ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಎನ್‌ಡಿಎ, ಯುಪಿಎಗೆ ಎಷ್ಟು ಸೀಟು?

|
Google Oneindia Kannada News

Recommended Video

Lok Sabha Election 2019 : ಕರ್ನಾಟಕದಲ್ಲಿ ಎನ್‌ಡಿಎ, ಯುಪಿಎಗೆ ಎಷ್ಟು ಸೀಟು? ಟೈಮ್ಸ್ ನೌ ಸಮೀಕ್ಷೆ ವರದಿ

ಬೆಂಗಳೂರು, ಜನವರಿ 30 : 2019ರ ಲೋಕಸಭಾ ಚುನಾವಣೆಯ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಕರ್ನಾಟಕದಲ್ಲಿ 50-50 ಸ್ಥಾನಗಳನ್ನು ಎರಡೂ ಮೈತ್ರಿಕೂಟ ಪಡೆಯಲಿದ್ದು, ಸಮಬಲದ ಹೋರಾಟ ನಡೆಯಲಿದೆ ಎಂದು ಹೇಳಿದೆ.

ಬುಧವಾರ ಟೈಮ್ಸ್‌ ನೌ ಮತ್ತು ವಿ.ವಿ.ಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟ 14 ಮತ್ತು ಯುಪಿಎ ಮೈತ್ರಿಕೂಟ 14 ಸ್ಥಾನಗಳಲ್ಲಿ ಜಯಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ಸಿ ವೋಟರ್-ಎಬಿಪಿ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗೆ 3 ಸ್ಥಾನ ಕುಸಿತಸಿ ವೋಟರ್-ಎಬಿಪಿ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗೆ 3 ಸ್ಥಾನ ಕುಸಿತ

2014ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ, ಈ ಚುನಾವಣೆಯಲ್ಲಿ 14 ಸ್ಥಾನಕ್ಕೆ ಕುಸಿಯಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು 14 ಸ್ಥಾನಗಳಲ್ಲಿ ಜಯಗಳಿಸಲಿವೆ.

ಇಂಡಿಯಾ ಟುಡೇ ಸಮೀಕ್ಷೆ : ಯೋಗಿ ಆದಿತ್ಯನಾಥ್ ನಂಬರ್ 1 ಸಿಎಂಇಂಡಿಯಾ ಟುಡೇ ಸಮೀಕ್ಷೆ : ಯೋಗಿ ಆದಿತ್ಯನಾಥ್ ನಂಬರ್ 1 ಸಿಎಂ

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 9 ಸ್ಥಾನಗಳಲ್ಲಿ ಜಯಗಳಿಸಿತ್ತು. ಜೆಡಿಎಸ್ ಎರಡು ಸ್ಥಾನ ಗೆದ್ದಿತ್ತು. ಎರಡೂ ಪಕ್ಷಗಳು ಸೇರಿ 11 ಸ್ಥಾನ ಪಡೆದಿದ್ದವು. ಸಮೀಕ್ಷೆ ಪ್ರಕಾರ ಈ ಬಾರಿಯ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸೇರಿ 14 ಸ್ಥಾನಗಳಲ್ಲಿ ಜಯಗಳಿಸಿವೆ.

ಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಬಿಜೆಪಿಗೆ 233 ಸೀಟು, ಲೋಕಸಭೆ ಅತಂತ್ರಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಬಿಜೆಪಿಗೆ 233 ಸೀಟು, ಲೋಕಸಭೆ ಅತಂತ್ರ

ಮತಗಳಿಕೆಯಲ್ಲಿ ಬಿಜೆಪಿ ಮುಂದೆ

ಮತಗಳಿಕೆಯಲ್ಲಿ ಬಿಜೆಪಿ ಮುಂದೆ

ಎರಡೂ ಮೈತ್ರಿಕೂಟಗಳು ಸಮಬಲದ ಹೋರಾಟ ನಡೆಸಿದರೂ ಬಿಜೆಪಿಯ ಮತಗಳಿಕೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಶೇ 43ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಶೇ 46.1ರಷ್ಟು ಮತ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

ಟೈಮ್ಸ್ ನೌ ಸಮೀಕ್ಷೆ : ದಕ್ಷಿಣದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ ಟೈಮ್ಸ್ ನೌ ಸಮೀಕ್ಷೆ : ದಕ್ಷಿಣದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ

ಕಾಂಗ್ರೆಸ್‌ ವೋಟ್ ಶೇರ್

ಕಾಂಗ್ರೆಸ್‌ ವೋಟ್ ಶೇರ್

2014ರಲ್ಲಿ ಕಾಂಗ್ರೆಸ್-ಜೆಡಿಎಸ್ ಸೇರಿ 51.8 ರಷ್ಟು ಮತಗಳಿಕೆ ಮಾಡಿದ್ದವು. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್ ಸೇರಿ 46.8 ರಷ್ಟು ಮತಗಳನ್ನು ಪಡೆಯಲಿವೆ ಎಂದು ಟೈಮ್ಸ್‌ ನೌ ಮತ್ತು ವಿ.ವಿ.ಆರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ಬಿಜೆಪಿಗೆ ಲಾಭ ಹೇಗೆ?

ಬಿಜೆಪಿಗೆ ಲಾಭ ಹೇಗೆ?

ಹಳೇ ಮೈಸೂರು-ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್‌ ಎರಡೂ ಪಕ್ಷಗಳು ಪ್ರಬಲವಾಗಿವೆ. ಈ ಎರಡೂ ಪಕ್ಷಗಳ ನಡುವಿನ ಪೈಪೋಟಿಯಿಂದಾಗಿ ಬಿಜೆಪಿಗೆ ಲಾಭವಾಗಲಿದೆ. ಈ ಭಾಗದಲ್ಲಿ ಬಿಜೆಪಿ ಸೀಟುಗಳನ್ನು ಗೆಲ್ಲದಿದ್ದರೂ ಮತಗಳಿಕೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಮೈತ್ರಿಯ ಲಾಭ ಕಾಂಗ್ರೆಸ್‌ಗೆ

ಮೈತ್ರಿಯ ಲಾಭ ಕಾಂಗ್ರೆಸ್‌ಗೆ

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಅದರ ಲಾಭ ಕಾಂಗ್ರೆಸ್‌ ಪಕ್ಷಕ್ಕೆ ಆಗಲಿದೆ. ರಾಜ್ಯದಲ್ಲಿಯೂ ಸಮ್ಮಿಶ್ರ ಸರ್ಕಾರ ಇರುವುದರಿಂದ ಎರಡೂ ಪಕ್ಷಗಳು ಸೇರಿ 14 ಸ್ಥಾನಗಳಲ್ಲಿ ಜಯಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

English summary
Times Now and VMR pre poll survey projects 50 50 seats for NDA and UPA in Karnataka in 2019 Lok Sabha Elections. Congress will get 14 and NDA will get 14 seats in 28 Lok Sabha seat of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X