ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ, ಪಿಯುಸಿ ಸುಸೂತ್ರವಾಗಿ ನಡೆಸಿದ ಸಿಎಂ ಎಚ್ಡಿಕೆಗೆ ಅಭಿನಂದನೆಗಳು

|
Google Oneindia Kannada News

2016ರ ಮಾರ್ಚ್ 21ರಂದು ಸುಮಾರು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದು, ಆಗ ತಾನೇ ಮನೆಗೆ ಬಂದಿದ್ದರು. ಅಷ್ಟರಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಪರೀಕ್ಷೆ ರದ್ದಾದ ಶಾಕಿಂಗ್ ನ್ಯೂಸ್ ಎದುರಾಗಿತ್ತು. ಇದಾದ ನಂತರ ಮತ್ತೊಂದು ದಿನ ಪರೀಕ್ಷೆಗೆ ನಿಗದಿ ಪಡಿಸಲಾಗಿತ್ತು, ಆ ಪತ್ರಿಕೆಯೂ ಸೋರಿಕೆಯಾಗಿ, ಮೂರನೇ ಬಾರಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು.

ಹತ್ತು ಹಲವು ಭಾಗ್ಯ ಯೋಜನೆಗಳನ್ನು ಸಿದ್ದರಾಮಯ್ಯನವರು ತಮ್ಮ ಸರಕಾರದ ಅವಧಿಯಲ್ಲಿ ನೀಡಿದ್ದರೂ, ಅವರ ಐದು ವರ್ಷಗಳ ಆಡಳಿತದಲ್ಲಿ ಅವರಿಗೆ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದ್ದು, ಸಾಲುಸಾಲು ಪ್ರಶ್ನೆಪತ್ರಿಕೆ ಸೋರಿಕೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ, ಇಲಾಖೆಯ ಒಳಗಿನ ಮತ್ತು ಹೊರಗಿನ ವಿಘ್ನ ಸಂತೋಷಿಗಳ ಮರ್ವವನ್ನು ಅಕ್ಷರಸಃ ಅರೆಯದೇ ಹೋದರು.

ಮೂಲ ಸೌಕರ್ಯಗಳ ಕೊರತೆಯ ನಡುವೆಯೂ 624 ಅಂಕ ಪಡೆದು ಸಾಧನೆಗೈದ ಕೃಪಾ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ 624 ಅಂಕ ಪಡೆದು ಸಾಧನೆಗೈದ ಕೃಪಾ

ಆ ವೇಳೆ, ಅದು ಶಿಕ್ಷಣ ಮಂಡಳಿಯ ವೈಫಲ್ಯವೆಂದಿದ್ದ ಸಿದ್ದರಾಮಯ್ಯನವರ ಸರಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿಯಾಗಿದ್ದ ಪಲ್ಲವಿ ಅಕುರಾತಿ ಅವರನ್ನು ಎತ್ತಂಗಡಿ ಮಾಡಿತ್ತು. ಜೊತೆಗೆ, ಪಶ್ನೆ ಪತ್ರಿಕೆ ಸೋರಿಕೆಯ ವಿಚಾರದಲ್ಲಿ ಬಂಧಿತರಾಗಿದ್ದ ಮೂವರಲ್ಲಿ ಒಬ್ಬರು, ಸಚಿವರಾಗಿದ್ದ ಡಾ.ಶರಣಪ್ರಕಾಶ್ ಪಾಟೀಲ್ ಅವರ ವಿಶೇಷಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದವರು ಎನ್ನುವುದು ಗೌಪ್ಯವಾಗಿ ಉಳಿಯದೇ, ಸಿದ್ದರಾಮಯ್ಯ ಇನ್ನಷ್ಟು ಮುಜುಗರವನ್ನು ಎದುರಿಸಬೇಕಾಗಿ ಬಂತು.

Thanks to SSLC, PUC board, CM Kumaraswamy for very smooth handling of 2019 exams

ಈ ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವ 'ಹಗರಣ' ನಡೆದ ನಂತರದ ಅವಧಿಯಲ್ಲಿ ಪ್ರತೀ ವರ್ಷ ಮಕ್ಕಳು ಮತ್ತು ಪೋಷಕರಿಗೆ ಪಬ್ಲಿಕ್ ಎಕ್ಸಾಂ ಎನ್ನುವುದು 'ನೈಟ್ ಮೇರ್' ತರ ಆಗಿಬಿಟ್ಟಿರುವುದಂತೂ ಸತ್ಯ. ಆದರೆ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ 2019ರ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು, ಇದಾದ ನಂತರದ ಮೌಲ್ಯಮಾಪನ, ರಿಸಲ್ಟ್ ಅನ್ನು ಕ್ರಮಬದ್ದವಾಗಿ ನಡೆಸಿ ಸೈ ಎನಿಸಿಕೊಂಡಿದೆ.

ಬಿಜೆಪಿಗೆ ವೋಟ್ ಹಾಕಿದ್ದಕ್ಕೆ SSLCಯಲ್ಲಿ ದಕ್ಷಿಣ ಕನ್ನಡ ಸ್ಥಾನ ಕುಸಿತ: ರೇವಣ್ಣ ಬಿಜೆಪಿಗೆ ವೋಟ್ ಹಾಕಿದ್ದಕ್ಕೆ SSLCಯಲ್ಲಿ ದಕ್ಷಿಣ ಕನ್ನಡ ಸ್ಥಾನ ಕುಸಿತ: ರೇವಣ್ಣ

ಅಧಿಕಾರಿಗಳಿಗೆ ಫ್ರೀಹ್ಯಾಂಡ್ ಕೊಟ್ಟರೆ, ಯಾವರೀತಿ ಉತ್ತಮ ಕೆಲಸವನ್ನು ತೆಗೆಸಿಕೊಳ್ಲಬಹುದು ಎನ್ನುವುದಕ್ಕೆ ಈ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳೇ ಸಾಕ್ಷಿ ಎನ್ನುವ ಮಾತನ್ನು ಶಿಕ್ಷಣ ಸಚಿವಾಲಯವನ್ನೂ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಹೇಳಿದ್ದರು. ಅದರಂತೇ, ಹಿಂದಿನ ಆಯುಕ್ತ, ಐಪಿಎಸ್ ಅಧಿಕಾರಿಯಾಗಿದ್ದ ಪಿ ಸಿ ಜಾಫರ್ ಮತ್ತು ಶಿಕ್ಷಣ ಮಂಡಳಿಯ ಅಧಿಕಾರಿಗಳ ನೇತೃತ್ವದಲ್ಲಿ, ಯಾವುದೇ ಅಡಚಣೆಯಿಲ್ಲದೆ ಸುಸೂತ್ರವಾಗಿ ನಡೆಸಿ, ಎಲ್ಲಾ ವಲಯದಲ್ಲೂ ಇಲಾಖೆ ಮತ್ತು ಸರಕಾರ ಅಭಿನಂದನೆಗೆ ಪಾತ್ರವಾಗಿದೆ.

Thanks to SSLC, PUC board, CM Kumaraswamy for very smooth handling of 2019 exams

ಕರಾವಳಿ ಕಡೆಯವರು ಬುದ್ದಿಯಿಲ್ಲದವರು ಎನ್ನುವ ಸಿಎಂ ಹೇಳಿಕೆಗೆ, ಪಿಯುಸಿ ಫಲಿತಾಂಶದಲ್ಲಿ ಉಡುಪಿ, ದಕ್ಷಿಣಕನ್ನಡ ಮೊದಲ ಸ್ಥಾನ ಬಂದಿದ್ದನ್ನು ತಾಳೆಹಾಕಿದ್ದು, ಇನ್ನು, ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ದಕ್ಷಿಣಕನ್ನಡದ ಸ್ಥಾನ SSLCಯಲ್ಲಿ ಕುಸಿತಗೊಂಡಿದ್ದು ಎನ್ನುವ ರಾಜಕೀಯ ಪ್ರೇರಿತ ಹೇಳಿಕೆಗಳು ಏನೇ ಇದ್ದರೂ, ಸರಕಾರ ಮತ್ತು ಶಿಕ್ಷಣ ಇಲಾಖೆ ಯಾವುದೇ ತೊಂದರೆಯಿಲ್ಲದೆ ಪರೀಕ್ಷೆಗಳನ್ನು ನಡೆಸಿ, ಮಕ್ಕಳು ಮತ್ತು ಪೋಷಕರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

SSLC ಫಲಿತಾಂಶ: ಸರ್ಕಾರಿ ಶಾಲೆಗಳ ಸಾಧನೆ ಕೊಂಡಾಡಿದ ಸಿಎಂ SSLC ಫಲಿತಾಂಶ: ಸರ್ಕಾರಿ ಶಾಲೆಗಳ ಸಾಧನೆ ಕೊಂಡಾಡಿದ ಸಿಎಂ

ಸರಕಾರೀ ಶಾಲೆಗಳ ಮೂಲಸೌಕರ್ಯಗಳ ಕಡೆ ಗಮನಕೊಟ್ಟು, ಗ್ರಾಮೀಣ ಭಾಗದಲ್ಲಿ ಭಾನುವಾರ ಕೂಡಾ ವಿಶೇಷ ತರಬೇತಿಯನ್ನು ನಡೆಸಿ ಶಿಕ್ಷಣ ಇಲಾಖೆ ಮೆಚ್ಚುಗೆಗೆ ಪಾತ್ರವಾಗಿತ್ತು. ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಪ್ರದೇಶದ ಫಲಿತಾಂಶದ ಪ್ರಮಾಣವೂ ಹೆಚ್ಚಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ, ಯಾವುದೇ ಸರ್ಕಾರಿ ಶಾಲೆಗಳು ಶೂನ್ಯ ಫಲಿತಾಂಶವನ್ನು ಪಡೆಯದೆ ಇದ್ದದ್ದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವಲ್ಲದೇ ಇನ್ನೇನು.

Thanks to SSLC, PUC board, CM Kumaraswamy for very smooth handling of 2019 exams

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದರು. 2016-17ರಲ್ಲಿ 13 ಹಾಗೂ 2017-18ರಲ್ಲಿ 69 ಮಂದಿ ಡಿಬಾರ್‌ ಆಗಿದ್ದರು. ಈ ಬಾರಿ ಡಿಬಾರ್ ಆಗಿದ್ದವರ ಸಂಖ್ಯೆ ಕೇವಲ 9. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಕರ್ನಾಟಕ ಸೆಕ್ಯೂರ್‌ ಎಕ್ಸಾಮಿನೇಷನ್‌ ಸಿಸ್ಟಮ್‌ (ಕೆಎಸ್‌ಇಎಸ್‌) ಅನ್ವಯ ಪ್ರಶ್ನೆ ಪತ್ರಿಕೆ ರವಾನೆ ಹಾಗೂ ಪರೀಕ್ಷಾ ಅಕ್ರಮಗಳ ತಡೆಗೆ ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು.

ಧಾರವಾಡ : ಎಸ್ಎಸ್‌ಎಲ್‌ಸಿಯಲ್ಲಿ ಮೂವರು ವಿದ್ಯಾರ್ಥಿನಿಯರ ಸಾಧನೆಧಾರವಾಡ : ಎಸ್ಎಸ್‌ಎಲ್‌ಸಿಯಲ್ಲಿ ಮೂವರು ವಿದ್ಯಾರ್ಥಿನಿಯರ ಸಾಧನೆ

ಮೌಲ್ಯಮಾಪಕರ ಸಂಭಾವನೆ ಮೊತ್ತ ಏರಿಕೆ ಮತ್ತು ನೇರವಾಗಿ ಆ ಹಣ ಅವರವರ ಬ್ಯಾಂಕ್ ಖಾತೆಗೆ ಜಮಾವಾಗಿದ್ದು, ಪೌಲ್ಯಮಾಪನಕ್ಕೆ ತಂತ್ರಾಂಶವನ್ನು ಬಳಕೆ ಮಾಡಕೊಂಡ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೂ ಪಾತ್ರವಾಯಿತು. ಇದರಿಂದ ಪ್ರತಿ ಪರೀಕ್ಷಾ ಕೇಂದ್ರಗಳಿಂದ ವಿದ್ಯಾರ್ಥಿಗಳಿಗೆ ವಿಷಯವಾರು ನಮೂದಾಗುವ ಅಂಕಗಳು ನೇರವಾಗಿ ತಂತ್ರಾಂಶದಲ್ಲಿಯೇ ಅಳವಡಿಕೆಗೊಂಡು ಆ ಕ್ಷಣವೇ ಮಂಡಳಿಗೆ ರವಾನೆಯಾಗುತ್ತಿತ್ತು.

Thanks to SSLC, PUC board, CM Kumaraswamy for very smooth handling of 2019 exams

ಅಂದು ಕಿಮ್ಮನೆ ರತ್ನಾಕರ ಅವಧಿಯಲ್ಲಿ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ವ್ಯಾಪಕವಾಗಿ ಸಿದ್ದರಾಮಯ್ಯನವರ ಸರಕಾರವನ್ನು ಟೀಕಿಸಲಾಗಿತ್ತು. ಈಗ, ಎಲ್ಲಾ ಪರೀಕ್ಷೆಗಳೂ ಸುಸೂತ್ರವಾಗಿ ಮುಗಿದಿದೆ. ಅಧಿಕಾರಿಗಳು ಇದಕ್ಕೆ ಪ್ರಮುಖ ಕಾರಣವಾದರೂ, ಅದಕ್ಕೆ ಬೇಕಾಗುವ ಬೇಡಿಕೆಗಳನ್ನು ಅನುಮೋದನೆ ನೀಡಬೇಕಾಗಿರುವುದು ಸರಕಾರ. ಹಾಗಾಗಿ, ಶಿಕ್ಷಣ ಇಲಾಖೆಯ ಜೊತೆಗೆ ಮುಖ್ಯಮಂತ್ರಿಗಳಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಬೇಕು.

English summary
Thanks to SSLC, PUC board, CM Kumaraswamy for very smooth handling of 2019 exams. Both these examinations, valauations and results, all handled very professionally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X