ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡಿಪುರ: ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ!

|
Google Oneindia Kannada News

ಬೆಂಗಳೂರು, ಜು. 29: ಬರೀ ಕೋವಿಡ್ ಸಂಕಷ್ಟದ ಸುದ್ದಿಗಳನ್ನೇ ಕೇಳಿದ್ದ ಪ್ರಾಣಿ ಪ್ರೀಯರಿಗೆ ಸಂತಸದ ಸುದ್ದಿ ಬಂದಿದೆ. ರಾಷ್ಟ್ರೀಯ ಉದ್ಯಾನವನ ಬಂಡಿಪುರದಲ್ಲಿ ಹುಲಿ ಸಂಖ್ಯೆ ಹೆಚ್ಚಳಗೊಂದಿಡುರುವುದು ವನ್ಯಜೀವಿ ಪ್ರೇಮಿಗಳಲ್ಲಿ ಹರ್ಷ ತಂದಿದೆ.

Recommended Video

Rafael fighter jet lands in India | Oneindia Kannada

ಇಂದು ಅಂತರ ರಾಷ್ಟ್ರೀಯ ಹುಲಿ ದಿನಾಚರಣೆ. ಇದೇ ಹಿನ್ನೆಲೆಯಲ್ಲಿ ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರು ಅವರು ಕೊಟ್ಟಿರುವ ಮಾಹಿತಿಯ ಪ್ರಕಾರ, ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬರೋಬ್ಬರಿ 156 ಹುಲಿಗಳನ್ನು ಗುರುತಿಸಲಾಗಿದೆ.

Tiger project report says that 156 tigers have been identified in Bandipur National Park

 ಕಾಕನಕೋಟೆಯ ಮೊದಲ ದಿನದ ಸಫಾರಿಯಲ್ಲೇ ಹುಲಿ ದರ್ಶನ ಕಾಕನಕೋಟೆಯ ಮೊದಲ ದಿನದ ಸಫಾರಿಯಲ್ಲೇ ಹುಲಿ ದರ್ಶನ

ಬಂಡಿಪುರ ರಾಷ್ಟ್ರೀಯ ಉದ್ಯಾನವನ 1974ರ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿ ಮೀಸಲು ಪ್ರದೇಶವೆಂದು ಘೋಷಣೆಯಾಗಿತ್ತು, ಈಗ ಹುಲಿ ಸಂರಕ್ಷಣಾ ಪ್ರದೇಶವಾಗಿ ಮಾರ್ಪಡಿಸಲಾಗಿದೆ. ಒಟ್ಟು ಸುಮಾರು 874 ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ಬಂಡಿಪುರ ಅರಣ್ಯ ಪ್ರದೇಶ, ದಕ್ಷಿಣ ಭಾರತದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ.

Tiger project report says that 156 tigers have been identified in Bandipur National Park

ಹುಲಿಗಳ ಸಂತತಿ ಹೆಚ್ಚಳಕ್ಕೆ ಸಾಕಷ್ಟು ಶ್ರಮ ವಹಿಸಲಾಗಿದೆ. ಟೈಗರ್ ಪ್ರಾಜೆಕ್ಟ್ ಆದ ನಂತರ ಆ್ಯಂಟಿ ಪೊಚಿಂಗ್ ಕ್ಯಾಂಪ್‌ಗಳಲ್ಲಿ ಹೆಚ್ಚಳವಾಗಿದೆ. ಅರಣ್ಯ ಪ್ರದೇಶದಲ್ಲಿ ಕಟ್ಟೆಚ್ಚರ ಇಟ್ಟಿರುವುದು ಹುಲಿ ಸಂತತಿ ಹೆಚ್ಚಳಕ್ಕೆ ಕಾರಣವಾಗಿದೆ. ಈವರೆಗೆ 130 ಹುಲಿಗಳ ಸಂಖ್ಯೆ ದಾಖಲಾಗಿತ್ತು. ಇಂದು ಅಂತರರಾಷ್ಟ್ರೀಯ ಹುಲಿ ದಿನಾಚರಣೆ, ನೂತನ ದತ್ತಾಂಶದಂತೆ 156 ಹುಲಿಗಳ ಸಂಖ್ಯೆ ಅಧಿಕೃತ ಘೋಷಣೆಯಾಗಲಿದೆ. ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನವನವಿದೆ.

English summary
Today is International Tiger Day. Same time, Bandipur forest conservation officer and tiger project director Balachandru has reported that 156 tigers have been identified in Bandipur National Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X