ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಎಂ ಹುದ್ದೆ ಆಸೆ ಇಟ್ಟುಕೊಂಡವರಿಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್!

|
Google Oneindia Kannada News

ಬೆಂಗಳೂರು, ಆ. 02: ಮುಖ್ಯಮಂತ್ರಿ ಹುದ್ದೆಗೆ ರೇಸ್‌ನಲ್ಲಿದ್ದವರು, ಅದು ತಪ್ಪಿದ್ದರಿಂದ ಉಪ ಮುಖ್ಯಮಂತ್ರಿ ಆದರೂ ಆಗಬಹುದು ಎಂಬ ಲೆಕ್ಕಾಚಾರವನ್ನಿಟ್ಟುಕೊಂಡಿದ್ದರು. ಆದರೆ ಅವರಿಗೆ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ ಎಂಬ ಮಾಹಿತಿ ದೆಹಲಿಯಿಂದ ಬಂದಿದೆ.

Recommended Video

CM ಆಗೋಕಂತು ಆಗ್ಲಿಲ್ಲ DCM ಸ್ಥಾನ ಸಿಗುತ್ತೆ ಅಂದುಕೊಂಡೋರಿಗೆ ಶಾಕ್ ಕೊಟ್ಟ ಹೈ ಕಮಾಂಡ್ | Oneindia Kannada

ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ಇದೀಗ ಸಚಿವ ಸಂಪುಟ ವಿಸ್ತರಣೆ ಕಸರತ್ತು ಬಿಜೆಪಿಯಲ್ಲಿ ನಡೆದಿದೆ. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಕಳೆದ ಜುಲೈ 30 ರಂದು ದೆಹಲಿಗೆ ತೆರಳಿದ್ದ ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದರು. ಸಂಪುಟ ವಿಸ್ತರಣೆ ಕುರಿತು ಪಕ್ಷದ ವರಿಷ್ಠರು ಆಗ ಏನೂ ಹೇಳಿರಲಿಲ್ಲ.

ಎರಡು ವರ್ಷಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾಗಲೂ, ಸಂಪುಟ ರಚನೆಗೆ ಹೈಕಮಾಂಡ್ ಎರಡು ತಿಂಗಳು ಒಪ್ಪಿಗೆ ಕೊಟ್ಟಿರಲಿಲ್ಲ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ವಾರವಾಗುತ್ತ ಬಂದಿದ್ದರೂ ಏಕವ್ಯಕ್ತಿ ಸಚಿವ ಸಂಪುಟದಲ್ಲಿಯೇ ಸರ್ಕಾರ ನಡೆಯುತ್ತಿದೆ. ಇವತ್ತು ಅಥವಾ ನಾಳೆ ದೆಹಲಿಯಲ್ಲಿಯೇ ಸಚಿವ ಸಂಪುಟ ಅಂತಿಮವಾಗಲಿದೆ ಎಂಬ ಮಾಹಿತಿ ಬಂದಿದೆ.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಲಿದ್ದಾರೆ. ನಿನ್ನೆ ತಡರಾತ್ರಿವೆರೆಗೂ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಷಿ ಅವರೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಲಿರುವವರ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಜೊತೆಗೆ ಡಿಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಕೊಟ್ಟಿರುವ ಶಾಕ್ ಏನು? ಮುಂದಿದೆ.

ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದಾರೆ. "ಇಂದು ಸಂಜೆ ನಮ್ಮ ಪಕ್ಷದ ಪ್ರಮುಖ ಜೊತೆ ಸಭೆ ಇದೆ. ಸಭೆಯಲ್ಲಿ ಸಂಪುಟ ರಚನೆ ಕುರಿತು ತೀರ್ಮಾನ ಆಗುತ್ತದೆ. ಸಧ್ಯದ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ. ಅದಕ್ಕಾಗಿ ಪ್ರಮುಖ ಸೂತ್ರ ಇದೆ. ಎಷ್ಟು ಸಚಿವ ಸಂಪುಟವನ್ನು ಎಷ್ಟು ಜನ ಸೇರುತ್ತಾರೆ? ಎಷ್ಟು ಹಂತದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂಬುದು ತೀರ್ಮಾನವಾಗಲಿದೆ. ಉಪ ಮುಖ್ಯಮಂತ್ರಿ ಹುದ್ದೆ ಇರಬೇಕಾ? ಬೇಡವಾ? ಎಲ್ಲ ಚರ್ಚೆಯೂ ಆ ಸಭೆಯಲ್ಲಿ ಆಗುತ್ತದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ಈ ಬಗ್ಗೆ ಹೈಕಮಾಂಡ್ ಈಗಾಗಲೇ ತೀರ್ಮಾನ ಮಾಡಿದೆ ಎನ್ನಲಾಗುತ್ತಿದೆ. ಏನದು ಹೈಕಮಾಂಡ್ ತೀರ್ಮಾನ? ಮುಂದಿದೆ.

ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಆಗುತ್ತಾ? ಇಲ್ಲವಾ?

ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಆಗುತ್ತಾ? ಇಲ್ಲವಾ?

ಮುಖ್ಯಮಂತ್ರಿ ಆಯ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಸೂಚನೆಯಂತೆ ಆಗಿದೆ. ಹೀಗಾಗಿ ಸಂಪುಟದಲ್ಲಿ ಅವರು ಸೂಚಿಸುವವರಿಗೆ ಮಂತ್ರಿಸ್ಥಾನ ಸಿಗುತ್ತದೆಯಾ? ಎಂಬ ಚರ್ಚೆ ಇದೀಗ ಬಿಜೆಪಿ ವಲಯದಲ್ಲಿ ನಡೆದಿತ್ತು.

ರಾಜ್ಯ ಬಿಜೆಪಿ ನಾಯಕರಿಗೆ ಈ ಮಧ್ಯೆ ಹೈಕಮಾಂಡ್ ಮತ್ತೊಂದು ಶಾಕ್ ಕೊಟ್ಟಿದೆ. ಕಳೆದ ಬಾರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಹೀಗಾಗಿ ಈ ಬಾರಿ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಲು ಐವರು ಡಿಸಿಎಂಗಳಾಗಲಿದ್ದಾರೆ ಎಂಬ ಮಾಹಿತಿಯೂ ಇತ್ತು. ಜೊತೆಗೆ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆಯಲ್ಲಿಯೇ ಮೂವರು ಸಚಿವರಾಗುತ್ತಾರೆ. ಅವರನ್ನು ಡಿಸಿಎಂ ಮಾಡಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಬಂದಿತ್ತು.

ಆದರೆ ಇದೀಗ ಯಾವುದೇ ಡಿಸಿಎಂ ಹುದ್ದೆ ಬೇಡ ಎಂಬ ತೀರ್ಮಾನಕ್ಕೆ ಬಿಜೆಪಿ ವರಿಷ್ಠರು ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೂ ಉಪ ಮುಖ್ಯಮಂತ್ರಿಯಾಗಬಹುದು ಎಂದುಕೊಂಡಿದ್ದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರ ಕಾರ್ಯಕ್ಷಮತೆ ನೋಡಿಕೊಂಡು ಈ ಸಲ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಹೀಗಾಗಿ ಯಡಿಯೂರಪ್ಪ ಸಂಪುಟದಲ್ಲಿನ ಹಿರಿಯ ಶಾಸಕರಿಗೆ ಈಗ ಅವಕಾಶ ಸಿಗುತ್ತದೆಯಾ? ಎಂಬ ಆತಂಕ ಶುರುವಾಗಿದೆ. ಮತ್ತೊಂದೆಡೆ ಯುವ ಶಾಸಕರಿಗೆ ಹೆಚ್ಚಿನ ಅವಕಾಶ ಕೊಡಲು ಹೈಕಮಾಂಡ್ ನಿರ್ಧಾರ ಮಾಡಿದೆ.

ಆಗಸ್ಟ್ 5 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ?

ಆಗಸ್ಟ್ 5 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ?

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಆರು (ಜುಲೈ 28) ದಿನಗಳಾಗಿವೆ. ಆದರೆ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಇದೀಗ ಸಂಪುಟ ಸೇರಲು ಉತ್ಸುಕರಾಗಿರುವ ಶಾಸಕರಿಗೆ ಸಿಹಿ ಸುದ್ದಿಯನ್ನು ಹೈಕಮಾಂಡ್ ಕೊಟ್ಟಿದೆ. ನಾಡಿದ್ದು ಅಂದರೆ ಆಗಸ್ಟ್‌ 5 ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ ಎಂದು ತಿಳಿದು ಬಂದಿದೆ. ಒಂದೇ ಬಾರಿಗೆ ಸಂಪುಟ ವಿಸ್ತರಣೆ ಮಾಡಿ ಮುಗಿಸಲು ಹೈಕಮಾಂಡ್ ತೀರ್ಮಾನ ಮಾಡಿದೆ. ಆದರೆ ಒಂದು ಅಥವಾ ಎರಡು ಸ್ಥಾನಗಳನ್ನು ಖಾಲಿ ಇಡಲು ತೀರ್ಮಾನ ಮಾಡಲಾಗಿದ್ದು, ಆಗಸ್ಟ್ 5ರಂದು ಎಲ್ಲ 30 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿಯಿದೆ.

ರಾಜ್ಯದ ವಿಧಾನಸಭಾ ಶಾಸಕರ ಸಂಖ್ಯೆಗೆ ತಕ್ಕಂತೆ ಒಟ್ಟು 34 ಜನರು ಮಂತ್ರಿಗಳಾಗಬಹುದು. ಈಗಾಗಲೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ಇನ್ನು ಉಳಿದಿರುವ 30 ಮಂತ್ರಿ ಸ್ಥಾನಗಳನ್ನು ಒಮ್ಮೆಲೆ ಭರ್ತಿ ಮಾಡಲು ಹೈಕಮಾಂಡ್ ತೀರ್ಮಾನ ಮಾಡಿದೆ. ಇದು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಿಗೆ ಆತಂಕ ಸೃಷ್ಟಿಸಿದೆ. ಈಗ ಮಂತ್ರಿಯಾಗದಿದ್ದರೆ ಉಳಿದ ಎರಡು ವರ್ಷಗಳ ಅವಧಿಯಲ್ಲಿ ಮತ್ತೆ ಮಂತ್ರಿಸ್ಥಾನ ಸಿಗುವುದಿಲ್ಲ ಎಂಬುದು ಶಾಸಕರ ಆತಂಕಕ್ಕೆ ಕಾರಣ.

ಬೊಮ್ಮಾಯಿ ಸಂಪುಟ ಸೇರಲಿರುವ ಸಂಭವನೀಯರ ಪಟ್ಟಿ ಇಲ್ಲಿದೆ

ಬೊಮ್ಮಾಯಿ ಸಂಪುಟ ಸೇರಲಿರುವ ಸಂಭವನೀಯರ ಪಟ್ಟಿ ಇಲ್ಲಿದೆ

ಸಚಿವರಾಗುವ ಶಾಸಕರ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿಯಿದೆ. ಜೊತೆಗೆ ಸಿಎಂ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರಲಿರುವ ಸಂಭವನೀಯರ ಪಟ್ಟಿಯೊಂದು ಲಭ್ಯವಾಗಿದ್ದು, ಅದು ಹೀಗಿದೆ.

1. ಆರ್. ಅಶೋಕ

2. ಬಿ. ಶ್ರೀರಾಮುಲು

3. ಅರವಿಂದ ಲಿಂಬಾವಳಿ

4. ಡಾ. ಅಶ್ವಥ್ ನಾರಾಯಣ

5. ಜೆ.ಸಿ. ಮಾಧುಸ್ವಾಮಿ

6. ಮುರುಗೇಶ್ ನಿರಾಣಿ

7. ಅರವಿಂದ ಬೆಲ್ಲದ್

8. ಬಸನಗೌಡ ಪಾಟೀಲ್ ಯತ್ನಾಳ್

9. ಬಾಲಚಂದ್ರ ಜಾರಕಿಹೊಳಿ

10. ಭೈರತಿ ಬಸವರಾಜ್

11. ಎಸ್‌.ಟಿ. ಸೋಮಶೇಖರ್

12. ಡಾ. ಕೆ. ಸುಧಾಕರ್

13. ಕೆ. ಗೋಪಾಲಯ್ಯ

14. ಉಮೇಶ್ ಕತ್ತಿ

15. ಎಸ್.ಎ. ರಾಮದಾಸ್

16. ಪಿ. ರಾಜೀವ್

17. ಬಿ.ಸಿ. ಪಾಟೀಲ್

18. ದತ್ತಾತ್ರೆಯ ಪಾಟೀಲ್ ರೇವೂರ್

19. ರಾಜೂಗೌಡ

20. ಪೂರ್ಣಿಮ ಶ್ರೀನಿವಾಸ

21. ಎಂ.ಪಿ. ರೇಣುಕಾಚಾರ್ಯ

22. ಅರಗ ಜ್ಞಾನೇಂದ್ರ

23. ಪ್ರೀತಮ್ ಗೌಡ

24. ಎಸ್. ಅಂಗಾರ

25. ತಿಪ್ಪಾರೆಡ್ಡಿ

26. ವಿ. ಸುನೀಲ್ ಕುಮಾರ್ ನಾಯಕ್

27. ಶಿವರಾಂ ಹೆಬ್ಬಾರ್

28. ಕೆ.ಎಸ್. ಈಶ್ವರಪ್ಪ

29. ವಿ. ಸೋಮಣ್ಣ

30. ಕೋಟ ಶ್ರೀನಿವಾಸ ಪೂಜಾರಿನ (ವಿಧಾನ ಪರಿಷತ್ ಸದಸ್ಯ)

English summary
There have been reports that the BJP High Command has decided not to create the Deputy Chief Minister post in Karnataka Cabinet. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X