ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ನಷ್ಟ ಕುರಿತು ಸಲ್ಲಿಸಿದ್ದ ವರದಿ ತಿರಸ್ಕೃತವಾಗಿಲ್ಲ: ಯಡಿಯೂರಪ್ಪ

|
Google Oneindia Kannada News

Recommended Video

ಕೇಂದ್ರ ವರದಿ ತಿರಸ್ಕರಿಸಿಲ್ಲ, ಪರಿಶೀಲನೆ ನಡೆಸುತ್ತಿದ್ದಾರೆ- ಬಿಎಸ್ವೈ

ಬೆಳಗಾವಿ, ಅಕ್ಟೋಬರ್ 4: ಪ್ರವಾಹ ನಷ್ಟ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸಲ್ಲಿಸಿರುವ ವರದಿ ತಿರಸ್ಕೃತವಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಬೆಳಗಾವಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸಲ್ಲಿಸಿದ್ದ ಅವರಿ ಕುರಿತು ಮುಖ್ಯಕಾರ್ಯದರ್ಶಿಯನ್ನು ಮಾತುಕತೆಗೆ ಕರೆದಿದ್ದಾರೆ ವಿನಃ ತಿರಸ್ಕೃತವಾಗಿಲ್ಲ ಎಂದು ಹೇಳಿದರು.

ಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರ

ಕೇಂದ್ರದ ವರದಿಗೂ, ರಾಜ್ಯದ ವರದಿಗೂ ತಾಳೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ರಾಜಧಾನಿ ದೆಹಲಿಗೆ ಕಳುಹಿಸಲಾಗಿದೆ.

The Report On Flood Damage Was Not Rejected

ಈಗಾಗಲೇ ಎಲ್ಲಾ ಕೇಂದ್ರ ಸಚಿವರ ಜೊತೆಗೂ ಮಾತುಕತೆ ನಡೆಸಿದ್ದೇನೆ. ಇನ್ನು 3-4 ದಿನಗಳಲ್ಲಿ ಪರಿಹಾರ ಬಿಡುಗಡೆಯಾಗಲಿದೆ. ದೇಶದ ನೆರೆ ಪೀಡಿತ ಯಾವುದೇ ರಾಜ್ಯಗಳಿಗೂ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ.

ರಾಜ್ಯದ ಬೊಕ್ಕಸ ಇನ್ನೂ ಖಾಲಿಯಾಗಿಲ್ಲ. ಖಾಲಿಯಾಗಿದ್ದರೆ ಪರಿಹಾರ ನೀಡಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಪ್ರವಾಹ ಪರಿಹಾರ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೂ, ಕೇಂದ್ರ ನಡೆಸಿದ್ದ ವರದಿಗೂ ತಾಳೆಯಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಸಂಬಂಧ ಸ್ಪಷ್ಟನೆ ಕೇಳಿದೆ. ಪ್ರಸ್ತಾವನೆ ತಿರಸ್ಕರಿಸಿದೆ ಎಂದು ಹೇಳಿರುವುದು ಸುಳ್ಳು ಎಂದು ಹೇಳಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ನದಿಗಳು ಉಕ್ಕಿ ಹರಿದಿದ್ದರಿಂದ ಪ್ರವಾಹ ಸ್ಥಿತಿ ಉದ್ಭವವಾಗಿದ್ದು ಅಂದಾಜು 38 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ತಿಳಿಸಲಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಯಮಾವಳಿ ಅನ್ವಯ 3,500 ಕೋಟಿ ರೂ ಪರಿಹಾರದ ನೆರವು ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರದ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಕೇಂದ್ರದ ಅಧ್ಯಯನ ತಂಡ ನೀಡಿರುವ ವರದಿ ಪ್ರಕಾರ 1.15 ಲಕ್ಷ , ಪ್ರತಿ ಮನೆಗೆ ಐದು ಲಕ್ಷದಂತೆ ಪರಿಹಾರ ಕೋರಲಾಗಿತ್ತು, ಆದರೆ ನೆಲಕಚ್ಚಿದ ಮನೆಗಳಷ್ಟೂ ಐದು ಲಕ್ಷ ಬೆಲೆಬಾಳುತ್ತವೆಯೇ ಎಂದು ಕೇಂದ್ರ ಪ್ರಶ್ನಿಸಿದೆ ಹಾಗೆಯೇ ತನಿಖೆ ನಡೆಸಲು ಸೂಚಿಸಲಾಗಿದೆ.

English summary
Chief Minister BS Yediyurappa clarified that the report submitted by the state government to the central government on flood losses has not been rejected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X