ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ನಾಳೆ ಅಂತ್ಯ: ಜಾಗ್ರತೆ, ದ್ವಿಗುಣಗೊಂಡಿದ್ದಾರೆ ಕೊರೊನಾ ಸೋಂಕಿತರು !

|
Google Oneindia Kannada News

ಬೆಂಗಳೂರು, ಮೇ 16: ಒಂದೆಡೆ ಕೊರೊನಾ ವೈರಸ್‌ ನಿರ್ವಹಣೆಯಲ್ಲಿ ಮೈಸೂರು ಇಡೀ ಜಗತ್ತಿದೆ ಮಾದರಿಯಾಗಿದೆ. ಆದರೆ ಮತ್ತೊಂದೆಡೆ ಇಡೀ ರಾಜ್ಯ ಸರ್ಕಾರವೇ ಪ್ರಯತ್ನಿಸುತ್ತಿದ್ದರೂ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ 10 ದಿನಗಳಿಂದ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಡೀ ರಾಜ್ಯದ ದಿಕ್ಕನ್ನೇ ಬದಲಿಸಿದೆ.

ಹೌದು, ಆರಂಭದಲ್ಲಿ ದೇಶದಲ್ಲಿ ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜ್ಯ ಈಗ 12 ಸ್ಥಾನಕ್ಕೆ ಇಳಿದಿದೆ. ಆದರೂ ಕೂಡ ಕೊರೊನಾ ವೈರಸ್‌ ಸೋಂಕು ತಗಲುತ್ತಿರುವವರ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ. ನಿನ್ನೆ (ಮೇ 15) ಒಂದೇ ದಿನ ದಾಖಲೆಯ 69 ಸೋಂಕಿತರು ಪತ್ತೆಯಾಗಿದ್ದಾರೆ.

LKG ಕಂದಗಳಿಗೂ Online ಶಿಕ್ಷಣ ಕೊಡುವ ಮನಸ್ಥಿತಿಗೆ ಏನೆನ್ನಬೇಕು? ಕಾದಿದೆ ಕ್ರಮ!LKG ಕಂದಗಳಿಗೂ Online ಶಿಕ್ಷಣ ಕೊಡುವ ಮನಸ್ಥಿತಿಗೆ ಏನೆನ್ನಬೇಕು? ಕಾದಿದೆ ಕ್ರಮ!

ಒಂದೇ ದಿನ ದಾಖಲೆಯ 69 ಸೋಂಕಿತರು

ಒಂದೇ ದಿನ ದಾಖಲೆಯ 69 ಸೋಂಕಿತರು

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಲಾಕ್‌ಡೌನ್ ಸಡಿಲಗೊಳಿಸಿ ಅತಂತ್ರರಾಗಿದ್ದ ಜನರಿಗೆ ರಾಜ್ಯಕ್ಕೆ ಹಿಂದಿರುಗಲು ಅನುಮತಿ ಕೊಡುವುದು ಅನಿವಾರ್ಯವಾಗಿತ್ತು. ದೇಶ, ದೇಶಗಳಲ್ಲಿ ಇದ್ದವರಿಗೆ ಹಿಂದಿರುಗಲು ಅವಕಾಶ ಮಾಡಿ ಕೊಟ್ಟಿರುವುದು ಮಾನವೀಯತೆ.

ಆದರೆ ಅದರಿಂದ ಸೋಂಕು ಹರಡುವುದು ಹೆಚ್ಚಾಗುವ ಸಾಧ್ಯತೆಯಂತೂ ಇದ್ದೇ ಇದೆ. ಮೇ 15 ರಂದು ಒಂದೇ ದಿನ ರಾಜ್ಯಾದ್ಯಂತ ಒಟ್ಟು 69 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ಇದಕ್ಕೊಂದು ಉದಾಹರಣೆ. ಸೋಂಕಿತರಲ್ಲಿ 50ಕ್ಕೂ ಹೆಚ್ಚು ಜನರು ಹೊರಗಿನಿಂದ ಬಂದವರೇ ಆಗಿದ್ದಾರೆ.

ಇದೀಗ ದೃಢಪಡುತ್ತಿರುವ ಸೋಂಕಿತ ಪ್ರಕರಣಗಳಲ್ಲಿ ಹೆಚ್ಚಿನವು ಕ್ವಾರಂಟೈನ್‌ಲ್ಲಿದ್ದ ಪ್ರಕರಣಗಳೇ ಆಗಿದ್ದರೂ ಜನರಲ್ಲಿ ಮನೆ ಮಾಡಿದೆ.

ದಾಖಲೆಯ ಸೋಂಕಿತರು

ದಾಖಲೆಯ ಸೋಂಕಿತರು

ಕಳೆದ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ ಇಡೀ ಕರ್ನಾಟಕದ ಚಿತ್ರಣವನ್ನೇ ಬದಲಿಸಿದೆ. ಬರೋಬ್ಬರಿ 382 ಸೋಂಕಿತರು ಕಳೆದ ಹತ್ತು ದಿನಗಳಲ್ಲಿ ಪತ್ತೆಯಾಗಿದ್ದಾರೆ. ಹತ್ತು ದಿನಗಳ ಹಿಂದೆ ರಾಜ್ಯದಲ್ಲಿ 693 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದವು. ಅವರಲ್ಲಿ ಸಕ್ರಿಯ ಸೋಂಕಿತ ಪ್ರಕರಣಗಳು ಇದ್ದಿದ್ದು 309 ಮಾತ್ರ.

ಹತ್ತು ದಿನಗಳ ಬಳಿಕ ಇದೀಗ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 559ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಕೊರೊನಾ ವೈರಸ್‌ ಹರಡುತ್ತಿರುವ ವೇಗ ಹೆಚ್ಚಾಗುತ್ತಿದ್ದು ಸಹಜವಾಗಿಯೆ ಆತಂಕಕ್ಕೆ ಕಾರಣವಾಗಿದೆ.

ದಿನಕ್ಕೆ ಸರಾಸರಿ 20 ರಿಂದ 40 ಕ್ಕೆ ಏರಿಕೆ

ದಿನಕ್ಕೆ ಸರಾಸರಿ 20 ರಿಂದ 40 ಕ್ಕೆ ಏರಿಕೆ

ಹತ್ತು ದಿನಗಳ ಹಿಂದೆ ಸೋಂಕಿಗೆ ತುತ್ತಾಗುತ್ತಿದ್ದವರ ಸಂಖ್ಯೆ ದಿನಕ್ಕೆ ಸರಾಸರಿ 20. ನಂತರದ ಹತ್ತು ದಿನಗಳಲ್ಲಿಅದು 40ರ ಆಸುಪಾಸಿಗೆ ಏರಿಕೆಯಾಗಿದೆ. ಮೇ 06 ರಂದು 20 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಮೇ 07 ರಂದು 12, ಮೇ 08 ರಂದು 48, ಮೇ 09 ರಂದು 41, ಮೇ 10 ರಂದು 54, ಮೇ 11 ರಂದು 14, ಮೇ 12 ರಂದು 63, ಮೇ 13 ರಂದು 34, ಮೇ 14 ರಂದು 27 ಹಾಗೂ ಮೇ 15 ರಂದು 69 ಸೋಂಕಿತರು ಪತ್ತೆಯಾಗಿದ್ದಾರೆ. ಮೇ 16 ರಂದು 36 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಹತ್ತು ದಿನಗಳಲ್ಲಿ 400 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

3ನೇ ಹಂತದ ಲಾಕ್‌ಡೌನ್ ಮುಕ್ತಾಯ

3ನೇ ಹಂತದ ಲಾಕ್‌ಡೌನ್ ಮುಕ್ತಾಯ

ಮೇ 17 ರಂದು ಮೂರನೇ ಹಂತದ ಲಾಕ್‌ಡೌನ್ ಮುಗಿಯಲಿದೆ. ನಂತರಲಾಕ್‌ಡೌನ್‌ಗೆ ಮತ್ತಷ್ಟು ಸಡಿಲಿಕೆಗಳನ್ನು ಸರ್ಕಾರ ಕೊಡುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಹೀಗಾಗಿ ಹಿಂದಿಗಿಂತಲೂ ಈಗ ಸಾಮಾಜಿಕ ಅಂತರ, ಸ್ವಚ್ಛತೆಗೆ ಆದ್ಯತೆ ಕೊಡಬೇಕಾದ ಅಗತ್ಯವಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು, ಬಂದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಕೊರೊನಾ ವೈರಸ್‌ಗೆ ಆಹ್ವಾನ ನೀಡಿದಂತೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

English summary
The number of infected people in the state has doubled in the last 10 days. Ten days later the number of infected people has increased to 1092 and the number of active infections has increased to 559. The number of infected people has doubled in the last ten days .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X