• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಡಿಕಲ್ ಶಾಪ್ ಗಳಲ್ಲಿ ಔಷಧಿ ಕೊರತೆ: ಏಕೆ? ಹೇಗೆ? ಏನು ಪರಿಹಾರ?

|

ಬೆಂಗಳೂರು, ಜೂನ್ 26: ಮುಂದಿನ ತಿಂಗಳ 1ರಿಂದ ದೇಶಾದ್ಯಂತ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್ ಟಿ) ದೇಶದ ಔಷಧ ಮಾರಾಟ ವಲಯಕ್ಕೆ ಬಿಸಿ ಮುಟ್ಟಿಸಿದೆ.

ಇದರ ಪರಿಣಾಮವಾಗಿ, ರಾಜ್ಯದ ಔಷಧಿ ಅಂಗಡಿಗಳಲ್ಲಿ ಔಷಧಗಳ ಕೊರತೆ ಕಂಡು ಬಂದಿದ್ದು, ಜನರು ಔಷಧಿಗಳಿಗಾಗಿ ಪರದಾಡುವಂತಾಗಿದೆ.

ಮೂಲಗಳ ಪ್ರಕಾರ, ಈಗಿರುವ ಔಷಧಿಗಳಲ್ಲಿ ಶೇ. 50ರಷ್ಟು ಕೊರತೆ ಕಾಡಲಾರಂಭಿಸಿದೆ. ಇದರ ಪರಿಣಾಮವಾಗಿ, ವೈದ್ಯರು ತಮಗೆ ಬರೆದುಕೊಟ್ಟ ಔಷಧಿಗಳು ಸಿಗದೇ ಪರದಾಡುವಂತಾಗಿದೆ.

ಪರಿಸ್ಥಿತಿ ಹೀಗೇ ಮುಂದುವರಿಸಿದರೆ, ರಾಜ್ಯದಲ್ಲಿ ಔಷಧ ಕ್ಷೋಭೆ ತಲೆದೋರುವುದು ಖಚಿತವೆಂದು ಕೆಲ ಮೂಲಗಳು ತಿಳಿಸಿವೆ. ಆದರೆ, ಇದಕ್ಕೆಲ್ಲಾ ಕೇಂದ್ರ ಸರ್ಕಾರದ ಹೊಸ ಜಿಎಸ್ ಟಿಯೇ ಕಾರಣವಾಗಿರುವುದರಿಂದ ಕೇಂದ್ರವೇ ಈಗ ಮುಂದೆ ಬಂದು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

ಕೇಂದ್ರ ಸರ್ಕಾರವೇ ಮೂಲ ಕಾರಣವೇ?

ಕೇಂದ್ರ ಸರ್ಕಾರವೇ ಮೂಲ ಕಾರಣವೇ?

ಜಿಎಸ್ ಟಿಯಲ್ಲಿ ಯಾವ ಯಾವ ಔಷಧಿಗಳಿಗೆ ಏನೇನು ತೆರಿಗೆ ಎಂಬುದನ್ನು ಕೇಂದ್ರ ಸರ್ಕಾರ ಇನ್ನೂ ಖಚಿತಪಡಿಸಿಲ್ಲದಿರುವುದೇ ಈ ಕೊರತೆಯ ಹಿಂದಿರುವ ಮೂಲ ಕಾರಣ.

ಬೇರೆಯ ಔಷಧಿಗಳಿಗೆ ಏಕೆ ದರ ನಿಗದಿಯಾಗಿಲ್ಲ

ಬೇರೆಯ ಔಷಧಿಗಳಿಗೆ ಏಕೆ ದರ ನಿಗದಿಯಾಗಿಲ್ಲ

ಇನ್ಸುಲಿನ್ ಗೆ ಮಾತ್ರ ಶೇ. 5ರಷ್ಟು ತೆರಿಗೆ (ಜಿಎಸ್ ಟಿ ಅಡಿಯಲ್ಲಿ) ನಿಗದಿಗೊಳಿಸಿರುವ ಕೇಂದ್ರ ಸರ್ಕಾರ, ಯಾವ್ಯಾವ ಔಷಧಿಗಳಿಗೆ ಎಷ್ಟೆಷ್ಟು ತೆರಿಗೆ ಎಂಬುದನ್ನೂ ಇನ್ನೂ ಖಚಿತಗೊಳಿಸಿಲ್ಲ. ಇದು ಔಷಧಿಗಳ ಡಿಸ್ಟ್ರಿಬ್ಯೂಟರ್ ಗಳನ್ನು ಗೊಂದಲಕ್ಕೀಡು ಮಾಡಿದೆ. ಹಾಗಾಗಿ, ಇದು ಔಷಧ ಸರಬರಾಜು ಮೇಲೂ ಪರಿಣಾಮ ಬೀರಿದೆ.

ಸಿ ಆ್ಯಂಡ್ ಎಫ್ ಮೂಲಕೇ ಎಲ್ಲಾ ವ್ಯವಹಾರ

ಸಿ ಆ್ಯಂಡ್ ಎಫ್ ಮೂಲಕೇ ಎಲ್ಲಾ ವ್ಯವಹಾರ

ಔಷಧ ತಯಾರಿಕಾ ಕಂಪನಿಗಳಲ್ಲಿ ಔಷಧಗಳು ತಯಾರಾಗಿ, ಅವು ಗ್ರಾಹಕರ ಕೈ ಸೇರುವ ನಡುವೆ ಮೂರು ಹಂತಗಳನ್ನು ಅವು ದಾಟಿ ಬರಬೇಕಿದೆ. ಔಷಧಿ ತಯಾರಿಸುವ ಕಂಪನಿಗಳು ನೇರವಾಗಿ ಮೆಡಿಕಲ್ ಶಾಪ್ ನವರಿಗೆ ಔಷಧ ಮಾರುವ ಹಾಗಿಲ್ಲ. ಹಾಗಾಗಿ, ಅವು ಸಿ ಆ್ಯಂಡ್ ಎಫ್ (carry and forward agents) ಎಂಬ ಪ್ರತ್ಯೇಕ ಸಂಸ್ಥೆಗಳ ಜತೆ ನಿಕಟ ನಂಟು ಹೊಂದಿರುತ್ತವೆ.

ಅಲ್ಲಿಂದ ಇಲ್ಲಿಗೆ ಸಾಗಿ ಬರಬೇಕು

ಅಲ್ಲಿಂದ ಇಲ್ಲಿಗೆ ಸಾಗಿ ಬರಬೇಕು

ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಈ ಸಿ ಆ್ಯಂಡ್ ಎಫ್ ಕಂಪನಿಗಳು, ಔಷಧ ತಯಾರಿಕಾ ಕಂಪನಿಗಳ ರಾಯಭಾರಿಗಳಿದ್ದಂತೆ. ಪ್ರತಿಯೊಂದು ಔಷಧ ಕಂಪನಿಯೂ ತನ್ನದೇ ಆದ ಸಿ ಆ್ಯಂಡ್ ಎಫ್ ಗಳನ್ನು ಹೊಂದಿರುವುದರಿಂದ ದೇಶದಲ್ಲಿ ನಾನಾ ರೀತಿಯ ಸಿ ಆ್ಯಂಡ್ ಎಫ್ ಸಂಸ್ಥೆಗಳಿವೆ. ಹೀಗೆ, ಸಿ ಆ್ಯಂಡ್ ಎಫ್ ಗಳಿಂದ ಔಷಧಿಗಳು ಡಿಸ್ಟ್ರಿಬ್ಯೂಟರ್ ಗಳ (ವಿತರಕರು) ಬಳಿಗೆ ಬರುತ್ತವೆ. ಅಲ್ಲಿಂದ ಇವು ಮೆಡಿಕಲ್ ಶಾಪ್ ಗಳನ್ನು ಸೇರುತ್ತವೆ. ಆನಂತರವೇ ಅವು ನಮ್ಮ ಕೈ ಸೇರುವುದು.

ಹಣ ಕಳೆದುಕೊಳ್ಳೋದು ಯಾರಿಗೆ ಬೇಕು ಸ್ವಾಮಿ?

ಹಣ ಕಳೆದುಕೊಳ್ಳೋದು ಯಾರಿಗೆ ಬೇಕು ಸ್ವಾಮಿ?

ಇಲ್ಲಿರುವ ಅಸಲಿ ಸಮಸ್ಯೆಯೇನೆಂದರೆ, ಔಷಧ ಕಾರ್ಖಾನೆಗಳಲ್ಲಿ ಈಗಾಗಲೇ ತಯಾರಾಗಿರುವ ಔಷಧ ಸರಕುಗಳನ್ನು ಯಾವ ರೀತಿಯಲ್ಲಿ ಕೊಳ್ಳಬೇಕೆಂಬ ಗೊಂದಲದಲ್ಲಿ ವಿತರಕರು ಇದ್ದಾರೆ. ಅಂದರೆ, ಸದ್ಯಕ್ಕೆ ಈಗಿರುವ ತೆರಿಗೆ ಪದ್ಧತಿ ಪ್ರಕಾರ, ಔಷಧಿಗಳ ಮೇಲೆ ಶೇ. 5.3ರಷ್ಟು ತೆರಿಗೆಯನ್ನು ಡಿಸ್ಟ್ರಿಬ್ಯೂಟರ್ ಗಳು ಕಟ್ಟಬೇಕಿದೆ. ಈ ತೆರಿಗೆಯ ಆಧಾರದಲ್ಲೇ ಸಿ ಆ್ಯಂಡ್ ಎಫ್ ಗಳ ಕಡೆಯಿಂದ ಔಷಧಿ ಕೊಂಡುಕೊಳ್ಳುತ್ತಾರೆ ಎಂದಿಟ್ಟುಕೊಳ್ಳೋಣ. ಜುಲೈ 1ರಿಂದ ಜಾರಿಗೊಳ್ಳುವ ಈ ಜಿಎಸ್ ಟಿ ಅನ್ವಯ ಔಷಧ ವಿತರಕರ ಮೇಲೆ ಶೇ. 8 ಅಥವಾ ಅದಕ್ಕಿಂತ ಹೆಚ್ಚು (ಉದಾಹರಣೆಗೆ ಮಾತ್ರ) ತೆರಿಗೆ ಬಿತ್ತೆಂದರೆ, ಡಿಸ್ಟ್ರಿಬ್ಯೂಟರ್ ಗಳು ಲಕ್ಷಾಂತರ ರು.ಗಳಷ್ಟು ಹಣ ಕಳೆದುಕೊಳ್ಳುತ್ತಾರೆ.

ಹಾಗಾಗಿಯೇ ತೊಂದರೆ

ಹಾಗಾಗಿಯೇ ತೊಂದರೆ

ಹಳೆ ತೆರಿಗೆ ದರದಲ್ಲಿ ಔಷಧಿ ಕೊಂಡು, ಜಿಎಸ್ ಟಿ ಅಡಿಯಲ್ಲಿ ದುಬಾರಿ ತೆರಿಗೆ ಕಟ್ಟುವ ಪ್ರಮೇಯಕ್ಕೆ ಸಿಲುಕುತ್ತಾರೆ. ಹಾಗಾಗಿಯೇ, ಸದ್ಯದ ಮಟ್ಟಿಗೆ ಯಾವುದೇ ಸಿ ಆ್ಯಂಡ್ ಎಫ್ ಕಡೆಯಿಂದ ಔಷಧಿ ಕೊಳ್ಳುವ ಉಸಾಬರಿಯೇ ಬೇಡೆಂದು ಅವರು ಕೈ ಕಟ್ಟಿ ಕುಳಿತಿದ್ದಾರೆ. ಹಾಗಾಗಿಯೇ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ.

ಮೆಡಿಕಲ್ ಶಾಪ್ ಗಳಿಗೂ ಕ್ಲಿಯರೆನ್ಸ್ ಗೆ ಸೂಚನೆ

ಮೆಡಿಕಲ್ ಶಾಪ್ ಗಳಿಗೂ ಕ್ಲಿಯರೆನ್ಸ್ ಗೆ ಸೂಚನೆ

ಇದಕ್ಕೆ ಪರಿಹಾರವೇನೆಂದರೆ, ಜಿಎಸ್ ಟಿ ಜಾರಿಗೆ ಬರುವ ಮುನ್ನ ಆದಷ್ಟು ಹಳೆಯ ಸ್ಟಾಕ್ ಗಳನ್ನು ಮಾರಾಟ ಮಾಡಲು ಡಿಸ್ಟ್ರಿಬ್ಯೂಟರ್ ಗಳು ನಿರ್ಧರಿಸಿದ್ದು, ಎಲ್ಲಾ ಮೆಡಿಕಲ್ ಶಾಪ್ ಗಳಿಗೂ ಅದೇ ರೀತಿ ತಾಕೀತು ಮಾಡಿದ್ದಾರೆ. ಜಿಎಸ್ ಟಿ ಜಾರಿಯಾದರೂ ಹಳೆಯ ಸ್ಟಾಕ್ ಇದ್ದರೂ ಅದನ್ನು ಸಂಪೂರ್ಣವಾಗಿ ಖಾಲಿ ಮಾಡಲು ಇನ್ನೂ ಎರಡು ತಿಂಗಳು ಕಾಲಾವಕಾಶವಿದೆ. ಹಾಗಾಗಿ, ಈಗಿರುವ ಸ್ಟಾಕ್ ಕ್ಲಿಯರೆನ್ಸ್ ಗೆ ಸೂಚಿಸಲಾಗಿದೆ. ಹಾಗಾಗಿಯೇ ಔಷಧಿಗಳ ಹೊಸ ಸ್ಟಾಕ್ ಬರುತ್ತಿಲ್ಲ.

ಇಲ್ಲೊಂದಿದೆ ಉಚಿತ ಸಲಹೆ!

ಇಲ್ಲೊಂದಿದೆ ಉಚಿತ ಸಲಹೆ!

ಈಗ ನಿಜಕ್ಕೂ ತೊಂದರೆಗೆ ಸಿಲುಕಿರುವುದು ಗ್ರಾಹಕರೇ. ಹಾಗಾಗಿ, ಯಾವ ಯಾವ ಮೆಡಿಕಲ್ ಶಾಪ್ ಗಳಲ್ಲಿ ಗ್ರಾಹಕರಿಗೆ ಬೇಕಾದ ಏನು ಔಷಧಿ ಸಿಗುತ್ತದೆಯೋ ಅದನ್ನು ಹಿಂದು ಮುಂದು ನೋಡದೇ ಖರೀದಿಸಬೇಕಷ್ಟೇ ಎನ್ನುತ್ತಾರೆ ಔಷಧ ಮಳಿಗೆಗಳವರು.

ಸಿಗಲಾರದ್ದರ ಬಗ್ಗೆ ಇನ್ನೊಂದೆಡೆ ಹುಡುಕಿ

ಸಿಗಲಾರದ್ದರ ಬಗ್ಗೆ ಇನ್ನೊಂದೆಡೆ ಹುಡುಕಿ

ಉದಾಹರಣೆಗೆ, ಒಬ್ಬ ರೋಗಿಗೆ ವೈದ್ಯರು ಎರಡು- ಮೂರು ರೀತಿಯ ಗುಳಿಗೆ, ಒಂದು ಟಾನಿಕ್ ಬಾಟಲಿ ಬರೆದಿದ್ದಾರೆಂದಿಟ್ಟುಕೊಳ್ಳೋಣ. ಆ ರೋಗಿ ಅಥವಾ ಆತನ ಕಡೆಯವರು ಮೆಡಿಕಲ್ ಶಾಪ್ ಗೆ ಬಂದಾಗ ಗುಳಿಗೆಗಳು ಮಾತ್ರ ಇವೆ. ಟಾನಿಕ್ ಇಲ್ಲ ಎಂದು ಅಂಗಡಿಯವರು ಹೇಳಿದರೆ, ಎಲ್ಲಾ ಒಂದೇ ಕಡೆ ಲಭ್ಯವಿರುವ ಕಡೆ ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಂದ ತೆರಳುವ ಬದಲು, ಗುಳಿಗೆಗಳನ್ನು ಅಲ್ಲಿ ಕೊಂಡುಕೊಳ್ಳಬೇಕು. ಟಾನಿಕ್ ಗಳನ್ನು ಮತ್ತೊಂದೆಡೆ ಪಡೆಯಬೇಕು. ಏಕೆಂದರೆ, ಒಂದೇ ಕಡೆ ಎಲ್ಲಾ ಔಷಧಿ ಸಿಗುವ ಪರಿಸ್ಥಿತಿ ಸದ್ಯಕ್ಕಂತೂ ಇಲ್ಲ ಎನ್ನುತ್ತಾರೆ ಔಷಧಿ ಅಂಗಡಿಗಳವರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As central government has not fixed the GST tax rates on drugs sales, many of the drugs distributors are in confusion regarding new tax rate that they may have to pay after the implementation of GST from July 1st, 2017. Hence, the distributors have decided not to purchase any goods from Drugs manufacturers until GST rates gets fixed. This lead the shortage of Drugs in almost all drug houses in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more