ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷ್ಕೃತ ಪಠ್ಯ ಪುಸ್ತಕದಲ್ಲಿನ ತಿದ್ದುಪಡಿ; ಸಿದ್ದರಾಮಯ್ಯ ಗರಂ

|
Google Oneindia Kannada News

ಬೆಂಗಳೂರು ಜೂ. 30: "ಪಠ್ಯ ಪುಸ್ತಕ ತಿದ್ದುಪಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮ ಅರಾಜಕ ನಿಲುವಿನದ್ದಾಗಿದೆ" ಎಂದು ಗುರುವಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಲೋಪ ದೋಷಗಳಾಗಿವೆ ಎಂದು ಕೊನೆಗೂ ಒಪ್ಪಿಕೊಂಡಿದೆ. ಒಂದರಿಂದ ರಿಂದ 10ನೇ ತರಗತಿ ವರೆಗಿನ ಕನ್ನಡ ಭಾಷಾ ಪಠ್ಯ ಪುಸ್ತಕ, ಸಮಾಜ ವಿಜ್ಞಾನ ಪಠ್ಯ ಪುಸ್ತಕ ಹಾಗೂ ಸೀಮಿತ ತರಗತಿಗಳ ಪರಿಸರ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 83 ಕಡೆ ತಿದ್ದುಪಡಿಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಇದೆ ಎಂದರು.

ಪಠ್ಯಪರಿಷ್ಕರಣೆ ಉದ್ದಟತನ ಹೀಗೆ ಬಿಟ್ಟರೆ ಕಷ್ಟ ಎದುರಿಸಲು ಸಿದ್ಧರಾಗಿ: ಸಿಎಂಗೆ ಕಾಗಿನೆಲೆ ಶ್ರೀ ಎಚ್ಚರಿಕೆ! ಪಠ್ಯಪರಿಷ್ಕರಣೆ ಉದ್ದಟತನ ಹೀಗೆ ಬಿಟ್ಟರೆ ಕಷ್ಟ ಎದುರಿಸಲು ಸಿದ್ಧರಾಗಿ: ಸಿಎಂಗೆ ಕಾಗಿನೆಲೆ ಶ್ರೀ ಎಚ್ಚರಿಕೆ!

ಈಗಾಗಲೇ ಆಗಿರುವ ಪರಿಷ್ಕರಣೆಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಲಾಗಿದೆ. ಆದರೆ ಅಷ್ಟು ತಿದ್ದುಪಡಿಗಳಲ್ಲಿ ಬಹುತೇಕ ವಿವರಗಳು ಸಂವಿಧಾನ ವಿರೋಧಿ ಆಗಿವೆ. ದುರುದ್ದೇಶ ನಿಲುವಿನಿಂದ ಕೂಡಿವೆ ಎಂಬುದು ನಾಡಿನ ಶಿಕ್ಷಣ ತಜ್ಞರುಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ವಿವರಿಸಿದರು.

ಪಠ್ಯ ಪುಸ್ತಕದಲ್ಲಿನ ತಪ್ಪುಗಳ ತಿದ್ದುಪಡಿ ಆದೇಶ ಖಂಡನೀಯ ಪಠ್ಯ ಪುಸ್ತಕದಲ್ಲಿನ ತಪ್ಪುಗಳ ತಿದ್ದುಪಡಿ ಆದೇಶ ಖಂಡನೀಯ

ತಿಪ್ಪೆ ಸಾರಿಸುವ ಕೆಲಸ

ತಿಪ್ಪೆ ಸಾರಿಸುವ ಕೆಲಸ

ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಪರಿಷ್ಕೃತ ಪಠ್ಯ ಪುಸ್ತಕದಲ್ಲಿನ 7-8 ಕಡೆಗಳಲ್ಲಿ ತಿದ್ದುಪಡಿಗಳನ್ನಷ್ಟೇ ಮಾಡಿದೆ ಎನ್ನುವ ಮೂಲಕ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ. ಶರಣರು, ದಾರ್ಶನಿಕರು ಸೇರಿದಂತೆ ಸಮಾಜ ಸುಧಾರಕರ ಅಪಮಾನ ಮಾಡಿದ್ದಲ್ಲದೇ, ಆಗಿರುವ ತಪ್ಪುಗಳನ್ನು ಸಮರ್ಥಿಕೊಂಡ ರೀತಿಯಲ್ಲಿನ ನಡೆದುಕೊಳ್ಳುತ್ತಿರುವ ಕ್ರಮ ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.

ಶೀಫಾರಸಿನ ಅಂಶಗಳನ್ನು ಪರಿಶೀಲಿಸಬೇಕು:

ಶೀಫಾರಸಿನ ಅಂಶಗಳನ್ನು ಪರಿಶೀಲಿಸಬೇಕು:

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರುಗಳು ಪರಿಶೀಲನೆಗೆ ಒಳಪಡಿಸಿ. ಶೀಫಾರಸಿನ ವಿವರಗಳು ನಾಡಿನ ಜ್ಞಾನ ಪರಂಪರೆಗೆ ಅನುಗುಣವಾಗಿ ಇವೆಯೆ?. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತವೆಯೆ? ಎಂಬುದನ್ನು ನೋಡಬೇಕು.

ಆ ಸಮಿತಿ ಶಿಫಾರಸುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಇವೆಯೇ?. ಮಕ್ಕಳಿಗೆ ಕಲಿಸುವ ಸಂಗತಿಗಳು ದೇಶದ ಹಾಗೂ ಜಗತ್ತಿನ ವಿವಿಧ ಜ್ಞಾನ ಶಾಖೆಗಳ ವಿದ್ವಾಂಸರುಗಳು ಒರೆಗೆ ಹಚ್ಚಿ, ಪರಿಶೀಲಿಸಿ ಸರ್ವ ಸಮ್ಮತಿಯ ಅಭಿಪ್ರಾಯಕ್ಕೆ ಬರಲಾಗಿದೆಯೇ? ಎಂಬ ಅಂಶಗಳೆಲ್ಲ ಮೊದಲು ಇತ್ಯರ್ಥ ಆಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಪರಿಶೀಲನೆ ಬಳಿಕೆ ವಿತರಿಸಿ

ಪರಿಶೀಲನೆ ಬಳಿಕೆ ವಿತರಿಸಿ

ಪರಿಷ್ಕೃತ ಪಠ್ಯಪುಸ್ತಕದಲ್ಲಿನ ಅಂಶಗಳು ಈ ರೀತಿ ಪರಿಶೀಲನೆಗೆ ಒಳಪಡದಿದ್ದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಯುಪಿಎಸ್‍ಸಿ, ಕೆಪಿಎಸ್‍ಸಿ ಮುಂತಾದ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಲ್ಲಿ ಹಾಗೂ ಜಗತ್ತಿನ ಬೇರೆ ಬೇರೆ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಕಲಿಯಲು ಇಚ್ಛಿಸುವವರು ಸತ್ಯ ಸಂಗತಿಗಳಿಗೆ ವಿರುದ್ಧವಾದ ಅಂಶಗಳನ್ನು ಬರೆಯಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸಮಗ್ರ ತಿದ್ದುಪಡಿಗಳನ್ನು ಪರಿಶೀಲನೆ ಮಾಡಿದ ನಂತರವೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಬೇಕು ಎಂದು ಆಗ್ರಹಿಸಿದರು.

ಪಠ್ಯ ವಿವಾದ ಮಾಡಿದವ ವಿರುದ್ಧ ಸೂಕ್ತ ಕ್ರಮ:

ಪಠ್ಯ ವಿವಾದ ಮಾಡಿದವ ವಿರುದ್ಧ ಸೂಕ್ತ ಕ್ರಮ:

ಪ್ರಸ್ತುತ ಸರ್ಕಾರ ಮಾಡಿರುವ ದುರುದ್ದೇಶದ ಆವಾಂತರಗಳನ್ನು ಪುಸ್ತಕಗಳಲ್ಲಿ ಸರಿಪಡಿಸದೆ ಎಸ್ ಡಿಎಂಸಿಗಳು ಸ್ವತಃ ಝೆರಾಕ್ಸ್ ಮಾಡಿ ಮಕ್ಕಳಿಗೆ ವಿತರಿಸಲು ಹೇಳುತ್ತಿರುವುದು ಅರಾಜಕವಾದ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಅವಾಂತರಕಾರಿ ಆದ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ವಾಪಸ್ಸು ಪಡೆಯಬೇಕು. ಪರಿಷ್ಕರಣೆ ಕುರಿತ ಎಲ್ಲ ಆವಾಂತರಗಳು ಸರಿಯಾಗುವವರೆಗೆ ಬರಗೂರು ಸಮಿತಿಯು ಸಿದ್ಧಪಡಿಸಿದ್ದ ಪಠ್ಯ ಪುಸ್ತಕಗಳನ್ನೆ ಮುಂದುವರೆಸಬೇಕು. ಅಲ್ಲದೇ ಪಠ್ಯಪುಸ್ತಕಗಳ ವಿವಾದಕ್ಕೆ ಕಾರಣರಾದ ಎಲ್ಲರ ಬಳಿ ಆದ ನಷ್ಟ ವಸೂಲಿ ಮಾಡಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Recommended Video

ISRO ದಿಂದ 3 ಉಪಗ್ರಹ ಯಶಸ್ವಿ ಉಡಾವಣೆ? ಇದರ ಪ್ರಯೋಜನ ಏನು ಗೊತ್ತಾ? | *India | OneIndia Kannada

English summary
Text book row in Karnataka. Leader of opposition Siddaramaiah slammed Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X