ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಕಡಿಮೆ 'ಆಕ್ಟಿವ್ ಕೇಸ್' ಹೊಂದಿರುವ ಕರ್ನಾಟಕದ ಐದು ಜಿಲ್ಲೆಗಳು

|
Google Oneindia Kannada News

ಬೆಂಗಳೂರು, ಜುಲೈ 6: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಟಾಪ್ ಹತ್ತರೊಳಗೆ ಕರ್ನಾಟಕ ಗುರುತಿಸಿಕೊಂಡಿದೆ. ಒಂದು ಹಂತದಲ್ಲಿ ಇತರೆ ರಾಜ್ಯಗಳಿಗೆ ಮಾದರಿ ಎನಿಸಿಕೊಂಡಿದ್ದ ಕರ್ನಾಟಕ ಈಗ ಗಂಭೀರ ಸ್ಥಿತಿ ತಲುಪಿತ್ತಿದೆ.

Recommended Video

Kushal Mendis arrested ಶ್ರೀಲಂಕಾ ಕ್ರಿಕೆಟಿಗರ್ ಕುಸಾಲ್ ಮೆಂಡಿಸ್ ಅರೆಸ್ಟ್ | Oneindia Kannada

ಈವರೆಗೂ ರಾಜ್ಯದಲ್ಲಿ 23,474 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ 9847 ಜನರು ಗುಣಮುಖರಾಗಿದ್ದು, 13,251 ಕೇಸ್‌ಗಳು ಸಕ್ರಿಯವಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲೇ 8167 ಕೇಸ್‌ ಆಕ್ಟಿವ್ ಆಗಿದೆ.

ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ: ಈ 4 ಜಿಲ್ಲೆಗಳು ಅತಿ ಕಡಿಮೆ ಕೇಸ್ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ: ಈ 4 ಜಿಲ್ಲೆಗಳು ಅತಿ ಕಡಿಮೆ ಕೇಸ್

ಬೆಂಗಳೂರು, ಕಲಬುರಗಿ, ದಕ್ಷಿಣ ಕನ್ನಡ, ಬಳ್ಳಾರಿ, ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಕರ್ನಾಟಕ ಅತಿ ಕಡಿಮೆ ಆಕ್ಟಿವ್ ಕೇಸ್ ಹೊಂದಿರುವ ಟಾಪ್ ಐದು ಜಿಲ್ಲೆಗಳ ಅಂಕಿ ಅಂಶ ಇಲ್ಲಿದೆ. ಮುಂದೆ ಓದಿ....

ಕೋಟೆನಾಡು ಚಿತ್ರದುರ್ಗ

ಕೋಟೆನಾಡು ಚಿತ್ರದುರ್ಗ

ಕರ್ನಾಟಕದಲ್ಲಿ ಅತಿ ಕಡಿಮೆ ಆಕ್ಟಿವ್ ಕೇಸ್ ಹೊಂದಿರುವ ಜಿಲ್ಲೆ ಚಿತ್ರದುರ್ಗ. ಕೋಟೆನಾಡಿನಲ್ಲಿ ಜುಲೈ 5ರ ವರದಿಯಂತೆ 35 ಮಂದಿ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿತ್ರದುರ್ಗ ದಲ್ಲಿ ಒಟ್ಟು 83 ಮಂದಿಗೆ ಸೋಂಕು ತಗುಲಿದೆ. 48 ಜನರು ಚೇತರಿಸಿಕೊಂಡಿದ್ದಾರೆ. ಈ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಕಾಫಿನಾಡು ಚಿಕ್ಕಮಗಳೂರು ಎಷ್ಟಿದೆ?

ಕಾಫಿನಾಡು ಚಿಕ್ಕಮಗಳೂರು ಎಷ್ಟಿದೆ?

ಚಿಕ್ಕಮಗಳೂರಿನಲ್ಲಿ ಒಟ್ಟು 42 ಕೇಸ್‌ಗಳು ಸಕ್ರಿಯವಾಗಿದೆ. ಈ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94. ಇದರಲ್ಲಿ 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕೊವಿಡ್-19 ಸ್ಫೋಟ: 1925 ಮಂದಿಗೆ ಅಂಟಿದ ಮಹಾಮಾರಿ!ಕರ್ನಾಟಕದಲ್ಲಿ ಕೊವಿಡ್-19 ಸ್ಫೋಟ: 1925 ಮಂದಿಗೆ ಅಂಟಿದ ಮಹಾಮಾರಿ!

ಮೂರನೇ ಜಿಲ್ಲೆ ದಾವಣಗೆರೆ

ಮೂರನೇ ಜಿಲ್ಲೆ ದಾವಣಗೆರೆ

ದಾವಣಗೆರೆಯಲ್ಲಿ ಪ್ರಸ್ತುತ 44 ಸಕ್ರಿಯ ಕೇಸ್‌ಗಳು ವರದಿಯಲ್ಲಿವೆ. ನಿನ್ನೆಯವರೆಗೂ ಜಿಲ್ಲೆಯಲ್ಲಿ ಒಟ್ಟು 356 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 301 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 11 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

ಕೊಪ್ಪಳದಲ್ಲಿ ಎಷ್ಟು ಆಕ್ಟಿವ್ ಕೇಸ್?

ಕೊಪ್ಪಳದಲ್ಲಿ ಎಷ್ಟು ಆಕ್ಟಿವ್ ಕೇಸ್?

ಕೊಪ್ಪಳದಲ್ಲಿ ಇನ್ನೂ 51 ಕೇಸ್ ಸಕ್ರಿಯವಾಗಿದೆ. ಈವರೆಗೂ ಜಿಲ್ಲೆಯಲ್ಲಿ 130 ಜನರಿಗೆ ಮಹಾಮಾರಿ ವಕ್ಕರಿಸಿತ್ತು. ಅದರಲ್ಲಿ 77 ಜನರು ಗುಣಮುಖರಾಗಿದ್ದಾರೆ. ಇಬ್ಬರು ಕೊವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಕೊಡಗಿನಲ್ಲಿ ಸಕ್ರಿಯ ಕೇಸ್ ಎಷ್ಟಿದೆ?

ಕೊಡಗಿನಲ್ಲಿ ಸಕ್ರಿಯ ಕೇಸ್ ಎಷ್ಟಿದೆ?

ಕೊಡಗಿನಲ್ಲಿ ಒಟ್ಟು 76 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಅದರಲ್ಲಿ ಕೇವಲ ಮೂರು ಜನ ಮಾತ್ರ ಚೇತರಿಸಿಕೊಂಡಿದ್ದಾರೆ. ಇನ್ನೂ 73 ಮಂದಿ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಡಗಿನಲ್ಲೂ ಯಾವುದೇ ಸಾವು ವರದಿಯಾಗಿಲ್ಲ. ಇನ್ನುಳಿದಂತೆ ಬೆಳಗಾವಿಯಲ್ಲಿ 75 ಕೇಸ್, ಚಿಕ್ಕಬಳ್ಳಾಪುರದಲ್ಲಿ 79 ಕೇಸ್, ಬಾಗಲಕೋಟೆಯಲ್ಲಿ 88 ಕೇಸ್ ಆಕ್ಟಿವ್ ಆಗಿದೆ.

English summary
Chikkamagaluru, Chitradurga, Davanagere, Kodagu and koppal districts have lowest active COVID19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X