ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಆದಿತ್ಯ ಕಾಮೆಡ್‌-ಕೆ ಟಾಪರ್!

By Nayana
|
Google Oneindia Kannada News

ಬೆಂಗಳೂರು, ಮೇ 28: ಕಾಮೆಡ್‌-ಕೆ ನಡೆಸಿದ್ದ 2018ನೇ ಸಾಲಿನ ಯುಜಿಸಿಇಟಿ ಫಲಿತಾಂಶವನ್ನು ಭಾನುವಾರ ಬಿಡುಗಡೆ ಮಾಡಿದೆ. 180 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ 168 ಅಂಕ ಪಡೆಯುವ ಮೂಲಕ ಬೆಂಗಳೂರಿನ ದುರ್ಬಾ ಆದಿತ್ಯ ಮೊದಲ ಸ್ಥಾನ ಪಡೆದಿದ್ದಾರೆ.

ಹೆಚ್ಚಿನ ಅಂಕ ಗಳಿಸಿದ ಟಾಪ್ 10 ರಲ್ಲಿ ಟಾಪ್‌ 1,5 ಮತ್ತು 6 ನೇ ಸ್ಥಾನವನ್ನು ರಾಜ್ಯದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. 165 ಅಂಕ ಪಡೆದಿರುವ ನಿಖಿಲ್ ಎಸ್‌ ಪೈ ಮತ್ತು ಪ್ರತೀಕ್ ಸಂಜಯ್ ಭಿರುದ್ ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಪಡೆದಿದ್ದಾರೆ.

ಕಾಮೆಡ್‌-ಕೆ ಪರೀಕ್ಷೆ ಬರೆದ ರಾಜ್ಯದ 22 ಸಾವಿರ ವಿದ್ಯಾರ್ಥಿಗಳು ಕಾಮೆಡ್‌-ಕೆ ಪರೀಕ್ಷೆ ಬರೆದ ರಾಜ್ಯದ 22 ಸಾವಿರ ವಿದ್ಯಾರ್ಥಿಗಳು

ಮೊದಲ 100 ಅಂಕಗಳಿಗೆ ರ‍್ಯಾಂಕ್ ಗಳ ಪೈಕಿ 42, ಮೊದಲ ಸಾವಿರ ರ್ಯಾಂಕ್‌ನಲ್ಲಿ 284 ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಉಳಿದ 716 ರ‍್ಯಾಂಕ್ ಗಳು ವಿವಿಧ ರಾಜ್ಯದ ವಿದ್ಯಾಥಿಗಳ ಪಾಲಾಗಿದೆ.

Three from Karnataka UGCET toppers

ಮೇ 13 ರಂದು ದೇಶಾದ್ಯಂತ 137 ನಗರಗಳ 291 ಪರೀಕ್ಷಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಒಟ್ಟಾರೆ 76,414 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ರಾಜ್ಯದ 21,899 ಹಾಗೂ ಹೊರ ರಾಜ್ಯದ 40,417 ವಿದ್ಯಾರ್ಥಿಗಳು ಸೇರಿ 62,316 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಮೇ 17ರಂದು ಪ್ರಕಟಿಸಿದ್ದ ತಾತ್ಕಾಲಿಕ ಉತ್ತರಗಳಿಗೆ 77 ವಿದ್ಯಾರ್ಥಿಗಳು ಆಕ್ಷೇಪಣೆಯನ್ನು ಸಲ್ಲಿಸಿದ್ದರು. ಆಕ್ಷೇಪಣೆಗಳಿಗೆ ತಜ್ಞರ ಸಲಹಾ ಸಮಿತಿ ಸ್ಪಷ್ಟನೆ ನೀಡಿ, ಮೇ 25ರಂದು ಅಂತಿಮ ಉತ್ತರಗಳನ್ನು ಪ್ರಕಟಿಸಿದೆ. ಭಾನುವಾರ ರ‍್ಯಾಂಕ್ ಪಟ್ಟಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ರ‍್ಯಾಂಕ್ ಕಾರ್ಡ್‌ಗಾಗಿ www.comedk.orgಗೆ ಭೇಟಿ ನೀಡುವಂತೆ ತಿಳಿಸಿದೆ.

English summary
UGCET has declared Comed-K results on Sunday. There from the state have got highest marks in the exams. Durbha Aditya has got first rank while Nikhil S. Paid satisfied with fifth rank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X