ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಡ್ ಬ್ಯಾಂಕ್ ಗಳಿಂದ ತ್ಯಾಜ್ಯವಾಗೋ ರಕ್ತ 60 ಸಾವಿರ ಲೀ.!

ರಾಜ್ಯದಲ್ಲಿ ವರ್ಷಕ್ಕೆ ಸುಮಾರು 60 ಸಾವಿರ ಲೀಟರ್ ಗಳಿಗೂ ಅಧಿಕ ರಕ್ತವು ವ್ಯರ್ಥವಾಗುತ್ತಿದೆ ಅಥವಾ ನಾಶವಾಗುತ್ತಿದೆ. ನಿರೀಕ್ಷಿತ ಗುಣಮಟ್ಟ ಇಲ್ಲದಿರುವುದು, ಅವಧಿ ಮೀರಿರುವುದು, ರಕ್ತ ನಿಧಿಗಳ ಕಳಪೆ ನಿರ್ವಹಣೆ ಮುಂತಾವುದು ಇದಕ್ಕೆ ಕಾರಣ. ಎಲ್ಲೆ

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಬೆಂಗಳೂರು, ಜೂನ್ 14: ಇಂದು ವಿಶ್ವ ರಕ್ತದಾನಿಗಳ ದಿನ. ಎಲ್ಲರಲ್ಲೂ ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕಾದ, ಎಲ್ಲರನ್ನೂ ಈ ಬಗ್ಗೆ ಸ್ಫೂರ್ತಿಗೊಳಿಸಬೇಕಾದ ಈ ದಿನದಂದು ಆಘಾತಕಾರಿ ವಿಚಾರವೊಂದು ಬಯಲಿಗೆ ಬಂದಿದೆ.

ಅದೇನೆಂದರೆ, ವರ್ಷವೊಂದಕ್ಕೆ ನಮ್ಮ ರಾಜ್ಯವೊಂದರಲ್ಲೇ ಸುಮಾರು 60 ಸಾವಿರ ಲೀಟರ್ ನಷ್ಟು ರಕ್ತವನ್ನು ಉಪಯೋಗಕ್ಕೊಳಗಾಗದೇ ಬಿಸಾಡಲಾಗುತ್ತಿದೆ ಎಂಬ ಮಾಹಿತಿ.

ವರ್ಷದಿಂದ ವರ್ಷಕ್ಕೆ ಹೀಗೆ ವ್ಯರ್ಥವಾಗುತ್ತಿರುವ ರಕ್ತದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಆದರೆ, ಈ ಬಗ್ಗೆ ಸರ್ಕಾರವಾಗಲೀ, ಯಾವುದೇ ಸಂಸ್ಥೆಗಳಾಗಲೀ ಉಪಾಯ ಕಂಡುಕೊಂಡಿಲ್ಲ.

ರಕ್ತದಾನ ಮಹಾದಾನ ಎನ್ನುತ್ತೇವೆ. ರಕ್ತ ದಾನದಿಂದ ಅನೇಕ ಜೀವಗಳನ್ನು ಉಳಿಸಿಕೊಳ್ಳಬಹುದಾಗಿದೆ. ವಿಷಯ ಹೀಗಿರುವಾಗ, ನಮ್ಮ ರಾಜ್ಯದಲ್ಲಿ ರಕ್ತ ನಿಧಿ ಭಂಡಾರಗಳಲ್ಲಿ ಹೀಗೆ ರಕ್ತ ವ್ಯರ್ಥವಾಗುತ್ತಿರುವುದಾದರೂ ಏಕೆ? ಏನು ಕಾರಣ ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.

ಗುಣಮಟ್ಟ, ಡ್ಯಾಮೇಜ್ ಗಳೂ ಕಾರಣ

ಗುಣಮಟ್ಟ, ಡ್ಯಾಮೇಜ್ ಗಳೂ ಕಾರಣ

ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತವು ಹೀಗೆ ವ್ಯರ್ಥವಾಗಲು ಇರುವ ಪ್ರಮುಖ ಕಾರಣಗಳೆಂದರೆ, ರಕ್ತಕ್ಕೆ ಸೋಂಕು ತಗುಲುವುದು, ರಕ್ತ ತುಂಬಿದ ಪ್ಲಾಸ್ಟಿಕ್ ಚೀಲಗಳ ಡ್ಯಾಮೇಜ್, ರಕ್ತದ ಗುಣಮಟ್ಟ ನಿರೀಕ್ಷಿತ ಮಟ್ಟ ಮುಟ್ಟದಿರುವುದು ಹಾಗೂ ಅವಧಿ ಮೀರಿದ ರಕ್ತ. ಈ ಕಾರಣಗಳಿಂದಾಗಿ, ರಕ್ತ ಭಂಡಾರಗಳಲ್ಲಿ ವರ್ಷಕ್ಕೆ ಸಾವಿರಾರು ಲೀಟರ್ ಗಳಷ್ಟು ರಕ್ತವು ಉಪಯೋಗಕ್ಕೆ ಬಾರದೇ ತ್ಯಾಜ್ಯವಾಗಿ ಪರಿವರ್ತಿತವಾಗುತ್ತಿದೆ.

ವ್ಯರ್ಥವಾದ ರಕ್ತದ ಪ್ರಮಾಣದ ಅಂಕಿ ಅಂಶ

ವ್ಯರ್ಥವಾದ ರಕ್ತದ ಪ್ರಮಾಣದ ಅಂಕಿ ಅಂಶ

ಕಳೆದ ವರ್ಷ, ಅಂದರೆ 2016-17ರಲ್ಲಿ ನಮ್ಮ ರಾಜ್ಯದಲ್ಲಿ ವ್ಯರ್ಥವಾದ ರಕ್ತದ ಪ್ರಮಾಣ 64, 913 ಲೀಟರ್. ಇದರಲ್ಲಿ 34,052 ಲೀಟರ್ ಗಳಷ್ಟು ರಕ್ತ ಅವಧಿ ಮೀರಿ ವ್ಯರ್ಥವಾಗಿದ್ದರೆ, ಸೋಂಕು ತಗುಲಿ ವ್ಯರ್ಥವಾದ ರಕ್ತದ ಪ್ರಮಾಣ 9,715 ಲೀಟರ್. ಇನ್ನು, ಡ್ಯಾಮೇಜ್ ಆಗಿರುವ ಪ್ಯಾಕೆಟ್ ಗಳು ಅಥವಾ ಗುಣಮಟ್ಟದ ಕೊರತೆಯಿಂದ ವ್ಯರ್ಥವಾದ ರಕ್ತದ ಪ್ರಮಾಣ 21,146 ಲೀಟರ್. ಬೆಚ್ಚಿಬೀಳಲು ಇಷ್ಟು ಸಾಕಲ್ಲವೇ?

ಆದರೆ, ಪರಿಹಾರ ಮಾತ್ರ ಇಲ್ಲ

ಆದರೆ, ಪರಿಹಾರ ಮಾತ್ರ ಇಲ್ಲ

ಹಿಂದಿನ ವರ್ಷವೂ ಅಂದರೆ, 2015-16ರಲ್ಲಿಯೂ ಹೆಚ್ಚುಕಡಿಮೆ ಇದೇ ಪ್ರಮಾಣದ ರಕ್ತವು ವ್ಯರ್ಥವಾಗಿದೆ. ಆಗ, 64,361 ಲೀಟರ್ ರಕ್ತ ವ್ಯರ್ಥವಾಗಿದೆ. ಅದಕ್ಕಿಂತಲೂ ಹಿಂದೆ, ಅಂದರೆ, 2014-15ರಲ್ಲಿ ಹೀಗೆ ವ್ಯರ್ಥವಾದ ರಕ್ತದ ಪ್ರಮಾಣ 59,263 ಲೀಟರ್ ಆಗಿತ್ತು. ಅಂದರೆ, ವರ್ಷದಿಂದ ವರ್ಷಕ್ಕೆ ವ್ಯರ್ಥವಾಗುತ್ತಿರುವ ರಕ್ತದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಆದರೆ, ಇದಕ್ಕೆ ಶಾಶ್ವತ ಪರಿಹಾರವನ್ನು ಮಾತ್ರ ಕಂಡುಕೊಳ್ಳಲಾಗಿಲ್ಲ.

ವೈದ್ಯರು ಏನಂತಾರೆ?

ವೈದ್ಯರು ಏನಂತಾರೆ?

ನಾವು ಉಪಯೋಗಿಸುವ ಔಷಧಿಗಳಿಗೆ ಹೇಗೆ ಎಕ್ಸ್ ಪೈಯರಿ ಡೇಟ್ ಇರುತ್ತದೋ, ಹಾಗೆಯೇ ರಕ್ತಕ್ಕೂ ಎಕ್ಸ್ ಪೈಯರಿ ಡೇಟ್ ಇರುತ್ತದೆ ಎನ್ನುತ್ತಾರೆ ವೈದ್ಯರು. ಅವರು ಹೇಳೋ ಪ್ರಕಾರ, ಯಾವುದೇ ರಕ್ತ 5 ದಿನದ ಮೇಲ್ಪಟ್ಟು ಉಳಿಯುವುದಿಲ್ಲ. ಆದರೆ, ಕೇವಲ ಕೆಂಪು ರಕ್ತ ಕಣಗಳಿರುವ ರಕ್ತವು 35 ದಿನಗಳವರೆಗೆ ಇರುತ್ತದೆ. ಕೆಂಪು ರಕ್ತ ಕಣಗಳು ಹಾಗೂ ಕೆಲವು ಹೆಚ್ಚುವರಿ ದ್ರವ್ಯಗಳುಳ್ಳ ರಕ್ತವು 42 ದಿನಗಳವರೆಗೆ ಇರುತ್ತದೆ. ಈ ಅವಧಿಗಳೊಳಗೆ ಈ ರಕ್ತವನ್ನು ಉಪಯೋಗಿಸದಿದ್ದರೆ, ಅವನ್ನು ಎಸೆಯುವುದು ಅನಿವಾರ್ಯವಾಗುತ್ತದೆ. ತಾಜಾ ಘನೀಕೃತ ಪ್ಲಾಸ್ಮಾ ಇರುವ, ಕ್ರಿಯೋ ಪ್ರೆಸಿಪಿಟೇಟ್ ಹಾಗೂ ಸಿಪಿಪಿ ಮಾದರಿಯ ರಕ್ತವನ್ನು ಮಾತ್ರ 5 ವರ್ಷಗಳವರೆಗೆ ಕಾಯ್ದಿರಿಸಬಹುದು ಎನ್ನುತ್ತಾರೆ.

ಸರ್ಕಾರವೂ ಭರವಸೆ ಕೊಟ್ಟಿದೆ

ಸರ್ಕಾರವೂ ಭರವಸೆ ಕೊಟ್ಟಿದೆ

ಆದರೆ, ಇದಕ್ಕೆ ಬ್ಲಡ್ ಬ್ಯಾಂಕ್ ಗಳಲ್ಲಿ ಅಗತ್ಯವಿರುವ ತಂತ್ರಜ್ಞಾನದ ಕೊರತೆ ಅಥವಾ ಕಳಪೆ ನಿರ್ವಹಣೆಯೂ ಹೀಗೆ ರಕ್ತವು ತ್ಯಾಜ್ಯವಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಸದನದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ರಕ್ತ ನಿಧಿ ಭಂಡಾರಗಳ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

English summary
Despite the demand for blood and blood donors in hospitals and blood banks, a whopping number of blood units are wasted every year. Contrary to supply and demand, the increasing number of blood units is wasted every day!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X