• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 2ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ

|

ಬೆಂಗಳೂರು, ಏಪ್ರಿಲ್ 28: ಮೇ 2ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ.

   ಭಾರಿ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ | Oneindia Kannada

   ಹಾಗೆಯೇ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗದಲ್ಲಿ ಮಳೆಬರಲಿದೆ.

   ಮುಂದಿನ 3 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದಿನ 3 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ

   ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ವಿಜಯಪುರದಲ್ಲಿ ಕೂಡ ಮಳೆಯಾಗಲಿದೆ. ರಾಯಚೂರಿನಲ್ಲಿ 39.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

   ಮಳೆಯಾಘಿರುವ ಪ್ರದೇಶಗಳು

   ಮಳೆಯಾಘಿರುವ ಪ್ರದೇಶಗಳು

   ತಿಡಗುಂಡಿ, ಸಂಕೇಶ್ವರ, ಮಂಕಿ, ಸುಳ್ಯ, ಸಿದ್ದಾಪುರ, ವಿಜಯಪುರ, ಇಂಡಿ, ಹೊಸನಗರ, ಭಾಗಮಂಡಲದಲ್ಲಿ ಮಳೆಯಾಗಿದೆ.

   ಬೆಂಗಳೂರು ಹವಾಮಾನ ವರದಿ

   ಬೆಂಗಳೂರು ಹವಾಮಾನ ವರದಿ

   ಬೆಂಗಳೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಎಚ್‌ಎಎಲ್‌ನಲ್ಲಿ 33.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 33.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರೆಯಲಿದೆ.

   ಅಸ್ಸಾಂನಲ್ಲಿ ಭಾರಿ ಮಳೆಯಾಗಲಿದೆ

   ಅಸ್ಸಾಂನಲ್ಲಿ ಭಾರಿ ಮಳೆಯಾಗಲಿದೆ

   ಅಸ್ಸಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಂ ಮತ್ತು ತ್ರಿಪುರಾ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50ಕಿಲೋಮೀಟರ್ ವೇಗ)ದಲ್ಲಿ ಚಂಡಮಾರುವ ಬೀಸುವ ಸಾಧ್ಯತೆ ಇದೆ. ಅಂತೆಯೇ ಉತ್ತರಾಖಂಡ್, ಛತ್ತೀಸ್ ಗಢ, ವಿದರ್ಭ, ಬಿಹಾರ್, ಜಾರ್ಖಂಡ್, ಪಶ್ಚಿಮಬಂಗಾಳ, ಸಿಕ್ಕಿಂ, ಒಡಿಶಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಣಮತ್ತು ಕೇರಳ ಮತ್ತು ಮಾಹೆ ಒಳನಾಡು ಪ್ರದೇಶದಲ್ಲಿಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 30ರಿಂದ 40ಕಿಲೋಮೀಟರ್ ವೇಗ)ದಲ್ಲಿ ಬೀಸುವ ನಿರೀಕ್ಷೆ ಇದೆ.

   ಜಮ್ಮು ಕಾಶ್ಮೀರದಲ್ಲೂ ಮಳೆ

   ಜಮ್ಮು ಕಾಶ್ಮೀರದಲ್ಲೂ ಮಳೆ

   ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ಅರುಣಾಚಲಪ್ರದೇಶ, ಗುಜರಾತ್ ರಾಜ್ಯ, ಕೊಂಕಣಮತ್ತು ಗೋವಾ, ಆಂಧ್ರಪದೇಶದ ಕರಾವಳಿ ಮತ್ತುಯಾಣಂ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡುಪ್ರದೇಶ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ನ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಇದೆ.

   ರಾಜಸ್ಥಾನದ ಒಳನಾಡು ಪ್ರದೇಶದಲ್ಲಿ ಮಿಂಚು, ಗುಡುಗುಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ
   ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.

   English summary
   Meteorological department predicted that Till May 2 Heavy Rainfall Over These Districts Of Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X