ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬ ಯೋಜನೆಗೆ ಎಷ್ಟೆಲ್ಲಾ ಆಯ್ಕೆಗಳಿವೆ ಆದರೆ ಬಳಸುವರು ಕಡಿಮೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 29: ಕುಟುಂಬ ಯೋಜನೆ ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದು ಎರಡೇ. ಒಂದು ಕಾಂಡೋಮ್ ಬಳಕೆ ಮತ್ತೊಂದು ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ. ಆದರೆ ಇದಕ್ಕೆ ಇನ್ನೂ ಹಲವು ಸುರಕ್ಷಿತ ಹಾಗೂ ಪರಿಣಾಮಕಾರಿ ಆಯ್ಕೆಗಳಿವೆ.

ಹೌದು ಕಾಂಡೋಮ್ ಬಳಕೆ ಮತ್ತು ಗರ್ಭಕೋಶ ಶಸ್ತ್ರಚಿಕಿತ್ಸೆ ಮಾತ್ರವೇ ಅಲ್ಲದೆ ಹಲವು ಸುಲಭ ಪರಿಣಾಮಕಾರಿ ಆಯ್ಕೆಗಳು ಗರ್ಭ ನಿರೋಧಕತೆಗೆ ಇವೆ ಆದರೆ ಮಾಹಿತಿಯ ಕೊರತೆಯಿಂದಾಗಿ ಅವುಗಳ ಕಡೆ ಜನರ ಗಮನ ಹರಿದಿಲ್ಲ.

ಕುಟುಂಬ ಯೋಜನೆ ಕುರಿತ ಈ ಅಂಕಿ ಅಂಶ ಗಾಬರಿಗೊಳಿಸುತ್ತದೆ ಕುಟುಂಬ ಯೋಜನೆ ಕುರಿತ ಈ ಅಂಕಿ ಅಂಶ ಗಾಬರಿಗೊಳಿಸುತ್ತದೆ

ಈಗಿರುವ ಗರ್ಭ ನಿರೋಧಕ ಪ್ರಕ್ರಿಯೆಗಳು ಬಹುತೇಕ ಮಹಿಳೆಯರ ಮೇಲೆಯೇ ಹೇರಲಾಗುತ್ತಿದೆ. ಕೆಲವು ಪುರಷರಿಗೂ ಇವೆಯಾದರೂ ಹೆಚ್ಚಿನ ಪಾಲು ಮಹಿಳೆಯರವೇ. ಅವುಗಳಲ್ಲಿ ಕೆಲವು ಅಸುರಕ್ಷಿತವೂ, ಮಹಿಳೆಯರಿಗೆ ಹೊರೆಯಾಗಬಲ್ಲವೂ ಇವೆ. ಹಾಗಾಗಿ ಆಧುನಿಕ ಪದ್ಧತಿಯೆಡೆಗೆ ವಾಲಲೇ ಬೇಕಾದ ಪರಿಸ್ಥಿತಿ ಇದೆ.

ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ! ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ!

ಕುಟುಂಬ ಯೋಜನೆ ಅಥವಾ ಗರ್ಭ ನಿರೋಧಕ್ಕೆ ಭಾರತದಲ್ಲಿ ಅವಕಾಶ ಇರುವ ಪದ್ಧತಿಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಜನಪ್ರಿಯ ಪದ್ಧತಿ ಕಾಂಡೋಮ್ ಬಳಕೆ

ಜನಪ್ರಿಯ ಪದ್ಧತಿ ಕಾಂಡೋಮ್ ಬಳಕೆ

ಕುಟುಂಬ ಯೋಜನೆಗೆ ಪ್ರಚಲಿತದಲ್ಲಿರುವ ಜನಪ್ರಿಯ ಪದ್ಧತಿ ಕಾಂಡೋಮ್ ಬಳಕೆ. ಇದು ಗರ್ಭ ನಿರೋಧಿಸುವ ಜೊತೆಗೆ ಲೈಂಗಿಕ ಸೋಂಕಿನಿಂದಲೂ ದೂರ ಇಡುತ್ತದೆ. ಇದು ಕಡಿಮೆ ಖರ್ಚಿನ ಜೊತೆಗೆ ಸುಲಭ ಉಪಾಯವೂ ಹೌದು ಆದರೆ ಭಾರತದಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಕೇವಲ 5.6% ಅಷ್ಟೆ ಅಂತೆ.

ಐಯುಸಿಡಿ ಅಳವಡಿಕೆ

ಐಯುಸಿಡಿ ಅಳವಡಿಕೆ

ಮಹಿಳೆಯರ ಗರ್ಭಕೋಶಕ್ಕೆ ಐಯುಸಿಡಿ ಎಂಬ ಸಣ್ಣ ಸಾಧನವನ್ನು ಅಳವಡಿಸಲಾಗುತ್ತದೆ ಇದು ಗರ್ಭ ನಿರೋಧಿಸುತ್ತದೆ. ಮಗು ಬೇಕೆನಿಸಿದಾಗ ಈ ಸಾಧನವನ್ನು ತೆಗೆಸಿದರೆ ಗರ್ಭ ಧರಿಸಬಹುದಾಗಿದೆ.

ಇಂಜೆಕ್ಷನ್‌ಗಳ ಬಳಕೆ

ಇಂಜೆಕ್ಷನ್‌ಗಳ ಬಳಕೆ

ಕಾಂಡೋಮ್, ಮಾತ್ರೆಯ ಬಳಕೆ ನಂತರ ಈಗ ಹೊಸದಾಗಿ ಇಂಜೆಕ್ಷನ್‌ ಬಳಕೆ ಚಾಲ್ತಿಗೆ ಬಂದಿದೆ. ಇದು ಸುರಕ್ಷಿತ ಮತ್ತು ಅತ್ಯಂತ ಸುಲಭ ಪದ್ಧತಿಯಾಗಿದೆ. ತಜ್ಞ ವೈದ್ಯರ ಸಲಹೆ ಪಡೆದು ಈ ಚುಚ್ಚುಮದ್ದು ತೆಗೆದುಕೊಳ್ಳಬೇಕು.

ಗರ್ಭ ನಿರೋಧಕ ಮಾತ್ರೆಗಳ ಬಳಕೆ

ಗರ್ಭ ನಿರೋಧಕ ಮಾತ್ರೆಗಳ ಬಳಕೆ

ಗರ್ಭ ನಿರೋಧಕಕ್ಕೆ ಮಾತ್ರೆಗಳು ಹೊಸ ಮತ್ತು ಸರಳ ವಿಧಾನ. ಅಸುರಕ್ಷಿತ ಲೈಂಗಿಕತೆ ಹಾಗೂ ಐಚ್ಛಿಕವಾಗಿ ಗರ್ಭ ಧರಿಸುವುದನ್ನು ಮುಂದೂಡಲು ಅಥವಾ ಗರ್ಭ ಧರಿಸದಿರಲು ಮಾತ್ರೆಗಳನ್ನು ಬಳಸಬಹುದಾಗಿದೆ. ಮಾತ್ರೆ ತೆಗೆದುಕೊಂಡರೆ ಅಡ್ಡ ಪರಿಣಾಮ ಆಗುತ್ತದೆ ಎಂಬ ಭಯದಿಂದ ಹಲವರು ಇದಕ್ಕೆ ಹಿಂಜರಿಯುತ್ತಿದ್ದಾರೆ ಆದರೆ ತಜ್ಞರ ಪ್ರಕಾರ ಇದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ.

ಗರ್ಭಕೋಶ ಶಸ್ತ್ರ ಚಿಕಿತ್ಸೆ

ಗರ್ಭಕೋಶ ಶಸ್ತ್ರ ಚಿಕಿತ್ಸೆ

ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿಸುವುದು ದೇಶದಾದ್ಯಂತ ಅತ್ಯಂತ ಪ್ರಚಲಿತದಲ್ಲಿರುವ ಪದ್ಧತಿ. ಮಹಿಳೆಯರಿಗೆ ಈ ಪದ್ಧತಿಯಿಂದ ಅಲ್ಪ ಒತ್ತಡವೂ ಆಗುತ್ತದೆ. ಕೆಲವು ಮಹಿಳೆಯರಿಗೆ ಅವರ ಆರೋಗ್ಯವನ್ನು ಆಧರಿಸಿ ಈ ಶಸ್ತ್ರಚಿಕಿತ್ಸೆ ಅಸುರಕ್ಷಿತವೆಂದೂ ಹೇಳಲಾಗುತ್ತದೆ. ಆದರೆ ದೇಶದಲ್ಲಿ ಈ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಹಿಳೆಯರ ಪ್ರಮಾಣ 36% ಇದೆ.

ಸಂತಾನಹರಣ ಶಸ್ತ್ರಚಿಕಿತ್ಸೆ

ಸಂತಾನಹರಣ ಶಸ್ತ್ರಚಿಕಿತ್ಸೆ

ಪುರುಷರ ಸಂತಾನ ಶಕ್ತಿ ಹರಣ ಮಾಡುವ ವ್ಯಾಸೆಕ್ಟೆಮಿ ಕುಟುಂಬ ಯೋಜನೆಯ ಉತ್ತಮ ವಿಧಾನ. ಈ ವಿಧಾನದಿಂದ ಮಹಿಳೆಯರ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಪುರುಷರಿಗೆ ಈ ಶಸ್ತ್ರ ಚಿಕಿತ್ಸೆಯಿಂದ ಹೆಚ್ಚಿನ ಸಮಸ್ಯೆ ಕೂಡ ಆಗದು. ಆದರೆ ಹಲವು ಕಾರಣದಿಂದ ಪುರುಷರು ಇದಕ್ಕೆ ಮುಂದೆ ಬರುತ್ತಿಲ್ಲ ದೇಶದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವರ ಸಂಖ್ಯೆ ಕೇವಲ 0.3%.

English summary
India's total fertility rate is 2.2, higher than the replacement level fertility rate of 2.1. There are so many ways of family planing in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X