ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಬಿದಿರೆಯ ಜೈನ ಬಸದಿಯಲ್ಲಿ ಮತ್ತೆ ಕಳ್ಳತನ

|
Google Oneindia Kannada News

ಉಡುಪಿ, ಅ.8 : ಮೂಡಬಿದಿರೆಯ ಜೈನ ಬಸದಿಯಲ್ಲಿ ಮತ್ತೊಮ್ಮೆ ಕಳ್ಳತನ ನಡೆದಿದೆ. ಅಮ್ಮನವರ ಬಸದಿಗೆ ನುಗ್ಗಿರುವ ಕಳ್ಳರು ಆರತಿ ತಟ್ಟೆ, ಕಾಣಿಕೆ ಹುಂಡಿಯ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಬಸದಿಯಲ್ಲಿದ್ದ ಹಲವು ಆಭರಣಗಳನ್ನು ಕೆಲವು ದಿನಗಳ ಹಿಂದೆ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದರಿಂದ ಅವುಗಳು ಕಳ್ಳರ ಪಾಲಾಗುವುದು ತಪ್ಪಿದೆ.

ಸೋಮವಾರ ರಾತ್ರಿ ಅಮ್ಮನವರ ಬಸದಿ ನುಗ್ಗಿದ ಕಳ್ಳರು ಹೊರಗಿನಿಂದ ಬೀಗವನ್ನು ಮುರಿದು ಗರ್ಭಗುಡಿ ಪ್ರವೇಶಿಸಿ ನಾಗನ 9 ಹೆಡೆಯ ಬೆಳ್ಳಿಯ ಆರತಿ ತಟ್ಟೆ, ಒಂದು ಬೆಳ್ಳಿಯ ಬಟ್ಟಲನ್ನು ದೋಚಿದ್ದಾರೆ. ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ನೋಟುಗಳನ್ನು ತೆಗೆದುಕೊಂಡು ಚಿಲ್ಲರೆಯಲ್ಲಿ ಬಸದಿಯ ಆವರಣದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

Ammanavara Basadi

ಮಂಗಳವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕಳ್ಳತನ ವಾಗಿರುವ ವಸ್ತುಗಳ ಮೌಲ್ಯ ನಿಖರವಾಗಿ ತಿಳಿದುಬಂದಿಲ್ಲ. ಜಿಲ್ಲಾ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. [ಹೀಗೂ ಉಂಟೆ! 12 ಜೈನ ವಿಗ್ರಹ ಅಂಚೆಯಲ್ಲಿ ವಾಪಸ್]

ಪೊಲೀಸರ ನಿರ್ದೇಶನ ಪಾಲಿಸಿಲ್ಲ : ಕಳೆದ ವರ್ಷ ಸಿದ್ಧಾಂತ ಮಂದಿರದಲ್ಲಿ ಕಳ್ಳತನವಾಗಿತ್ತು. ಬಸದಿಯಲ್ಲಿ ಕದ್ದಿದ್ದ ಮೂರ್ತಿಗಳನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗಿದ್ದ ಕಳ್ಳರು ಕೋರಿಯರ್ ಮೂಲಕ ಕೆಲವು ಮೂರ್ತಿಗಳನ್ನು ವಾಪಸ್ ಕಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. [ಜೈನ ವಿಗ್ರಹ ಕದ್ದಿದ್ದ ಸಂತೋಷ್ ದಾಸನಿಗೆ ಜಾಮೀನು]

ಸಿದ್ಧಾಂತ ಮಂದಿರದ ಕಳ್ಳತನ ನಡೆದ ಬಳಿಕ ಬಸದಿಯ ಸೂಕ್ತವಾದ ಭದ್ರತಾ ಕ್ರಮಗಳನ್ನು ತಗೆದುಕೊಳ್ಳಬೇಕು ಎಂದು ಪೊಲೀಸರು ನಿರ್ದೇಶನ ನೀಡಿದ್ದರು. ಎಲ್ಲ ಬಸದಿಗಳಿಗೆ ಸಿಸಿಟಿವಿ, ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದು ಸೂಚಿಸಿದ್ದರು. ಆದರೆ, ಈ ಕುರಿತ ಯಾವುದೇ ಆದೇಶಗಳು ಇನ್ನೂ ಪಾಲನೆಯಾಗಿಲ್ಲ.

ಬಸದಿಯಲ್ಲಿರುವ ಬೆಲೆಬಾಳುವ ವಿಗ್ರಹಗಳನ್ನು ಬ್ಯಾಂಕ್ ಲಾಕರ್‌ನಲ್ಲಿಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅಮ್ಮನವರ ಬಸದಿಯ ಕೆಲವು ಆಭರಣಗಳನ್ನು ಕೆಲವು ದಿನಗಳ ಹಿಂದೆ ಬ್ಯಾಂಕ್‌ನಲ್ಲಿಡಲಾಗಿತ್ತು. ಆದ್ದರಿಂದ ಅವುಗಳ ಕಳ್ಳರ ಪಾಲಾಗುವುದು ತಪ್ಪಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]

English summary
An offering box and a silver ‘Aarati’ were stolen from the Ammanavara Basadi in one of the 18 Jain basadis in Moodbidri, Mangalore on Monday night. A case had been registered at Udupi Town Police Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X