ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ Vs ರಾಹುಲ್ : ಕರ್ನಾಟಕದಲ್ಲಿ ಗೆದ್ದಿದ್ದು ಯಾರು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 23 : ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೈಪೋಟಿಗೆ ಬಿದ್ದವರಂತೆ ಕರ್ನಾಟಕದುದ್ದಗಲಕ್ಕೂ ಸಂಚರಿಸಿ ತಮ್ಮ ಪಕ್ಷದ ಪರ ಪ್ರಚಾರ ಮಾಡಿದ್ದರು.

ಇವರಿಬ್ಬರು ಫೈರ್ ಬ್ರಾಂಡ್ ನಾಯಕರಲ್ಲಿ ಹೆಚ್ಚು ಯಶಸ್ವಿಯಾಗಿದ್ದು ಯಾರು? ಇವರು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಯಾವ ಪಕ್ಷ ಹೆಚ್ಚು ಗೆಲುವು ಕಂಡಿದೆ? ಇತ್ಯಾದಿ ವಿಷಯಗಳ ಬಗ್ಗೆ ಆರ್ಗನೈಸರ್ ನಲ್ಲಿ ತುಂಬಾ ಇಂಟರೆಸ್ಟಿಂಗ್ ಸಂಗತಿಗಳನ್ನು ಪ್ರಕಟ ಮಾಡಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸುಮಾರು, ಕಾರಣಗಳು ಆರುಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸುಮಾರು, ಕಾರಣಗಳು ಆರು

ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಸುಮಾರು 32 ಕ್ಷೇತ್ರಗಳಲ್ಲಿ ಪ್ರಚಾರ ಭಾಷಣ ಮಾಡಿದ್ದರು, ರೋಡ್ ಶೋಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು, ಕೇಂದ್ರ ಸರಕಾರವನ್ನು, ನರೇಂದ್ರ ಮೋದಿಯವರನ್ನು, ಯಡಿಯೂರಪ್ಪನವರನ್ನು ವಾಚಾಮಗೋಚರವಾಗಿ ತೆಗಳಿದ್ದರು.

ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರಕ್ಕೆ ಮುಂದಿದೆ ದಾಟಲು 5 ಸವಾಲುಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರಕ್ಕೆ ಮುಂದಿದೆ ದಾಟಲು 5 ಸವಾಲು

ರಾಹುಲ್ ಗಾಂಧಿಯವರು ಇಷ್ಟೆಲ್ಲ ಮಾಡಿದರೂ ಕಾಂಗ್ರೆಸ್ ಗೆದ್ದಿದ್ದು ಎಷ್ಟು ಕ್ಷೇತ್ರಗಳಲ್ಲಿ? ಕೇವಲ 17 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ಸಿಹಿ ಉಂಡಿದ್ದಾರೆ. ಅಂದರೆ, ಶೇ.53ರಷ್ಟು ಮಾತ್ರ ರಾಹುಲ್ ಸಂಚರಿಸಿದಲ್ಲಿ ಯಶ ಸಿಕ್ಕಿದೆ. ಉಳಿದಲ್ಲಿ ಸೋಲು ಕಂಡಿದ್ದಾರೆ.

ಉ.ಕರ್ನಾಟಕದ ಕರಾವಳಿ ಭಾಗದಲ್ಲಿ ರಾಹುಲ್ ಗೆ ಹೀನಾಯ ಸೋಲು

ಉ.ಕರ್ನಾಟಕದ ಕರಾವಳಿ ಭಾಗದಲ್ಲಿ ರಾಹುಲ್ ಗೆ ಹೀನಾಯ ಸೋಲು

ಭಾರೀ ನಿರಾಶೆ ಮೂಡಿಸಿದ್ದೆಂದರೆ ಉತ್ತರ ಕರ್ನಾಟಕದ ಕರಾವಳಿ ಭಾಗದಲ್ಲಿ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾಗಳಲ್ಲಿ ರಾಹುಲ್ ಗಾಂಧಿಯವರು ಭಾರೀ ಮಹತ್ವಾಕಾಂಕ್ಷೆಯಿಂದ ಪ್ರಚಾರ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ.

ಯೋಗಿ ಪ್ರಚಾರ ಮಾಡಿದ್ದ 35 ಕ್ಷೇತ್ರಗಳಲ್ಲಿ 23 ಕ್ಷೇತ್ರ ಜಯಭೇರಿ

ಯೋಗಿ ಪ್ರಚಾರ ಮಾಡಿದ್ದ 35 ಕ್ಷೇತ್ರಗಳಲ್ಲಿ 23 ಕ್ಷೇತ್ರ ಜಯಭೇರಿ

ಯೋಗಿ ಆದಿತ್ಯನಾಥ್ ಅವರು ಪ್ರಚಾರ ಮಾಡಿದ್ದು 35 ಕ್ಷೇತ್ರಗಳಲ್ಲಿ. ಅವುಗಳಲ್ಲಿ 23 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಸಂಪಾದಕೀಯದಲ್ಲಿ ಕಾಂಗ್ರೆಸ್ ಹೇಗೆ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂಬ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಕಾಂಗ್ರೆಸ್ ಇನ್ನೂ ಅಸ್ವಿತ್ವದಲ್ಲಿದೆ ಎಂಬುದರ ಪುರಾವೆಯಾಗಿ ರಾಹುಲ್ ಅವರು ಕುಮಾರಸ್ವಾಮಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ವಿರುದ್ಧವೇ ಜೆಡಿಎಸ್ ಗೆದ್ದಿದೆ

ಕಾಂಗ್ರೆಸ್ ವಿರುದ್ಧವೇ ಜೆಡಿಎಸ್ ಗೆದ್ದಿದೆ

ಕಾಂಗ್ರೆಸ್ ಜೊತೆ ಮಾಡಿಕೊಂಡಿರುವ ಈ ಮೈತ್ರಿಯಿಂದಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆಯೆ? ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ. ಸದ್ಯಕ್ಕೆ ಜೆಡಿಎಸ್ ಬಳಿ ಯಾವುದೇ ಸ್ಪಷ್ಟ ಸ್ಟ್ರಾಟಜಿಗಳಿಲ್ಲ, ಮುಂದೇನು ಮಾಡಬೇಕೆಂಬ ಯೋಜನೆಗಳಿಲ್ಲ. 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಡೆಪಾಸಿಟ್ ಕಳೆದುಕೊಂಡಿದ್ದಾರೆ. ತಮಾಷೆ ಅಂದ್ರೆ, ಹಳೆ ಮೈಸೂರು ಪ್ರಾಂತ್ಯದಲ್ಲಿ, ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಜೆಡಿಎಸ್ ಸೋಲಿಸಿದೆ. ಈಗ ಕಾಂಗ್ರೆಸ್ ಜೊತೆಯೇ ಮೈತ್ರಿ ಮಾಡಿಕೊಂಡಿರುವುದು ಪರಿಸ್ಥಿತಿಯ ವೈಚಿತ್ರ್ಯ ಮತ್ತು ವಿಪರ್ಯಾಸ.

ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿದ ಜನಾದೇಶ

ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿದ ಜನಾದೇಶ

ಪ್ರಜಾಪ್ರಭುತ್ವದಲ್ಲಿ ಅಂಕಿಸಂಖ್ಯೆಗಳಿಗೆ ಹೆಚ್ಚಿನ ಮಾನ್ಯತೆ. ಚುನಾವಣೆಯೆಂದ ಮೇಲೆ ಯಾವುದೇ ಪಕ್ಷವಾಗಲಿ, ಚುನಾವಣಾಪೂರ್ವವಾಗಲಿ ಚುನಾವಣೋತ್ತರವಾಗಿಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತಕ್ಕೆ ಸೆಣಸುತ್ತದೆ. ಆದರೆ, ಜನಾದೇಶವೆಂದರೆ ಬರೀ ಅಂಕಿಸಂಖ್ಯೆ ಮಾತ್ರವಲ್ಲ. ಅದು ರಾಜಕೀಯ ಪಕ್ಷಗಳಿಗೆ ಮತ್ತು ಇಡೀ ದೇಶಕ್ಕೆ ಒಂದು ಸಂದೇಶವನ್ನು ರವಾನಿಸಿರುತ್ತದೆ. ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೂ, ಎಲ್ಲ ರಾಜಕೀಯ ಪಕ್ಷಗಳಿಗೆ ಒಂದು ಪಾಠ ಕಲಿಸಿದೆ ಮತ್ತು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಅದನ್ನು ತಿಳಿದುಕೊಳ್ಳುವುದು ರಾಜಕೀಯ ಪಕ್ಷಗಳಿಗೆ ಮತ್ತು ಅದರ ನಾಯಕರ ವಿವೇಚನೆಗೆ ಬಿಟ್ಟಿದ್ದು.

ಆಡಳಿತ ವಿರೋಧಿ ಅಲೆ ಇದ್ದದ್ದು ಸ್ಪಷ್ಟ

ಆಡಳಿತ ವಿರೋಧಿ ಅಲೆ ಇದ್ದದ್ದು ಸ್ಪಷ್ಟ

ಕರ್ನಾಟಕದಲ್ಲಿ ಆಡಳಿತ ವಿರೋಧಿ ಇರುವುದು ಮೇ 15ರಂದು ಪ್ರಕಟವಾದ ಚುನಾವಣಾ ಫಲಿತಾಂಶದಿಂದಲೇ ಸಾಬೀತಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಎತ್ತಿಕೊಂಡು ಕಾಂಗ್ರೆಸ್ ರಾಜಕೀಯ ಮಾಡಿದ್ದು ಕೂಡ ಕಾಂಗ್ರೆಸ್ಸಿಗೆ ಮುಳುವಾಗಿದೆ. ಲಿಂಗಾಯತರು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ. ಆಡಳಿತದ ಬಗ್ಗೆಯೂ ಜನರಿಗೆ ಅಸಮಾಧಾನವಿದ್ದಿದ್ದು ಋಜುವಾತಾಗಿದೆ. ಏಕೆಂದರೆ ಕಾಂಗ್ರೆಸ್ ಆಡಳಿತದಲ್ಲಿ ಸಚಿವರಾಗಿದ್ದವರೇ ಹೀನಾಯವಾಗಿ ಸೋತಿದ್ದಾರೆ ಅನ್ನುವುದಕ್ಕಿಂತ ಜನರೇ ಸೋಲಿಸಿ ಮನೆಗೆ ಕಳಿಸಿದ್ದಾರೆ. ಇದರಿಂದಾಗಿಯಾದರೂ ಕಾಂಗ್ರೆಸ್ ಪಾಠ ಕಲಿಯುವುದಾ?

ನರೇಂದ್ರ ಮೋದಿ ಮಾಡಿದ ಮೋಡಿ

ನರೇಂದ್ರ ಮೋದಿ ಮಾಡಿದ ಮೋಡಿ

ಬಿಜೆಪಿಯ ಯಶಸ್ಸನ್ನು ಕೂಡ ಆರ್ಗನೈಸರ್ ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದ್ದು, ಯಡಿಯೂರಪ್ಪನವರ ಸಮರ್ಥ ನಾಯಕತ್ವ ಮತ್ತು ಅಭಿವೃದ್ಧಿ ಮಂತ್ರದಿಂದಾಗಿ ಕರ್ನಾಟಕದಲ್ಲಿ ಬಿಜೆಪಿ, ಸ್ಪಷ್ಟ ಬಹುಮತ ಪಡೆಯಲು ವಿಫಲವಾದರೂ ಜಯಭೇರಿ ಬಾರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರ್ನಾಟಕದಾದ್ಯಂತ ಮಾಡಿದ ಪ್ರಚಾರದ ಮೋಡಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಲೆಕ್ಕಾಚಾರಗಳು ಸಾಕಷ್ಟು ಕೈಗೂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಆಡಳಿತ ವಿರೋಧಿ ಅಲೆ ಬಿಜೆಪಿಗೆ ಸಹಾಯವಾಯಿತು.

English summary
Both Rahul Gandhi and Yogi Adityanath campaigned extensively in the state of Karnataka for the assembly elections. An story that appeared in the Organiser speaks about the strike rate of both Rahul and Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X