ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ನೇಮಕ

|
Google Oneindia Kannada News

ಬೆಂಗಳೂರು, ಆಗಸ್ಟ್ 08 : ಕರ್ನಾಟಕ ಸರ್ಕಾರ ಮೂವರು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಪ್ರಭುಲಿಂಗ ಕೆ. ನಾವಡಗಿ ಅಡ್ವೊಕೇಟ್ ಜನರಲ್ ಆಗಿ ನೇಮಕವಾಗಿದ್ದರು.

ಬುಧವಾರ ಸಂಜೆ ಕರ್ನಾಟಕ ಸರ್ಕಾರ ಮೂವರು ಅಡ್ವೊಕೇಟ್ ಜನರಲ್‌ಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಎ. ಎಸ್. ಪೊನ್ನಣ್ಣ, ಎನ್. ದಿನೇಶ್ ರಾವ್, ನಿತಿನ್ ರಮೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ನೇಮಕ ಮಾಡಲಾಗಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ?ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ?

ಆರ್. ನಟರಾಜ್, ವಿದ್ಯಾವತಿ ಎಂ. ಕೊಟ್ಟೂರ್ ಶೆಟ್ಟರ್, ಸುಬ್ರಮಣ್ಯ ಆರ್. ನೂತನ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಾಗಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಮೂವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಏನಿದು ಪಕ್ಷಾಂತರ ನಿಷೇಧ ಕಾಯ್ದೆ? ಈಗ ರಾಜೀನಾಮೆ ನೀಡಿದವರ ಕಥೆ?ಏನಿದು ಪಕ್ಷಾಂತರ ನಿಷೇಧ ಕಾಯ್ದೆ? ಈಗ ರಾಜೀನಾಮೆ ನೀಡಿದವರ ಕಥೆ?

Three Additional Advocate General Appointed

ಭಾರತದ ಸಂವಿಧಾನದ ಅನುಚ್ಛೇಧ 162ರ ಅನ್ವಯ ಪ್ರದತ್ತವಾದ ಅಧಿಕಾರದನ್ವಯ ನ್ಯಾಯವಾದಿಗಳನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಾಗಿ ನೇಮಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಪಿಜಿ, ಹೋಮ್‌ಸ್ಟೇಗಳಿಗೆ ನೂತನ ಕಾನೂನು, ಏನದು?ಪಿಜಿ, ಹೋಮ್‌ಸ್ಟೇಗಳಿಗೆ ನೂತನ ಕಾನೂನು, ಏನದು?

ಜುಲೈ 26ರಂದು ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಮೊದಲ ಆದೇಶದಲ್ಲಿಯೇ ರಾಜ್ಯದ ಅಡ್ವೊಕೇಟ್ ಜನರಲ್‌ ಆಗಿ ಪ್ರಭುಲಿಂಗ ಕೆ. ನಾವಡಗಿ ನೇಮಕಗೊಂಡಿದ್ದರು.

English summary
Karnataka Government on August 7, 2019 appointed R.Nataraj, Vidyavathi M.Kotturu and Subramandya R. as the additional advocate general. Prabhuling K. Navadgi is the advocate-general of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X