ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗೇಪಲ್ಲಿ : ವೋಲ್ವೋ ಬಸ್ ಅಪಘಾತ, 3 ಜನ ಸಾವು

By Mahesh
|
Google Oneindia Kannada News

ಬಾಗೇಪಲ್ಲಿ, ಸೆ.6: ಮುಂದೆ ಹೋಗುತ್ತಿದ್ದ ಸಿಮೆಂಟ್ ಲಾರಿಗೆ ಹಿಂಬದಿಯಿಂದ ಓವರ್ ಟೇಕ್ ಮಾಡಲು ಯತ್ನಿಸಿದಾಗ ಖಾಸಗಿ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ಬಾಗೇಪಲ್ಲಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ಕುಡಿಕೊಂಡ ಚೆಕ್ ಪೋಸ್ಟ್ ಬಳಿ ಈ ದುರ್ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ರೋಹಿತ್ ಅಗರ್ ವಾಲ್ (21), ಹೈದರಾಬಾದ್ ನಾಮಪಲ್ಲಿ ಪಟ್ಟಣದ ಬಾಬು ಪಿಳೈ (36)ಹಾಗೂ ಬಸ್ ಕ್ಲೀನರ್ ಶ್ರೀಧರ್ ಎಂದು ಗುರುತಿಸಲಾಗಿದೆ.

ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಓಮರ್ ಟ್ರಾವೆಲ್ಸ್ ಗೆ ಸೇರಿದ ವೋಲ್ವೋ ಬಸ್(ಕೆಎ-01 ಎ-987) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಾರಿ ಹಾಗೂ ಬಸ್ ಎರಡೂ ಕರ್ನಾಟಕದ ನೋಂದಣಿ ಹೊಂದಿವೆ.

Anantapur highway accident

ಮೃತ ದೇಹಗಳನ್ನು ಹಿಂದೂಪುರ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಸುಮಾರು 10 ಮಂದಿ ಗಾಯಾಳುಗಳಲ್ಲಿ ಕೆಲವರನ್ನು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಹಾಗೂ ಹಿಂದೂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಸ್ಸಿನಲ್ಲಿ 36 ಸೀಟುಗಳನ್ನು ಬುಕಿಂಗ್ ಮಾಡಿಸಲಾಗಿದೆ. ಅದರಲ್ಲಿ ಮೃತಪಟ್ಟವರಲ್ಲಿ ಇಬ್ಬರ ಹೆಸರು ಪತ್ತೆಯಾಗಿರುವುದರಿಂದ ಮತ್ತೊಬ್ಬ ಬಸ್ ಕ್ಲೀನರ್ ಎಂದು ಪೊಲೀಸಸರು ಹೇಳಿದ್ದಾರೆ.

ಸ್ಥಳಕ್ಕೆ ಹಿಂದೂಪುರ ಡಿವೈಎಸ್ಪಿ ಸುಬ್ಬರಾವ್, ಸರ್ಕಲ್ ಇನ್ಸ್‍ಪೆಕ್ಟರ್ ಶಿವನಾರಾಯಣಸ್ವಾಮಿ, ಚಿಲಮತ್ತೂರು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಗೌಸ್ ಭೇಟಿ ನೀಡಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಚಿಲಮತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಮುಂಭಾಗ ಕುಳಿತಿದ್ದ ಕ್ಲೀನರ್, ಪ್ರಯಾಣಿಕರಾದ ಬಾಬುಪಿಳೈ, ರೋಹಿತ್ ಅಗರ್ ವಾಲ್ ಮೃತಪಟ್ಟಿದ್ದಾರೆ. ವೋಲ್ವೋ ಬಸ್ ನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾ ಗಿದೆ.

English summary
Three people were killed and ten others were injured when a Volvo bus travelling from Hyderabad to Bangalore rammed into a truck on Saturday in Anantapur district at Andhra Pradesh- Karnataka border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X