ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಬಿಜೆಪಿಗೆ 16, ಕಾಂಗ್ರೆಸ್‌ಗೆ 12 ಸ್ಥಾನ

|
Google Oneindia Kannada News

Recommended Video

Lok Sabha Elections 2019: ಟೈಮ್ಸ್ ನೌ ಸಮೀಕ್ಷೆ |ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಗೆ ಎಷ್ಟು ಸ್ಥಾನ?

ಬೆಂಗಳೂರು, ಏಪ್ರಿಲ್ 08 : ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನಗಳು ಬಾಕಿ ಇದೆ. ಟೈಮ್ಸ್ ನೌ ಮತ್ತು ವಿಎಂಆರ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು ವರದಿ ಬಿಡುಗಡೆಯಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೋಮವಾರ ಸಂಜೆ ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಮಾರ್ಚ್ 22 ರಿಂದ ಏಪ್ರಿಲ್ 4ರ ತನಕ 960 ಪ್ರದೇಶಗಳಲ್ಲಿ 14,301 ಜನರಿಂದ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗಿದೆ.

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!

ಕರ್ನಾಟಕದ 28 ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶವೂ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು ಲೋಕಸಭಾ ಚುನಾವಣೆ ನಡೆಯುತ್ತಿದೆ. ಮಾರ್ಚ್ ತಿಂಗಳಿನಲ್ಲಿ ಸಹ ರಾಜ್ಯದಲ್ಲಿ ಸಮೀಕ್ಷೆ ನಡೆಸಿ ಟೈಮ್ಸ್ ನೌ ಮತ್ತು ವಿಎಂಆರ್ ವರದಿ ಬಿಡುಗಡೆ ಮಾಡಿತ್ತು.

ವಿಡಿಪಿ ಸಮೀಕ್ಷೆ ಬಿಜೆಪಿಗೆ 17 ಸೀಟು, ಮಂಡ್ಯದಲ್ಲಿ ಸುಮಲತಾಗೆ ಜಯ!ವಿಡಿಪಿ ಸಮೀಕ್ಷೆ ಬಿಜೆಪಿಗೆ 17 ಸೀಟು, ಮಂಡ್ಯದಲ್ಲಿ ಸುಮಲತಾಗೆ ಜಯ!

ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಘೋಷಣೆ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು 21ರಲ್ಲಿ ಕಾಂಗ್ರೆಸ್, 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ...

ಯಾರಿಗೆ ಎಷ್ಟು ಸೀಟು?

ಯಾರಿಗೆ ಎಷ್ಟು ಸೀಟು?

ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಕ್ಷೇತ್ರಗಳಲ ಪೈಕಿ ಬಿಜೆಪಿ 16 ಮತ್ತು ಕಾಂಗ್ರೆಸ್ ಮೈತ್ರಿಕೂಟ 12 ಸ್ಥಾನಗಳಲ್ಲಿ ಜಯಗಳಿಸಲಿದೆ. ಇತರ ಯಾವುದೇ ಪಕ್ಷದ ಅಭ್ಯರ್ಥಿಗಳು ಜಯಗಳಿಸುವುದಿಲ್ಲ.

2014ರ ಫಲಿತಾಂಶದ ಹೋಲಿಕೆ

2014ರ ಫಲಿತಾಂಶದ ಹೋಲಿಕೆ

2014ರ ಚುನಾವಣೆ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಬಿಜೆಪಿಗೆ 1 ಸ್ಥಾನ ಕಡಿಮೆ ಬರಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 1 ಸ್ಥಾನ ಹೆಚ್ಚಿಗೆಗಳಿಸಲಿದೆ. 2014ರಲ್ಲಿ ಬಿಜೆಪಿ 17, ಕಾಂಗ್ರೆಸ್ (9) + ಜೆಡಿಎಸ್ (2) ಸ್ಥಾನಗಳಲ್ಲಿ ಜಯಗಳಿಸಿದ್ದವು.

ಹಿಂದಿನ ಸಮೀಕ್ಷೆ ಫಲಿತಾಂಶ

ಹಿಂದಿನ ಸಮೀಕ್ಷೆ ಫಲಿತಾಂಶ

ಫೆಬ್ರವರಿ ತಿಂಗಳಿನಲ್ಲಿ ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 13 (ಕಾಂಗ್ರೆಸ್ 12, ಜೆಡಿಎಸ್ 1) ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವರದಿ ಬಂದಿತ್ತು. ಬಿಜೆಪಿ 15 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಹೇಳಿತ್ತು.

ವೋಟ್ ಶೇರಿಂಗ್ ವಿವರ

ವೋಟ್ ಶೇರಿಂಗ್ ವಿವರ

ಟೈಮ್ಸ್ ನೌ ಮತ್ತು ವಿಎಂಆರ್ ಸಮೀಕ್ಷೆ ಪ್ರಕಾರ ಬಿಜೆಪಿ 45.1ರಷ್ಟು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 43.4ರಷ್ಟು ಮತಗಳನ್ನು ಪಡೆಯಲಿವೆ. 2014ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸೇರಿ 51.8ರಷ್ಟು, ಬಿಜೆಪಿ 43ರಷ್ಟು ಮತಗಳನ್ನು ಪಡೆದಿದ್ದರು.

English summary
Times Now-VMR pre poll survey predicts 16 seat for BJP and 12 for Congress in Karnataka. The survey was carried out between March 22 to April 4, 2019. Election will be held on April 18 and 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X