ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 30ರವರೆಗೂ ಕರ್ನಾಟಕದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಮೇ 25: ಕರ್ನಾಟಕದಲ್ಲಿ ಮೇ 30ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Recommended Video

ಭಾನುವಾರದ ಭಾರೀ ಮಳೆಗೆ ಬೆಂಗಳೂರು ತತ್ತರ | Bangalore Rain | Oneindia Kannada

ಭಾನುವಾರ ಮಧ್ಯಾಹ್ನಬೆಂಗಳೂರಿನಲ್ಲಿ ಭಾರಿ ಮಳೆ ಸುರಿದು ಅನಾಹುತವನ್ನೇ ಸೃಷ್ಟಿ ಮಾಡಿದೆ. 150ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ, ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಯಾರೂ ಕೂಡ ಮನೆಯಿಂದ ಆಚೆ ಬಂದಿರಲಿಲ್ಲ, ಹೀಗಾಗಿ ಮತ್ತಷ್ಟು ಅನಾಹುತವಾಗುವುದನ್ನು ತಪ್ಪಿಸಿದಂತಾಗಿದೆ.

ಬೆಂಗಳೂರಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿವೆ 150ಕ್ಕೂ ಹೆಚ್ಚು ಮರಗಳು ಬೆಂಗಳೂರಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿವೆ 150ಕ್ಕೂ ಹೆಚ್ಚು ಮರಗಳು

ಮೇ 25-26 ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮೇ 27,28,29 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ಧಾರಾಕಾರ ಮಳೆ ಸುರಿಯಲಿದೆ.

The MET Department Has Predicted Rainfall In Karnataka Till May 30

ಭಾನುವಾರ ಸುರಿದ ಮಳೆಗೆ ಬೆಂಗಳೂರಿನ ಮತ್ತಿಕೆರೆ, ಎನ್‌ಆರ್‌ ಕಾಲೊನಿ, ಪದ್ಮನಾಭನಗರ ಸೇರಿದಂತೆ ಹಲವೆಡೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದವು.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಮೇ 30ರವರೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಲಿದೆ.ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ 150ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

ಮಲ್ಲೇಶ್ವರ, ಶ್ರೀನಗರ, ಮೆಜೆಸ್ಟಿಕ್, ಗಿರಿನಗರ, ಕೆಂಗೇರಿ, ಮೈಸೂರು ರಸ್ತೆ, ಜಯನಗರ, ಉತ್ತರಹಳ್ಳಿ, ಪದ್ಮನಾಭನಗರ ಸೇರಿದಂತೆ ಬಹುತೇಕ ಕಡೆ ಭಾರಿ ಮಳೆಯಾಗಿದೆ. ಬಿಬಿಎಂಪಿಗೆ ಸುಮಾರು 150ಕ್ಕೂ ಹೆಚ್ಚು ಮರಗಳು ಬಿದ್ದಿರುವ ಬಗ್ಗೆ ದೂರುಗಳು ಬಂದಿವೆ. ಎನ್‌ಆರ್‌ ಕಾಲೊನಿ, ಗವಿಪುರ, ಜೆಪಿನಗರ, ಇಪಿಐಪಿ ರಸ್ತೆ, ಮಹಾದೇವಪುರ, ಪುಲಕೇಶಿನಗರದಲ್ಲಿ ಸಾಕಷ್ಟು ಮರಗಳು ಬಿದ್ದಿವೆ.

150ಕ್ಕೂ ಹೆಚ್ಚು ದೂರುಗಳು ಬಿಬಿಎಂಪಿಗೆ ಬಂದಿವೆ ಎಂದು ಆಯುಕ್ತರು ಬರೆದುಕೊಂಡಿದ್ದಾರೆ. ನಾಗರಿಕರು ಮಾಡಿರುವ ಎಲ್ಲಾ ಕರೆಗಳಿಗೂ ಬಿಬಿಎಂಪಿ ಸ್ಪಂದಿಸುತ್ತದೆ ಎಂದು ಹೇಳಿದ್ದಾರೆ.

English summary
In a statement, IMD stated that while there are no heavy rainfall warnings for Monday And Tuesday. weather Department forcast Heavy Rainfall with thunderstorm and lighting occompanied by gusty winds over chikmagalur, Hassan, Kodagu, Mandya, Shivamogga On May 27,28,29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X