು ಎನ್ನುವುದೇ ಕುತೂಹಲಕ್ಕೆ ಎಡೆಮಾಡಿ ಕೊಡುವಂತದ್ದು?

English summary
To Collect The Information And Documents, How Former CM H D Kumaraswamy Has Such A Huge Network
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X