ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ

By Shami
|
Google Oneindia Kannada News

ಬೆಂಗಳೂರು, ಮಾ. 03: ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ. ಅವುಗಳ ಪೈಕಿ 26 ಜಿಲ್ಲೆಗಳ 130 ತಾಲೂಕುಗಳಲ್ಲಿ ಈ ಹೊತ್ತು ಬರಗಾಲ. ಗ್ರಾಮಾಂತರ ಪ್ರದೇಶದಲ್ಲಿ ದಿನಕ್ಕೆ 14-16 ಗಂಟೆ ವಿದ್ಯುತ್ ಖೋತ. ರಾಗಿ ಮಿಲ್ಲಿಗೆ ಕರೆಂಟು ಬಂದಿಲ್ಲ, ಪರೀಕ್ಷೆಗೆ ಪ್ರಿಪೇರ್ ಆಗುತ್ತಿರುವ ಮಕ್ಕಳಿಗೆ ಓದಲು ಬೆಳಕಿಲ್ಲ.

ಶುದ್ಧ ಕುಡಿಯುವ ನೀರು ಬಿಡಿ, ಕುಡಿಯುವ ನೀರಿಗೇ ತತ್ವಾರ. ಕುಡಿಯುವ ನೀರು ಒದಗಿಸುವುದಕ್ಕೆ ರಾಜ್ಯ ಮತ್ತು ಕೇಂದ್ರದ ಸಾಕಷ್ಟು ಯೋಜನೆಗಳಿವೆ. ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಾನಾ ಹಂತಗಳ ನೌಕರಶಾಯಿ ಟೊಂಕಕಟ್ಟಿ ಕೆಲಸ ಮಾಡಿದರೆ ಸಮಸ್ಯೆಯ ತೀವ್ರತೆಯನ್ನು ತಗ್ಗಿಸಬಹುದು. ಇದು ಆಶಯ ಮತ್ತು ಹಗಲು ಕನಸು.

ಹಗಲು ನಿದ್ದೆ, ಸಂಜೆ ಡೀಲು, ರಾತ್ರಿ ಪಾರ್ಟಿ ಮಾಡುವುದರಲ್ಲಿ ಮೈಮರೆಯುವವರಿಗೆ ಜನತೆಯ ಕಷ್ಟ ಕಾರ್ಪಣ್ಯ ಅರ್ಥವಾಗುವುದಿಲ್ಲ. ಅರ್ಥವಾಗತ್ತೆ, ಆದರೆ ಅವರಿಗದು ಬೇಡದ ವಸ್ತು. [2015: ರಾಜ್ಯದ 98 ಬರಪೀಡಿತ ತಾಲೂಕುಗಳ ಪಟ್ಟಿ]

The dance of Karnataka drought and the dance of its rulers

ವಿಧಾನ ಸಭೆಯಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಸಮಾಲೋಚನೆ, ಚರ್ಚೆ ಮಾಡುವುದನ್ನು ಬಿಟ್ಟು ಕಿತ್ತುಹೋಗಿರುವ ಉಡುಗೊರೆ ಗಡಿಯಾರದ ಹಗರಣದ ಬಗ್ಗೆ ಸಮಯ ಹಾಳು ಮಾಡುತ್ತಿದ್ದಾರೆ. ಇವರಿಗೆ ಸ್ವಲ್ಪನಾರ ನಾಚಿಕೆ ಆಗುವುದಿಲ್ಲವೇ? ಎಂದು ಕೇಳುವವರೇ ನಾಚಿಕೆ ಪಡುವ ಸ್ಥಿತಿ ಕರ್ನಾಟಕದ ಜನತೆಗೆ ಬಂದಿದೆ. ಇದು ಜಿಗುಪ್ಸೆಪಡುವ ವಿಷಯ ಮತ್ತು ಬೇಗುದಿಯ ಪರಮಾವಧಿ.[ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು]

ಶಾಶ್ವತ ಕುಡಿಯುವ ನೀರು ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಇವತ್ತು ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರು ಬೆಂಗಳೂರಿಗೆ ಲಗ್ಗೆ ಇಟ್ಟರು. ಸಾವಿರಾರು ಟ್ರ್ಯಾಕ್ಟರುಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಸಾಧ್ಯವಾಗಲಿಲ್ಲ. ಯಾಕಂದರೆ ಪೋಲೀಸರ ಸರ್ಪಗಾವಲು ಇತ್ತು. ಸೌಧದ ಒಳಗೆ ಶಾಸಕರಿಗೆ ಗಹನವಾದ ಕೆಲ್ಸ ಇತ್ತು.

English summary
Karnataka reeling under sever grip of drought. 140 Talukas declared drought hit areas. Accute shortage of drinking water and less said the better about power outages. Citizens are upset. Legislators busy in the business at Vidhana Soudha, the seat of power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X