ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಪಾಲಿಕೆ ಚುನಾವಣೆ: ಎಚ್ಡಿಕೆ ಇಚ್ಚಾಶಕ್ತಿ ಕೊರತೆಯೇ ಜೆಡಿಎಸ್ ಲೆಕ್ಕಕ್ಕಿಲ್ಲ ಎನ್ನುವುದಕ್ಕೆ ಕಾರಣ?

|
Google Oneindia Kannada News

ಸದ್ಯದ ಮಟ್ಟಿಗೆ ಈ ಚುನಾವಣೆ ಮೂರೂ ಪಕ್ಷಗಳಿಗೆ ಬೇಕಾಗಿರಲಿಲ್ಲ, ಅದರಲ್ಲೂ ಕೋವಿಡ್ ಮೂರನೇ ಅಲೆಯ ಎಚ್ಚರಿಕೆಯ ನಡುವೆ ಮೂರು ಮಹಾನಗರಪಾಲಿಕೆಗೆ ಚುನಾವಣೆಗೆ ದಿನಾಂಕ ಮಾಡಿರುವುದೇ ಆಶ್ಚರ್ಯ ಪಡುವಂತದ್ದು. ಸೆಪ್ಟಂಬರ್ 3ರಂದು ಚುನಾವಣೆ ನಡೆಯಲಿದ್ದು, ಸೆಪ್ಟಂಬರ್ 6ರಂದು ಫಲಿತಾಂಶ ಹೊರಬೀಳಲಿದೆ.

ಸಾಮಾನ್ಯ ದಿನಗಳಲ್ಲೇ ರಾಜಕೀಯ ಸಭೆಗೆ ಗುಂಪು ಸೇರುವುದನ್ನು ತಡೆಯಲಾಗದೇ ಇರುವಾಗ, ಇನ್ನು, ಅಸೆಂಬ್ಲಿ ಚುನಾವಣೆಗೆ ಪ್ರಮುಖ ಮೆಟ್ಟಲು ಎಂದು ಹೇಳಲಾಗುವ ಈ ಪಾಲಿಕೆ ಚುನಾವಣೆಗಳಲ್ಲಿ ಇನ್ನೆಷ್ಟು ಜನ ಸೇರುತ್ತಾರೆ ಎನ್ನುವುದನ್ನು ಸುಲಭವಾಗಿ ಗ್ರಹಿಸಿ ಕೊಳ್ಳಬಹುದಾಗಿದೆ.

ಮೂರೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೇ ಜಯ: ಕಟೀಲ್ಮೂರೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೇ ಜಯ: ಕಟೀಲ್

ರಾಜ್ಯ ಚುನಾವಣಾ ಆಯೋಗ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಪಾಲಿಕೆ ಚುನಾವಣೆಗೆ ದಿನಾಂಕ ಪ್ರಕಟಿಸಿದೆ. ನಾಮಪತ್ರ ಸಲ್ಲಿಸಲು ಸೋಮವಾರ (ಆಗಸ್ಟ್ 23) ಕೊನೆಯ ದಿನವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳದ್ದೇ ಕಾರುಬಾರು ಇರುವ ಈ ಪಾಲಿಕೆಯಲ್ಲಿ ಜೆಡಿಎಸ್ ಅಸ್ತಿತ್ವ ಹೇಗಿರಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

 ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಪಾಲಿಕೆ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಪಾಲಿಕೆ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಬರೀ ಕಾವೇರಿ ಕಣಿವೆ ಭಾಗದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿರುವ ಜೆಡಿಎಸ್ ಪಕ್ಷ, ಈ ಪ್ರಮುಖ ಮೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ತಮ್ಮ ಇರುವಿಕೆ ತೋರಿಸುವಲ್ಲಿ ಹೇಗೆ ಇಚ್ಚಾಶಕ್ತಿಯನ್ನು ತೋರಿಸಲಿದೆ ಎನ್ನುವುದು ಇಲ್ಲಿ ಮುಖ್ಯವಾಗಲಿದೆ. ಈ ನಡುವೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಗೆ ತೆರಳಿದ್ದಾರೆ.

 ಹುಬ್ಬಳ್ಳಿಯಲ್ಲಿ ಕಾರ್ಯಕರ್ತರ ಜೊತೆಗಿನ ಮಾತುಕತೆ ಕೇವಲ ಮೂವತ್ತು ನಿಮಿಷದ ಸಮಯ

ಹುಬ್ಬಳ್ಳಿಯಲ್ಲಿ ಕಾರ್ಯಕರ್ತರ ಜೊತೆಗಿನ ಮಾತುಕತೆ ಕೇವಲ ಮೂವತ್ತು ನಿಮಿಷದ ಸಮಯ

ಸೋಮವಾರ ಹುಬ್ಬಳ್ಳಿಯ ಕುಂದಗೋಳ ಕ್ರಾಸ್‌ನಲ್ಲಿರುವ ಗ್ರೀನ್ ಟ್ರೀ ವೈಷ್ಣವಿ ಹೋಟೆಲ್‌ನಲ್ಲಿ ಜೆಡಿಎಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯನ್ನು ಕುಮಾರಸ್ವಾಮಿ ಕರೆದಿದ್ದಾರೆ. ಇದಾದ ನಂತರ, ಗದಗ ಮತ್ತು ಹಾವೇರಿ ಜಿಲ್ಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂದೇ ಎಚ್ಡಿಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿರುವ ಹುಬ್ಬಳ್ಳಿಯಲ್ಲಿ ಕಾರ್ಯಕರ್ತರ ಜೊತೆಗಿನ ಮಾತುಕತೆ ಕೇವಲ ಮೂವತ್ತು ನಿಮಿಷದ (ಎಚ್ಡಿಕೆ ಪ್ರವಾಸದ ಪಟ್ಟಿ ಪ್ರಕಾರ) ಸಮಯ ನಿಗದಿಯಾಗಿದೆ.

 ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ

ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಈ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಇನ್ನು, ಈ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ - ಕಾಂಗ್ರೆಸ್ಸಿನದ್ದೇ ಹವಾ ಜಾಸ್ತಿ. 2023ರ ಅಸೆಂಬ್ಲಿ ಚುನಾವಣೆಗೆ ಮುನ್ನ ಪಕ್ಷವನ್ನು ಸದೃಢಗೊಳಿಸುವುದು ನಮ್ಮ ಮೊದಲ ಆದ್ಯತೆ ಎಂದು ದೇವೇಗೌಡ್ರು ಮತ್ತು ಕುಮಾರಸ್ವಾಮಿ ಹೇಳಿದ್ದರು. ಆದರೆ, ಪಾಲಿಕೆ ಚುನಾವಣೆಗೆ ಜೆಡಿಎಸ್ ಪ್ರಮುಖ ಮುಖಂಡರು ಪೂರ್ವತಯಾರಿಯಲ್ಲಿ ಅಷ್ಟೇನೂ ಉತ್ಸುಕತೆ ತೋರದೇ ಇರುವುದು ಕಾರ್ಯಕರ್ತರಲ್ಲಿ ಬೇಸರ ವ್ಯಕ್ತವಾಗಿದೆ.

 ಜೆಡಿಎಸ್ ಪ್ರಮುಖರ ಇಚ್ಚಾಶಕ್ತಿಯ ಕೊರತೆ ಎದುರಾಗುತ್ತಿದೆಯಾ ಎನ್ನುವುದಿಲ್ಲಿ ಪ್ರಶ್ನೆ

ಜೆಡಿಎಸ್ ಪ್ರಮುಖರ ಇಚ್ಚಾಶಕ್ತಿಯ ಕೊರತೆ ಎದುರಾಗುತ್ತಿದೆಯಾ ಎನ್ನುವುದಿಲ್ಲಿ ಪ್ರಶ್ನೆ

ಚುನಾವಣೆ ನಡೆಯುತ್ತಿರುವ ಮೂರು ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರದಲ್ಲಿ ಯಾವುದರಲ್ಲೂ ಜೆಡಿಎಸ್ ಪ್ರಾತಿನಿಧ್ಯತೆಯಿಲ್ಲ. ಇಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿತ್ತು. ಆದರೆ, ಪಕ್ಷದ ಬೇರನ್ನು ಗಟ್ಟಿಗೊಳಿಸಲು ಜೆಡಿಎಸ್ ಪಕ್ಷಕ್ಕೆ ಪಾಲಿಕೆ ಚುನಾವಣೆ ಉತ್ತಮ ಅವಕಾಶವಾಗಿತ್ತು. ಸಮಯಾವಕಾಶದ ಕೊರತೆಯಿದ್ದರೂ, ಜೆಡಿಎಸ್ ಪ್ರಮುಖರ ಇಚ್ಚಾಶಕ್ತಿಯ ಕೊರತೆ ಎದುರಾಗುತ್ತಿದೆಯಾ ಎನ್ನುವುದಿಲ್ಲಿ ಪ್ರಶ್ನೆ.

Recommended Video

ಅಬ್ಬಾ!!ಮೆಸ್ಸಿ ಕಣ್ಣೀರು ಒರೆಸಿ ಬಿಸಾಡಿದ ಟಿಶ್ಯೂ ಬೆಲೆ ಕೋಟಿ ಕೋಟಿ ರೂಪಾಯಿ | Oneindia Kannada
 ಜೆಡಿಎಸ್ ಲೆಕ್ಕಕ್ಕಿಲ್ಲ ಅನ್ನುವವರಿಗೂ, ಎಚ್ಡಿಕೆ ಮಾಡುತ್ತಿರುವುದಕ್ಕೂ

ಜೆಡಿಎಸ್ ಲೆಕ್ಕಕ್ಕಿಲ್ಲ ಅನ್ನುವವರಿಗೂ, ಎಚ್ಡಿಕೆ ಮಾಡುತ್ತಿರುವುದಕ್ಕೂ

ಹುಬ್ಬಳ್ಳಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಾಲ್ಕು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್, ಕಲಬುರಗಿ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್, ಇನ್ನು, ಬೆಳಗಾವಿಯ ಮೂರರಲ್ಲಿ ಎರಡರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ನಾಮಪತ್ರ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದ್ದರೂ, ಬಿರುಸಿನ ಪ್ರಚಾರದ ಮೂಲಕ ಜೆಡಿಎಸ್, ಮುಂದಿನ ಅಸೆಂಬ್ಲಿ ಚುನಾವಣೆಗೆ ಸಜ್ಜಾಗುವ ಅವಕಾಶವಿದೆ. ಆದರೆ, ಜೆಡಿಎಸ್ ಲೆಕ್ಕಕ್ಕಿಲ್ಲ ಅನ್ನುತ್ತಿರುವವರಿಗೂ, ಎಚ್ಡಿಕೆ ಮಾಡುತ್ತಿರುವುದಕ್ಕೂ..

English summary
Former CM and JDS Leader HD Kumaraswamy visit to Hubballi to discuss on Hubballi-Dharwad, Belagavi and Kalaburagi Municipal Corporation Election. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X