ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಣ್ಣ, ಕುವೆಂಪು ಬಗ್ಗೆ ಅಪಮಾನಿಸಿದವರು ಈ ನೆಲದಲ್ಲಿ ಬದುಕಲು ಯೋಗ್ಯರಲ್ಲ: ಸ್ವಾಮೀಜಿಗಳ ಆಕ್ರೋಶ

|
Google Oneindia Kannada News

ಬೆಂಗಳೂರು ಜೂ.18: ಬಸವಣ್ಣ, ಕುವೆಂಪು ಅವರನ್ನು ಅವಮಾನಿಸಿದವರು ಈ‌ ನೆಲದಲ್ಲಿ ಬದುಕಲು ಯೋಗ್ಯರಲ್ಲ ಎಂದು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ ಹೊರಹಾಕಿದರು.

ಇತಿಹಾಸ ತಾಯಿ ಗರ್ಭದಂತೆ, ಇತಿಹಾಸ ತಿರುಚಿದರೆ ತಾಯಿ ಗರ್ಭ ತಿರುಚಿದಂತೆ. ಇಂತಹ ಸಾಹಸಕ್ಕೆ ಕೈ ಹಾಕಬಾರದು. ನಾಡು ಸರ್ವ ಜನಾಂಗದ ಶಾಂತಿ ತೋಟ ಆಗಬೇಕು ಎಂದು ಅವರು ಹೇಳಿದರು.

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ( ಕರ್ನಾಟಕ) ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ರೋಹಿತ್ ಚಕ್ರತೀರ್ಥ ಬಂಧನ, ಬಿಸಿ ನಾಗೇಶ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆರೋಹಿತ್ ಚಕ್ರತೀರ್ಥ ಬಂಧನ, ಬಿಸಿ ನಾಗೇಶ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕುವೆಂಪು ಅವರ ಕುರಿತು ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದು ಈ ನೆಲದ ವರನಟ ಡಾ.ರಾಜ್ ಅವರು ಹೇಳುತ್ತಾರೆ. ಅಂತಹ ಸರಳತೆ ವ್ಯಕ್ತಿ ತ್ವ ಹೊಂದಿದವರು. ದೇವೇಗೌಡ, ಬರಗೂರು ರಾಮಚಂದ್ರಪ್ಪ, ಸೇರಿದಂತೆ ಅನೇಕ ಮಹನೀಯರು, ಹಿರಿಯ ಕವಿ, ಸಾಹಿತಿಗಳು, ನ್ಯಾಯಮೂರ್ತಿಗಳ ಇದ್ದಾರೆ. ಇವರನ್ನು ಬಿಟ್ಟು ಅನುಭವ ಇಲ್ಲದವರಿಂದ ಪರಿಷ್ಕರಣೆ ಅಗತ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

Karnataka text book row: Swamijis outraged aginest Rohit Chakrathirtha

ಶಾಲೆಗಳು ಆರ್ ಎಸ್ ಎಸ್ ನ ಬಡಶಾಲೆಯಲ್ಲ. ಈದೀಗ ಪರಿಷ್ಕರಣೆ ಆಗಿದೆ ಅವುಗಳನ್ನು ವಿತರಿಸುತ್ತೇವೆ ಎಂಬುದು ಸರಿಯಲ್ಲ. ಕೋವಿಡ್ ವೇಳೆ ಪಾಸ್ ಮಾಡಿದಂತೆ ವಿದ್ಯಾರ್ಥಿಗಳನ್ನು ಈ ವರ್ಷವು ಪಾಸ್ ಮಾಡಿ. ಪರಿಷ್ಕರಣೆ ಪಠ್ಯ ಬೋಧಿಸದಂತೆ ಆಗ್ರಹಿಸಿದರು.

ಇಂದು ಪ್ರಜಾಪ್ರಭುತ್ವ ಜನರಿಗಾಗಿ ಅಲ್ಲ.‌ಕೆಲವರಿಗಾಗಿ ಎಂಬಂತಾಗಿದೆ. ನಾಡ ಗೀತೆ ಅವಮಾನ ಆಗಿದ್ದು ಗೊತ್ತಾದ ತಕ್ಷಣ ಏಕೆ ಬಂಧಿಸಲಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸರ್ಕಾರಕ್ಕೆ ನೈತಿಕತೆ ಇಲ್ಲ. ಬರಗೂರು ಸಮಿತಿ ಅಂತಿಮ ಮಾಡಿದ ಹಳೆಯ ಪಠ್ಯ ನೀಡಬೇಕು.

ಶಿಕ್ಷಣ ಕ್ಷೇತ್ರಕ್ಕೆ ಜನಿವಾರ ಹಾಕುವ ಕೆಲಸ ಮಾಡಬಾರದು. ನಾವು ಯಾವ ಜಾತಿ ಜನಾಂಗದ ವಿರೋಧಿಗಳಲ್ಲ. ಹೊಸ ಪಠ್ಯ ನೀಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲ ನಾವೇಲ್ಲರು ಒಕ್ಕೋರಲಿನಿಂದ ಹೋರಾಡಲಿದ್ದೇವೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು‌.

Karnataka text book row: Swamijis outraged aginest Rohit Chakrathirtha

ಪ್ರಶ್ನಿಸುವವರನ್ನು ದೇಶದ್ರೋಹಿಗಳು ಎನ್ನುತ್ತಾರೆ:

ವ್ಯಕ್ತಿ, ವಿಷಯವನ್ನು ಗೌರವಿಸುತ್ತೇವೆ ಎಂದರೆ ಅದೇ ವ್ಯಕ್ತಿ ತಪ್ಪು ಮಾಡಿದಾಗ ಪ್ರಶ್ನಿಸಬೇಕಾದದ್ದು ನಮ್ಮ‌ ಕರ್ತವ್ಯ ಆಗಬೇಕು. ಸಮಾಜ ಸುಧಾರಣೆಗೆ ವಿಮರ್ಶೆ ಮತ್ತು ಆತ್ಮ ವಿಮರ್ಶೆ ಎರಡು ಮುಖ್ಯ. ಇಂದು ದೇಶದಲ್ಲಿ ವಿಮರ್ಶೆ ಮಾಡುವವರನ್ನು ದೇಶ ದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ.‌ ಇಂದು ಆತ್ಮ ವಿಮರ್ಶೆಯನ್ನೆ ಮಾಡಿಕೊಳ್ಳುತ್ತಿಲ್ಲ ಎಂದು ಶ್ರೀ ನಂಜಾವಧೂತ ಸ್ವಾಮೀಜಿ‌ ಹೇಳಿದರು.

ಎಲ್ಲರಲ್ಲೂ ಭಾವನಾತ್ಮಕ ವಿಚಾರಗಳಿಗೆ ಮೌಲ್ಯ ಹೊಂದಿರುತ್ತವೆ ಎಂಬುದನ್ನು ಪರಿಗಣಿಸಬೇಕು. ನಾಡ ಧ್ವಜಕ್ಕೆ ಮತ್ತು ಒಳ ಉಡುಪಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ವ್ಯಕ್ತಿಯನ್ನು ಸರ್ಕಾರದ ಮಟ್ಟದಲ್ಲಿ ಒಂದು ಸ್ಥಾನ ನೀಡುವುದು ಎಷ್ಟು ಸರಿ ಎಂದು ಯೋಚಿಸಿ.‌ ಇವೆಲ್ಲ ಅತೀ ಸೂಕ್ಷ್ಮ ವಿಷಯಗಳು. ಈಗಾಗಲೇ ಈ ತಪ್ಪನ್ನು ಸರಿಪಡಿಸಬೇಕಿತ್ತು. ನಿನ್ನೆ ಈ ಬಗ್ಗೆ ಸಿಎಂ ಹೇಳಿದ್ದಾರೆ. ತುಂಬಾ ವಿಳಂಬದ ನಂತರ ಸಿಎಂ ತಪ್ಪು ತಿದ್ದಲು ಮುಂದಾಗಿದ್ದಾರೆ. ಶಾಲೆ ಆರಂಭವಾಗಿ ತಿಂಗಳಾಯ್ತು ಎಂದು ವಿವರಿಸಿದರು. ತಮಗೆ ಬೇಕಾದ ರೀತಿಯಲ್ಲಿ ಸಂವಿಧಾನವನ್ನು, ‌ಪಠ್ಯವನ್ನು ತಿದ್ದಿವುದು ತಪ್ಪು. ಅದನ್ನು ಸಮಾಜ ಒಪ್ಪುವುದಿಲ್ಲ. ಸಂವಿಧಾನಕ್ಕೆ, ಅಂಬೇಡ್ಕರ್,‌ ಶರಣರಿಗೆ ಹೀಗೆ ಎಲ್ಲಾ ವರ್ಗದವರಿಗೆ ಗೌರವ ಕೊಡಬೇಕು ಎಂದರು.

ನಮ್ಮ ಹಕ್ಕುಗಳನ್ನು ಕಸಿದುಕೊಂಡರೆ ಸಹಜವಾಗಿ ಬೀದಿಗಿಳಿಯಬೇಕಾಗುತ್ತದೆ. ಎಲ್ಲರೂ, ಎಲ್ಲ ಸಂಘಟನೆಗಳು ಅವರಿಗೆ ಸಹಕರಿಸುತ್ತಾರೆ. ಇಂದು ನಡೆಸುತ್ತಿರುವ ಸಾಂಕೇತಿಕ ಪ್ರತಿಭಟನೆ. ಸೂಕ್ಷ್ಮ ವಿಚಾರಗಳನ್ನು ಅರಿತುಕೊಳ್ಳದೇ ವಿಷಯ, ವ್ಯಕ್ತಿಗಳ ಅಪಮಾನಕ್ಕೆ ಮುಂದಾದರೆ ಹೋರಾಟ ತೀವ್ರವಾಗುತ್ತದೆ. ಅದು ಆಗಬಾರದೆಂದೆ ಸೂಕ್ಷ್ಮ ವಿಚಾರಗಳ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಇಂದಿನ ಸಮಾವೇಶವನ್ನು ಎಚ್ಚರಿಕೆ ಸಭೆ ಎಂದು ಭಾವಿಸಬೇಕು. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಮಠಾಧೀಶರು, ದಲಿತರು, ಸಾಹಿತಿಗಳು, ಕನ್ನಡಪರ‌ ಹೋರಾಟಗಾರರು ಎಲ್ಲರೂ ಸೇರಿ ಸಂಘಟಿತರಾಗಿ ಬೀದಿಗಿಳಿಯಬೇಕಾಗುತ್ತದೆ. ಆಗಿರುವ ತಪ್ಪನ್ನು ಸರಿಪಡಿಸುವ ವಿಚಾರವನ್ನು ಯಾರು ಪ್ರತಿಷ್ಠೆ ಆಗಿ ತೆಗೆದುಕೊಳ್ಳುವುದು ಬೇಡ. ಈ ಸಮಿತಿ ಜತೆಗೆ ನಾವು ಸದಾ ಇರುತ್ತೇವೆ ಎಂದು ಕಿವಿಮಾತು.

Recommended Video

Agnipath Scheme ವಿರೋಧಿಸಿ ಮಾಡುತ್ತಿದ್ದ protest ನಲ್ಲಿ ಹಿಂಸಾಚಾರ | *Defence | OneIndia Kannada

English summary
Those who insulted Basavanna and Kuvempu are not worth living in this land: Shri Jnanaprakash Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X