ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳ್ಮೆಯಿಂದ ಕಾದ ಮೂವರಿಗೆ ಬಂಪರ್ ಸಚಿವ ಸ್ಥಾನ: ಇದು ಸಂಘ ನಿಷ್ಠೆಯ ಫಲಿತಾಂಶ

|
Google Oneindia Kannada News

ರಾಜಕೀಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬಾರದು, ಸಮಯ ಸಂದರ್ಭ ಬಂದಾಗ ಎಲ್ಲವೂ ದಕ್ಕುವುದು ಎಂದು ನೂತನ ಸಚಿವ (ತೋಟಗಾರಿಕೆ, ಯೋಜನೆ ಖಾತೆ) ಮುನಿರತ್ನ ಅವರು ಆವಾಗಾವಾಗ ಹೇಳುತ್ತಿದ್ದರು. ಅವರ ಮಾತು ಸತ್ಯವಾಗಿದೆ, ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

Recommended Video

Siddaramaiah ಮೇಲೆ ಆಕ್ರೋಶ ಹೊರ ಹಾಕಿದ ಈಶ್ವರಪ್ಪ | Oneindia Kannada

ಲಾಬಿ ನಡೆಸಿದವರಿಗೂ ಬಿಜೆಪಿಯಲ್ಲಿ ಸ್ಥಾನ ಸಿಗುತ್ತದೆ ಎನ್ನುವುದಕ್ಕೆ ಶಶಿಕಲಾ ಜೊಲ್ಲೆಯವರು ಉದಾಹರಣೆಯಾಗಬಲ್ಲರು. ಲಾಬಿ ನಡೆಸದೆಯೂ ಮಂತ್ರಿಯಾಗಬಹುದು ಎನ್ನುವುದನ್ನು ಮೀನುಗಾರಿಕೆ, ಬಂದರು ಖಾತೆಯ ಸಚಿವ ಎಸ್. ಅಂಗಾರ ಕೂಡಾ ಉದಾಹರಣೆಯಾಗಬಲ್ಲರು.

ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ, ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ, ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾತಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಮೂಲ ಬಿಜೆಪಿಗರು ಮತ್ತು ಸಂಘ ನಿಷ್ಠೆಯನ್ನು ಹೊಂದಿದವರಿಗೆ ಆಯಕಟ್ಟಿನ ಸ್ಥಾನ ನೀಡಬೇಕೆನ್ನುವುದು ಸಂಘ ಪರಿವಾರದ ಒತ್ತಾಯವಾಗಿತ್ತು.

 ಖಾತೆ ಹಂಚಿಕೆಯಲ್ಲಿ ಆರಗ ಜ್ಞಾನೇಂದ್ರಗೆ ಒಲಿಯಿತು ಬಂಗಾರಪ್ಪ ಮಾದರಿ ಅದೃಷ್ಟ; ಏನದು ಲಕ್? ಖಾತೆ ಹಂಚಿಕೆಯಲ್ಲಿ ಆರಗ ಜ್ಞಾನೇಂದ್ರಗೆ ಒಲಿಯಿತು ಬಂಗಾರಪ್ಪ ಮಾದರಿ ಅದೃಷ್ಟ; ಏನದು ಲಕ್?

ರಾಜ್ಯದಲ್ಲಾಗಲಿ ಅಥವಾ ಕೇಂದ್ರದಲ್ಲಾಗಲಿ ಸಂಘ ಪರಿವಾರದ ಮಾತೇ ಬಹುತೇಕ ಅಂತಿಮವಾಗುವುದು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಬಲವಾದ ಹಿಂದೂ ಪ್ರತಿಪಾದಕರು, ಸಂಘಟನೆಯ ಕಟ್ಟಾ ಕಾರ್ಯಕರ್ತರಾದ ಮೂವರು ಶಾಸಕರಿಗೆ ಅವರ ನಿಷ್ಠೆ ಬಯಸಿದ್ದಕ್ಕಿಂತ ಹೆಚ್ಚಿದ್ದನ್ನೇ ಕೊಟ್ಟಿದೆ.

 ಬಿಜೆಪಿ, ಸಂಘ ಪರಿವಾರ ಮೂವರಿಗೆ ಉತ್ತಮ ಖಾತೆಯ ಜೊತೆಗೆ ಒಬ್ಬರಿಗಂತೂ ಡಬಲ್ ಖಾತೆ

ಬಿಜೆಪಿ, ಸಂಘ ಪರಿವಾರ ಮೂವರಿಗೆ ಉತ್ತಮ ಖಾತೆಯ ಜೊತೆಗೆ ಒಬ್ಬರಿಗಂತೂ ಡಬಲ್ ಖಾತೆ

ಇಷ್ಟೊಂದು ಪ್ರಭಾವೀ ಖಾತೆ ಸಿಗಬಹುದು ಎನ್ನುವ ಕಲ್ಪನೆ ಮೂವರು ನೂತನ ಸಚಿವರಿಗೆ ಇರಲಿಕ್ಕಿರಲಿಲ್ಲ. ಯಾಕೆಂದರೆ, ಸಚಿವ ಸ್ಥಾನ ನಿಭಾಯಿಸದ ಅನುಭವದ ಮಾನದಂಡ ಆ ಮೂರು ಖಾತೆಯನ್ನು ನಿಭಾಯಿಸಲು ಅತ್ಯವಶ್ಯಕ. ಆದರೂ, ಬಿಜೆಪಿ ಮತ್ತು ಸಂಘ ಪರಿವಾರ ಮೂವರಿಗೆ ಉತ್ತಮ ಖಾತೆಯ ಜೊತೆಗೆ ಒಬ್ಬರಿಗಂತೂ ಡಬಲ್ ಖಾತೆಯನ್ನು ಹಂಚಿದೆ.

 ಜನಪರ ವಿಷಯಗಳಲ್ಲಿ ರಾಜಿರಹಿತ ಹೋರಾಟಕ್ಕೆ ಹೆಸರಾಗಿರುವ ಅರಗ ಜ್ಞಾನೆಂದ್ರ

ಜನಪರ ವಿಷಯಗಳಲ್ಲಿ ರಾಜಿರಹಿತ ಹೋರಾಟಕ್ಕೆ ಹೆಸರಾಗಿರುವ ಅರಗ ಜ್ಞಾನೆಂದ್ರ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಶಿವಮೊಗ್ಗ ಘಟಕದ ಅಧ್ಯಕ್ಷರಾಗುವ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದ ಅರಗ ಜ್ಞಾನೇಂದ್ರ ಅವರಿಗೆ ಭರ್ಜರಿ ಗೃಹ ಖಾತೆ ಲಭಿಸಿದೆ. ಸಿಎಂ ನಂತರದ ಆಯಕಟ್ಟಿನ ಸ್ಥಾನ ಎಂದೇ ಗುರುತಿಸಲ್ಪಡುವ ಗೃಹ ಖಾತೆಯನ್ನು ಇವರಿಗೆ ನೀಡಲಾಗಿದೆ. ಜನಪರ ವಿಷಯಗಳಲ್ಲಿ ರಾಜಿರಹಿತ ಹೋರಾಟಕ್ಕೆ ಹೆಸರಾಗಿರುವ ಆರಗ ಜ್ಞಾನೆಂದ್ರ ಅವರು ವಿದ್ಯಾರ್ಥಿ ಜೀವನದಿಂದಲೇ ಆರ್​ಎಸ್​ಎಸ್​ ಸಂಪರ್ಕ ಹೊಂದಿದ್ದವರು.

 ವಿ.ಸುನೀಲ್ ಕುಮಾರ್ ಅವರಿಗೂ ಬಹುಮುಖ್ಯ ಇಂಧನ ಖಾತೆ ಲಭಿಸಿದೆ

ವಿ.ಸುನೀಲ್ ಕುಮಾರ್ ಅವರಿಗೂ ಬಹುಮುಖ್ಯ ಇಂಧನ ಖಾತೆ ಲಭಿಸಿದೆ

ಇನ್ನೋರ್ವ ಕಟ್ಟಾ ಹಿಂದೂತ್ವವಾದಿ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರವನ್ನು ಪ್ರತಿನಿಧಿಸುವ ವಿ.ಸುನೀಲ್ ಕುಮಾರ್ ಅವರಿಗೂ ಬಹುಮುಖ್ಯ ಇಂಧನ ಖಾತೆ ಲಭಿಸಿದೆ. ಇದರ ಜೊತೆಗೆ, ಕನ್ನಡ ಮತ್ತು ಸಂಸ್ಕೃತಿಯ ಜವಾಬ್ದಾರಿಯನ್ನು ನೀಡಲಾಗಿದೆ. ಕಳೆದ ಬಾರಿ ಯಡಿಯೂರಪ್ಪನವರ ಸರಕಾರದಲ್ಲೂ ಇವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.

ತಾಳ್ಮೆಯಿಂದ ಕಾದಿದ್ದ ಸುನೀಲ್ ಕುಮಾರ್ ಅವರಿಗೆ ಬಿಜೆಪಿ ಮತ್ತು ಸಂಘ ಉತ್ತಮ ಖಾತೆಯನ್ನೇ ನೀಡಿದೆ. ಇದರ ಜೊತೆಗೆ, ಇವರು ಉಡುಪಿ ಜಿಲ್ಲೆಯ ಉಸ್ತುವಾರಿ ಕೂಡಾ ಆಗಿದ್ದಾರೆ. ಹಾಗಾಗಿ, ಸುನೀಲ್ ಕುಮಾರ್ ಅವರು ಬಯಸಿದ್ದಕ್ಕಿಂತ ಹೆಚ್ಚಿದ್ದನ್ನೇ ಸಂಘ ಮತ್ತು ಪಕ್ಷ ನೀಡಿದೆ ಎಂದು ಹೇಳಬಹುದಾಗಿದೆ.

 ಬಿ.ಸಿ.ನಾಗೇಶ್ ಅವರು ನೂತನ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯ ಸಚಿವ

ಬಿ.ಸಿ.ನಾಗೇಶ್ ಅವರು ನೂತನ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯ ಸಚಿವ

ತಿಪಟೂರು ಕ್ಷೇತ್ರದ ಎರಡು ಬಾರಿ ಶಾಸಕರಾಗಿರುವ ಬಿ.ಸಿ.ನಾಗೇಶ್ ಅವರು ರಾಜ್ಯದ ನೂತನ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿದ್ದಾರೆ. ಕೊರೊನಾದ ಈ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಖಾತೆಗಳಲ್ಲೊಂದಾಗಿರುವ ಈ ಖಾತೆಯನ್ನು ಒಂದು ಕಾಲದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಾಗಿ ಫುಲ್ ಟೈಂ ದುಡಿಯುತ್ತಿದ್ದ ನಾಗೇಶ್ ಅವರ ಸಂಘ ನಿಷ್ಠೆಗೆ ಫಲ ಲಭಿಸಿದೆ.

English summary
Three RSS Close Aids Gets Crucial Cabinet Berth In Basavaraj Bommai Government. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X