ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಬ್ರೇಕಿಂಗ್: ಬಿಜೆಪಿ ತೊರೆಯಲು ಮುಂದಾದ ಮೂರು ಪ್ರಭಾವಿ ನಾಯಕರು,ಯಾರ್ಯಾರು?

|
Google Oneindia Kannada News

Recommended Video

ಕರ್ನಾಟಕ ಬಿಜೆಪಿಯ ಮೂವರು ಬಿಜೆಪಿ ನಾಯಕರು ಕಾಂಗ್ರೆಸ್ ಗೆ | Oneindia Kannada

ಬೆಂಗಳೂರು, ಮಾರ್ಚ್ 16: ಆಪರೇಷನ್ ಕಮಲಕ್ಕೆ ಬಾಗಿ ಕಾಂಗ್ರೆಸ್‌ನ ನಾಯಕರು ಪಕ್ಷ ತೊರೆದು ಬಿಜೆಪಿ ಸೇರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಆಪರೇಷನ್ ಹಸ್ತ ಆರಂಭಿಸಿದೆ.

ಇದೀಗ ಬಿಜೆಪಿಯ ಮೂರು ಪ್ರಭಾವಿ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಬಿಜೆಪಿಯ ವಿಧಾನಪರಿಷತ್ ನ ಮಾಜಿ ಸದಸ್ಯ ಕೆಬಿ ಶಾಣಪ್ಪ, ಮಾಜಿ ಸಚಿವ ಬಾಬುರಾವ್ ಚೌವ್ಹಾಣ್, ಗುರುಮಿಠಕಲ್ ಬಿಜೆಪಿ ಮುಖಂಡ ಶ್ಯಾಮರಾವ್ ಪ್ಯಾಟಿ ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

ಕಲಬುರಗಿ ಕ್ಷೇತ್ರದಿಂದ ಉಮೇಶ್ ಜಾಧವ್ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಕೆಬಿ ಶಾಣಪ್ಪ ಬಿಜೆಪಿ ತೊರೆಯಲು ಮುಂದಾಗಿದ್ದಾರೆ.

Three BJP leaders will likely to join congress shortly

ಕಲಬುರಗಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಭುಗಿಲಿದ್ದಿದೆ. ಇನ್ನು ಶ್ಯಾಮರಾವ್ ಪ್ಯಾಟಿ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಮಾರ್ಚ. 18ರಂದು ಕಲಬುರಗಿಯ ಎನ್‌ವಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಆಪರೇಷನ್ ಕಮಲ ಮುಮದುವರೆದಿದೆ. ಕಾಂಗ್ರೆಸ್‌ನಿಂದ ಈಗಾಗ ಉಮೇಶ್ ಜಾಧವ್ ಬಿಜೆಪಿಗೆ ಬಂದಿದ್ದು, ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಹಳ್ಳಿ ಕೂಡ ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇನ್ನಿತರೆ ಕಾಂಗ್ರೆಸ್ ನ ಮುಖಂಡರು ಅವರ ಮನವೊಲಿಸಲು ಯತ್ನಿಸಿದ್ದರು.

ಇದೀಗ ಎ ಮಂಜು ಕೂಡ ಬಿಜೆಪಿಗೆ ಸೇರಲು ಮುಂದಾಗಿದ್ದಾರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಲು ಯತ್ನಿಸಿದ್ದಾಗ ನಾನು ಬಿಜೆಪಿ ಸೇರಿಯೇ ಸೇರುತ್ತೇನೆ , ಸೋಮವಾರ ಬಿಜೆಪಿಗೆ ಸೇರ್ಪಡೆಯಾಗುವೆ ಯಾರ ಮಾತನ್ನೂ ನಾನು ಕೇಳುವುದಿಲ್ಲ ಎಂದಿದ್ದಾರೆ.

English summary
Three BJP leaders are set to join congress in next Rahul rally at Kalaburagi. They are upset with induction of Umesh jadhav to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X