ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ಮಧ್ಯೆ ಶಾಕ್: ನಾಳೆಯಿಂದ ದುಬಾರಿಯಾಗಲಿದೆ ಮದ್ಯ

|
Google Oneindia Kannada News

ಬೆಂಗಳೂರು, ಮೇ 04: ಒಂದೂವರೆ ತಿಂಗಳುಗಳ ಬಳಿಕ ಆರಂಭವಾಗಿದ್ದ ಮದ್ಯದ ಅಂಗಡಿಗಳ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿದ್ದ ವ್ಯಸನಿಗಳ ಸಂತೋಷಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಲಾಕ್‌ಡೌನ್ ಮಧ್ಯೆ ಸರ್ಕಾರ ಶಾಕ್ ಮದ್ಯ ವ್ಯಸನಿಗಳಿಗೆ ಶಾಕ್ ಕೊಟ್ಟಿದ್ದು, ನಾಳೆಯಿಂದಲೇ ಮದ್ಯ ದುಬಾರಿಯಾಗಲಿದೆ. ಒಂದೂವರೆ ತಿಂಗಳುಗಳ ಬಳಿಕ ಸಂತೋಷದಿಂದ ಇವತ್ತು ಮದ್ಯ ಖರೀದಿಸಿ ಕುಡಿದವರ ಅಮಲು ಇಳಿಯುವ ಮುನ್ನವೆ ನಾಳೆ ಮದ್ಯ ದುಬಾರಿಯಾಗಲಿದೆ.

ಹೌದು ನಾಳೆಯಿಂದ ಶೇಕಡಾ 6ರಷ್ಟು ಹೆಚ್ಚು ದರ ಏರಿಕೆಗೆ ರಾಜ್ಯ ಅಬಕಾರಿ ಇಲಾಖೆ ತೀರ್ಮಾನ ಮಾಡಿದೆ. ಹೀಗಾಗಿ ನಾಳೆಯಿಂದಲೇ ಬಿಯರ್, ವಿಸ್ಕಿ, ರಮ್, ಬ್ರ್ಯಾಂದಿ ಸೇರಿದಂತೆ ಎಲ್ಲಾ ವಿಧದ ಮದ್ಯದ ಬೆಲೆಯಲ್ಲಿ ಹೆಚ್ಚಳವಾಗಲಿದೆ.

ಇವತ್ತು ಎಲ್ಲಾ ಮದ್ಯದಂಗಡಿಗಳಲ್ಲಿ ಹಳೆ ದರದಲ್ಲೆ ಮದ್ಯವನ್ನು ಮಾರಾಟ ಮಾಡಲಾಗಿತ್ತು. ಕಳೆದ ಬಜೆಟ್‌ನಲ್ಲಿಯೆ ದರ ಏರಿಕೆ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಅದು ಅನಿಷ್ಠಾನಕ್ಕೆ ಬರುವ ಮೊದಲೇ ಲಾಕ್‌ಡೌನ್‌ ಜಾರಿಯಾಗಿತ್ತು. ಹೀಗಾಗಿ ಹೊಸ ದರ ನಿಗದಿ ಆಗಿರಲಿಲ್ಲ.

The State Excise Department has decided to increase rates by 6 percent tomorrow

ಇದೀಗ ನಾಳೆಯಿಂದ ಶೇ.6 ರಷ್ಟು ಮದ್ಯದ ದರ ಏರಿಕೆಯಾಗುವ ಮೂಲಕ ಕೊರೊನಾ ಸಂಕಷ್ಟದ ನಡುವೆಯೂ ಮದ್ಯ ಏರಿಕೆ ಬಿಸಿಯನ್ನು ಅನುಭವಿಸಬೇಕಾಗಿದೆ. ಏಪ್ರಿಲ್ ೧ ರಿಂದ ಪೂರ್ವಾನ್ವಯ ಆಗುವಂತೆ ಅಬಕಾರಿ ಇಲಾಖೆಯಿಂದ ಈಗಾಗಲೇ ಆದೇಶ ಹಿಂದೆಯೇ ಜಾರಿ ಆಗಿದೆ.‌ ಲಾಕ್‌ಡೌನ್ ಕಾರಣಕ್ಕೆ ಅನುಷ್ಠಾನ ಆಗಿರಲಿಲ್ಲ. ನಾಳೆಯಿಂದ ಸರಬರಾಜು ಆಗುವ ಹೊಸ ಮದ್ಯಕ್ಕೆ ಹೊಸ ದರ ಅನ್ವಯ ಆಗುತ್ತದೆ.

English summary
Amidst the lockdown, the government has shocked alcohol addicts and will make alcohol more expensive tomorrow. After a month and a half of happiness, the liquor will be expensive tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X