ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿರತೆಗೆ ಕರಿ ಚಿರತೆ ಸವಾಲು: ಕಬಿನಿಯಲ್ಲಿ ನಡೆದ ರೋಚಕ ಮುಖಾಮುಖಿಯ ವಿಡಿಯೋ

|
Google Oneindia Kannada News

ಕಬಿನಿ, ಮಾರ್ಚ್ 10: ವನ್ಯಜೀವಿಗಳ ಬದುಕು, ಅವುಗಳ ಸಮಾಗಮ-ಕಾದಾಟ ಎಲ್ಲವೂ ಯಾವಗಲೂ ಕುತೂಹಲಕಾರಿ. ಆದರೆ ಅವು ಮನುಷ್ಯರ ಕಣ್ಣಿಗೆ ಬೀಳುವುದು ತೀರಾ ವಿರಳ. ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬಂದಾಗ ಭೀತಿ ಮೂಡಿದರೆ, ನಾವು ಕಾಡಿನಲ್ಲಿ ಅವುಗಳಿಗಾಗಿ ಹುಡುಕುತ್ತಾ ಹೋದಾಗ ಎದುರಿಗೆ ಬಂದರಂತೂ ಆಗುವ ರೋಮಾಂಚನ ಅಷ್ಟಿಷ್ಟಲ್ಲ. ಇಂತಹ ಮುಖಾಮುಖಿಯಲ್ಲಿ ಅನೇಕ ರೋಚಕ ದೃಶ್ಯಗಳು ಪ್ರವಾಸಿಗರ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತವೆ. ಎರಡು ಕ್ರೂರ ಪ್ರಾಣಿಗಳ ನಡುವಿನ ಕಾದಾಟದ ವಿಡಿಯೋವೊಂದು ವೈರಲ್ ಆಗಿದೆ.

ಕಪ್ಪು ಚಿರತೆ ಮತ್ತು ಚಿರತೆಗಳ ನಡುವೆ ಮರದ ಮೇಲೆ ನಡೆದ ಕದನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಒಂದೇ ಜಾತಿಯ ಆದರೆ ವಿಭಿನ್ನ ತಳಿಯ ಎರಡು ಪ್ರಾಣಿಗಳ ನಡುವಿನ ಜಗಳ ಮೈನವಿರೇಳಿಸುವಂತಿದೆ.

ವೈರಲ್ ವಿಡಿಯೋ; ಆದೇಶ ಪಾಲಿಸದ ಆನೆಗೆ ಮನಬಂದಂತೆ ಥಳಿಸಿದ ಮಾವುತರುವೈರಲ್ ವಿಡಿಯೋ; ಆದೇಶ ಪಾಲಿಸದ ಆನೆಗೆ ಮನಬಂದಂತೆ ಥಳಿಸಿದ ಮಾವುತರು

ಅಂದಹಾಗೆ, ಈ ವಿಡಿಯೋ ಜಗತ್ತಿನ ಬೇರೆ ಯಾವುದೋ ದೇಶದಲ್ಲಿ ನಡೆದಿರುವ ಘಟನೆಯದ್ದಲ್ಲ. ನಮ್ಮ ಕರ್ನಾಟಕದ್ದೇ. ಇದು ಕಬಿನಿ ವನ್ಯಜೀವಿ ಸಂರಕ್ಷಣಾವಲಯದಲ್ಲಿ ನಡೆದ ಘಟನೆ. ತೀರಾ ಅಪರೂಪವಾಗಿರುವ ಕಪ್ಪು ಚಿರತೆ ಹಗಲಿನ ವೇಳೆ ಕಾಣಿಸಿಕೊಂಡಿರುವುದು ಕೂಡ ವಿಶೇಷ ಸಂಗತಿ.

ಮಹಾ ಕದನ

'ಇದನ್ನು ಇಂದು ನೋಡಿದೆ. ಮಾರ್ಚ್ 6, ಕಬಿನಿ ವನ್ಯಜೀವಿ ಅರಣ್ಯ- ಕಪ್ಪು ಚಿರತೆ ಮತ್ತು ಅದರ ಎದುರಾಳಿ ಸ್ಕಾರ್ಫೇಸ್ ನಡುವೆ ನಡೆದ ಮತ್ತೊಂದು ಮಹಾ ಕದನ' ಎಂದು ನಂದನ್ ನಿಲೇಕಣಿ ಬರೆದಿದ್ದಾರೆ. ಈ ವಿಡಿಯೋ ವಿಜಯ್ ಪ್ರಭು ಎಂಬುವವರ ಕೃಪೆ ಎಂದು ಹೆಸರು ನಮೂದಿಸಿದ್ದಾರೆ.

ಕಬಿನಿಯಲ್ಲಿರುವ ಏಕೈಕ ಕಪ್ಪು ಚಿರತೆ

ಕಬಿನಿಯಲ್ಲಿರುವ ಏಕೈಕ ಕಪ್ಪು ಚಿರತೆ

ವನ್ಯಜೀವಿ ಛಾಯಾಗ್ರಾಹಕ ಶಾಜ್ ಜುಂಗ್ ಅವರು ನೀಡುವ ಮಾಹಿತಿ ಪ್ರಕಾರ, ಕಬಿನಿಯಲ್ಲಿರುವ ಈ ಚಿರತೆಗೆ ಸ್ಕಾರ್ಫೇಸ್ ಎಂದು ನಾಮಕರಣ ಮಾಡಲಾಗಿದೆ. ಅದರ ಮುಖದಲ್ಲಿ ಭಾರಿ ಪ್ರಮಾಣದ ಗಾಯವಿದೆ. ಸ್ಕಾರ್ಫೇಸ್ ಎನ್ನುವುದು ಅಮೆರಿಕದಲ್ಲಿ ಈ ಹಿಂದೆ ಇದ್ದ ಉಗ್ರನೊಬ್ಬನ ಹೆಸರು. ಈ ಸ್ಕಾರ್ಫೇಸ್‌ಗೆ ಮುಖಾಮುಖಿಯಾಗಿ ಅದನ್ನು ಬೆದರಿಸಲು ಹೊರಟಿದ್ದ ಚಿರತೆ, ಕಬಿನಿಯಲ್ಲಿ ಕಂಡುಬಂದಿರುವ ಏಕೈಕ ಕಪ್ಪು ಚಿರತೆಯಾಗಿದೆ.

ಮೈಸೂರು: ಪ್ರವಾಸಿಗರಿಗೆ ಮತ್ತೆ ದರ್ಶನ ನೀಡಿದ ಕರಿ ಚಿರತೆಮೈಸೂರು: ಪ್ರವಾಸಿಗರಿಗೆ ಮತ್ತೆ ದರ್ಶನ ನೀಡಿದ ಕರಿ ಚಿರತೆ

ರೋಹಿಣಿ ನಿಲೇಕಣಿ ಸೆರೆಹಿಡಿದ ಚಿತ್ರ

ಈ ವಿಡಿಯೋದ ಜತೆಗೆ ನಂದನ್ ನಿಲೇಕಣಿ ಮತ್ತೊಂದು ಫೋಟೊ ಹಂಚಿಕೊಂಡಿದ್ದಾರೆ. ಅದು ಕಪ್ಪು ಚಿರತೆಯದ್ದು. 'ಇದು ಹಿಂದಿನ ಘಟನೆ. ಕಪ್ಪು ಚಿರತೆ, ಸ್ಕಾರ್ಫೇಸ್ ಜತೆಗೆ ಮುಖಾಮುಖಿಗೆ ಯೋಜನೆ ನಡೆಸುತ್ತಿದೆ' ಎಂದು ತಮಾಷೆಯಾಗಿ ಪತ್ನಿ ರೋಹಿಣಿ ನಿಲೇಕಣಿ ತೆಗೆದ ಹಳೆಯ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

ಕಾದಾಟದಲ್ಲಿ ಏನಾಯ್ತು?

ಕಾದಾಟದಲ್ಲಿ ಏನಾಯ್ತು?

ಸ್ಕಾರ್ಫೇಸ್ ಹೆಸರಿನ ಚಿರತೆ ಬಹುತೇಕ ಒಣಗಿದ ಮರ ರೆಂಬೆಯ ತುದಿಯಲ್ಲಿ ಆರಾಮಾಗಿ ಮಲಗಿತ್ತು. ಅದನ್ನು ಕಂಡ ಕಪ್ಪು ಚಿರತೆ ಮರ ಹತ್ತಲು ಶುರುಮಾಡಿದೆ. ಮೇಲೆ ಬರಬೇಡ ಎಂದು ಸ್ಕಾರ್ಫೇಸ್ ಕುಳಿತಲ್ಲಿಂದಲೇ ಘರ್ಜಿಸಿ ಹೆದರಿಸುವ ಪ್ರಯತ್ನ ಮಾಡಿದೆ. ಆದರೆ ಅದಕ್ಕೆ ಬೆದರದ ಕಪ್ಪು ಚಿರತೆ ಮರ ಹತ್ತಿಕೊಂಡು ಸ್ಕಾರ್ಫೇಸ್ ಬಳಿ ತೆರಳಿದೆ. ಗಾಬರಿ ಹಾಗೂ ಸಿಟ್ಟಿನಿಂದ ಎದ್ದು ನಿಂತ ಸ್ಕಾರ್ಫೇಸ್, ಎದುರಾಳಿ ಜತೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿದೆ. ಮುಂದೇನಾಯ್ತು? ಈ ಎರಡೂ ಶಕ್ತಿಶಾಲಿ ಜೀವಿಗಳ ನಡುವೆ ಕಾದಾಟ ನಡೆಯಿತೇ? ಯಾರು ಗೆದ್ದರು? ಯಾರು ಸೋತರು? ಈ ಕುತೂಹಲಗಳಿಗೆ ವಿಡಿಯೋದಲ್ಲಿ ಉತ್ತರ ಸಿಕ್ಕಿಲ್ಲ.

Recommended Video

ವಿಶ್ವ ವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗಾಗಿ ರೈಲು ಮಾದರಿಯ ವಾಹನ | Oneindia Kannada
ಒಂದು ಲಕ್ಷಕ್ಕೂ ಅಧಿಕ ವ್ಯೂಸ್

ಒಂದು ಲಕ್ಷಕ್ಕೂ ಅಧಿಕ ವ್ಯೂಸ್

ಈ ವಿಡಿಯೋ ಟ್ವಿಟ್ಟರ್ ಬಳಕೆದಾರರನ್ನು ರೋಮಾಂಚನಗೊಳಿಸಿದೆ. ಬಹು ವಿರಳವಾಗಿರುವ ಕಪ್ಪು ಚಿರತೆ ತನ್ನದೇ ಕುಲದ ಮತ್ತೊಂದು ಚಿರತೆ ಜತೆ ಮುಖಾಮುಖಿಯಾಗುವುದನ್ನು ನೋಡುವ ಅವಕಾಶ ಸಿಕ್ಕಿದ್ದೇ ಅದೃಷ್ಟ. ನಂದನ್ ನಿಲೇಕಣಿ ಹಂಚಿಕೊಂಡ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ. ಸಾವಿರಾರು ಜನರು ಅದನ್ನು ರೀ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

English summary
Co-founder of Infosys, Nandan Nilekani has shared a video of an epic encounter between a black panther and leopard has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X