ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಹಿತ್ ಚಕ್ರತೀರ್ಥ ಬಂಧನ, ಬಿಸಿ ನಾಗೇಶ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

|
Google Oneindia Kannada News

ಬೆಂಗಳೂರು ಜೂ.18: ಪಠ್ಯಪುಸ್ತಕಗಳನ್ನು ತಿರುಚಿರುವುದು, ನಾಡಗೀತೆ ಹಾಗೂ ನಾಡಧ್ವಜಕ್ಕೆ ಅವಮಾನ, ದಾರ್ಶನಿಕರಿಗೆ ಅಪಮಾನಿಸಿರುವುದನ್ನು ವಿರೋಧಿಸಿ ಹಾಗೂ ಪರಿಷ್ಕೃತ ಪಠ್ಯಗಳನ್ನು ಕೈಬಿಟ್ಟು ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ( ಕರ್ನಾಟಕ) ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ.

ಈ ಪರಿಷ್ಕೃತ ಪಠ್ಯಪುಸ್ತಕಗಳ ಸಂವಿಧಾನ ವಿರೋಧಿ ಆಗಿವೆ. ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ವಿವಿಧ ಸಂಘಟನೆಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸಹಿತ ಹಲವರು ಪಾಲ್ಗೊಂಡಿದ್ದಾರೆ.

ಈ ವೇಳೆ ಪಾಲ್ಗೊಂಡಿದ್ದ ಮುಖಂಡರು ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಹಳೆಯ ಪಠ್ಯವನ್ನೆ ಮುಂದುವರಿಸಬೇಕು. ಪಠ್ಯ ಪರಿಷ್ಕರಣೆಗೆ ಕಾರಣರಾದ ಸಚಿವ ಬಿ. ಸಿ ನಾಗೇಶ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Karnataka text book row: Mass rally from all political parties and kannada associations in bengaluru

ಈ ಸಂದರ್ಭದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಶ್ರೀ ನಂಜಾವಧೂತ ಸ್ವಾಮೀಜಿ, ಸಮಿತಿ ಗೌರವಾಧ್ಯಕ್ಷ ಸಿ ಎಚ್, ಹನುಮಂತ ರಾಯ, ಬಿ. ಟಿ ಲಲಿತಾನಾಯಕ, ಅಧ್ಯಕ್ಷ ಜಿ.ಬಿ ಪಾಟೀಲ್, ಕಾರ್ಯಾಧ್ತಕ್ಷ ಮಾವಳ್ಳಿ ಶಂಕರ್ ಮತ್ತಿತರ ಸದಸ್ಯರು, ಸ್ವಯಂ ಸೇವಕರು ಭಾಗವಹಿಸಿದ್ದರು.

ಬೇಡಿಕೆಗಳು:

ಚಕ್ರತೀರ್ಥ ಸಮಿತಿ ಪರಿಷ್ಕೃತ ಪಠ್ಯಪುಸ್ತಕ ಹಿಂಪಡೆದು ಹಿಂದಿನ‌ಪಠ್ಯಗಳನ್ನೆ ವಿತರಿಸಬೇಕು.‌ ನಾಡಗೀತೆ ವಿರೂಪಗೊಳಿಸಿ ಅಪಮಾನ ಗೈದವರನ್ನು ಬಂಧಿಸಬೇಕು. ಶಿಕ್ಷ ಸಚಿವ ಬಿ. ಸಿ ನಾಗೇಶ ರಾಜೀನಾಮೆ‌ ನೀಡಬೇಕೆಂದು ಆಗ್ರಹಿಸಲಾಯಿತು.

Karnataka text book row: Mass rally from all political parties and kannada associations in bengaluru

ಪಾಲ್ಗೊಂಡ ಸಂಘಟನೆಗಳು:

ಬಹುಜನ‌ ಸಮಾಜ ಪಕ್ಷ, ಜಯಕರ್ನಾಟಕ ಸಂಘಟನೆ, ರಾಜ್ಯ ಒಕ್ಕಲಿಗರ ಸಂಘ , ಕುರುಬರ ಸಂಘದ ವೆಂಕಟೇಶ ಮೂರ್ತಿ, ಸಿ.ಕೆ ರಾಮೇಗೌಡ, ಕರವೇ ಪ್ರವೀಣ ಶೆಟ್ಟಿ ಮತ್ತವರ ಬಣದ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ, ಕನ್ನಡ ಪರ ಹೋರಾಟಗಾರ ಮತ್ತು ನಿರ್ಮಾಪಕ ಸಾ.ರಾ ಗೋವಿಂದು, ಮಾಜಿ ಮಹಾಪೌರರಾದ ಪದ್ಮಾವತಿ, ಜನತಾದಳ, ಎಎಪಿ, ಎಸ್‌ಡಿಪಿಐ ಮುಖಂಡರು, ಡಾ.ರಾಜಕುಮಾರ್ ಅಭಿಮಾನಿ ಸಂಘದ ಮುಖಂಡರು, ಎಡ ಪಂಥೀಯ ಪಕ್ಷಗಳ ಮುಖಂಡರು ಭಾಗಿಯಾಗಿದ್ದಾರೆ.

ಪಕ್ಷಾತೀತವಾಗಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಆರ್‌ಎಸ್ ಪಕ್ಷದ ರವಿಕೃಷ್ಣಾ ರೆಡ್ಡಿ, ಬಿಎಸ್‌ಪಿಯ ಮುನಿಯಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್. ಜಿ. ಸಿದ್ದರಾಮಯ್ಯ, ವಿ ಆರ್ ಸುದರ್ಶನ್, ಶ್ರೀನಿವಾಸ್ ಕಪ್ಪಣ್ಣ, ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ಮತ್ತಿತರರು ಭಾಗಿಯಾಗಿದ್ದಾರೆ.

ರಂಗಭೂಮಿ ಕಲಾವಿದರಹ, ಸಾಹಿತಿಗಳು, ಕನ್ನಡಪರ ಹೋರಾಟಗಾರರು, ರೈತ ಸಂಘದ ಮುಖಂಡರು ಭಾಗಿ.

Recommended Video

2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

English summary
A protest march was held in Bangalore by Kannada organizations demanding the abandonment of revised texts and the resumption of the old curriculum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X