ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್ ದಿನಾಚರಣೆ: ಕೊರೊನಾ ಭೀತಿಯಲ್ಲಿ ಮಹಾಮಾರಿಯನ್ನೇ ಮರೆತ ಜನ!

|
Google Oneindia Kannada News

ಬೆಂಗಳೂರು, ಡಿಸೆಂಬರ್.01: ಕೊರೊನಾವೈರಸ್. ಕೊರೊನಾವೈರಸ್. ಇದೊಂದು ಸಾಂಕ್ರಾಮಿಕ ಪಿಡುಗಿನಿಂದಾಗಿ ಇಡೀ ಜಗತ್ತು ತತ್ತರಿಸಿದೆ. ಲಕ್ಷಾಂತರ ಜೀವಗಳನ್ನು ಬಲಿ ಪಡೆದ ಮಹಾಮಾರಿ ಎದುರು ಅಪಾಯಕಾರಿ ರೋಗಗಳ ಬಗ್ಗೆ ಜನರು ನಿರ್ಲಕ್ಷ್ಯ ತೋರುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಡಿಸೆಂಬರ್.01 ವಿಶ್ವ ಏಡ್ಸ್ ದಿನ ಎಂಬುದನ್ನೇ ಜಗತ್ತು ಮರೆತಿರುವ ಹಾಗೆ ಗೋಚರಿಸುತ್ತಿದೆ. ಹೆಚ್ಐವಿ ಸೇರಿದಂತೆ ಲೈಂಗಿಕ ಸಮಸ್ಯೆಗಳಿಂದ ಎದುರಾಗುವ ರೋಗಗಳ ತಪಾಸಣೆ ಮತ್ತು ಪರೀಕ್ಷೆ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿರುವ ಅಂಶ ಇದೀಗ ಬಯಲಾಗಿದೆ. ಹೆಚ್ಐವಿ ರೋಗಿಗಳ ಪರೀಕ್ಷೆ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ.

HIVಗೆ ಸೆಡ್ಡುಹೊಡೆದು, ಕಂದನನ್ನು ಕಾಪಿಟ್ಟವಳು... 'ಅಮ್ಮ' ಅಂದ್ರೆ ಇವಳು!HIVಗೆ ಸೆಡ್ಡುಹೊಡೆದು, ಕಂದನನ್ನು ಕಾಪಿಟ್ಟವಳು... 'ಅಮ್ಮ' ಅಂದ್ರೆ ಇವಳು!

ಕೊರೊನಾವೈರಸ್ ಸೋಂಕಿಗಿಂತಲೂ ಅಪಾಯಕಾರಿ ಎನಿಸಿದ್ದ ಏಡ್ಸ್ ಬಗ್ಗೆ ಜನರು ಮತ್ತು ಸರ್ಕಾರಗಳು ನಿರ್ಲಕ್ಷ್ಯ ತೋರಿರುವುದು ಸ್ಪಷ್ಟವಾಗುತ್ತಿದೆ. ಹೆಚ್ಐವಿ ಸೇರಿದಂತೆ ಲೈಂಗಿಕ ಸಮಸ್ಯೆಗಳಿಂಗ ಕಾಣಿಸಿಕೊಳ್ಳುವ ರೋಗಗಳ ಪರೀಕ್ಷೆ ಪ್ರಮಾಣವು ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿರುವುದು ಗೊತ್ತಾಗಿದೆ. 2020ನೇ ಸಾಲಿನಲ್ಲಿ ಹೆಚ್ಐವಿ ಪರೀಕ್ಷೆಯ ಗುರಿ ಎಷ್ಟಿತ್ತು, ಎಷ್ಟು ಜನರಿಗೆ ಪರೀಕ್ಷೆ ನಡೆಸಲಾಗಿದೆ. ಈ ಹಿಂದೆ ಎಷ್ಟು ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಎಚ್ಐವಿ ಸೋಂಕಿತರಿಗೆ 5 ಲಕ್ಷ ರೂವರೆಗೆ ಉಚಿತ ಔಷಧಿಎಚ್ಐವಿ ಸೋಂಕಿತರಿಗೆ 5 ಲಕ್ಷ ರೂವರೆಗೆ ಉಚಿತ ಔಷಧಿ

ಕೊರೊನಾವೈರಸ್ ನಿಂದ ಹೆಚ್ಐವಿ ಕೇಂದ್ರಗಳು ಬಂದ್

ಕೊರೊನಾವೈರಸ್ ನಿಂದ ಹೆಚ್ಐವಿ ಕೇಂದ್ರಗಳು ಬಂದ್

ದೇಶವನ್ನು ಕಾಡುತ್ತಿರುವ ಕೊರೊನಾವೈರಸ್ ಸೋಂಕಿನಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಹೆಚ್ಐವಿ ಪರೀಕ್ಷಾ ಕೇಂದ್ರಗಳು ಬಂದ್ ಆಗಿವೆ. ಹೆಚ್ಐವಿ ಪರೀಕ್ಷಾ ಕೇಂದ್ರಗಳಿಗೆ ಜನರು ತೆರಳುತ್ತಿಲ್ಲ. ಈ ಹಿನ್ನೆಲೆ ಅತ್ಯಂತ ಕಡಿಮೆ ಜನರನ್ನು ಹೆಚ್ಐವಿ ಪರೀಕ್ಷೆ ನಡೆಸಲಾಗಿದೆ. ಜಿಲ್ಲಾಕೇಂದ್ರಗಳಲ್ಲಿರುವ ಹೆಚ್ಐವಿ ಪರೀಕ್ಷಾ ವಿಭಾಗಗಳನ್ನು ಕೂಡಾ ಲಾಕ್ ಡೌನ್ ಸಂದರ್ಭದಲ್ಲಿ ಬಂದ್ ಮಾಡಲಾಗಿತ್ತು.

ರಾಜ್ಯದಲ್ಲಿ ಎಷ್ಟು ಜನರಿಗೆ ಕೊರೊನಾವೈರಸ್ ಪರೀಕ್ಷೆ

ರಾಜ್ಯದಲ್ಲಿ ಎಷ್ಟು ಜನರಿಗೆ ಕೊರೊನಾವೈರಸ್ ಪರೀಕ್ಷೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ರಾಜ್ಯದಲ್ಲಿ ಎಷ್ಟು ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸಲಾಗಿದೆ ಎನ್ನುವುದರ ಬಗ್ಗೆ ಅಂಕಿ-ಅಂಶಗಳು ಸಿಕ್ಕಿವೆ. ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಮಾಜದ ನೀಡಿದ ಮಾಹಿತಿ ಪ್ರಕಾರ, 2020-2021ನೇ ಸಾಲಿನಲ್ಲಿ 26.34 ಲಕ್ಷ ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿತ್ತು. ಆದರೆ, ಅಕ್ಟೋಬರ್.2020ರ ವೇಳೆಗೆ ಸಂಗ್ರಹಿಸಿದ ಮಾಹಿತಿಯಲ್ಲಿ 6.96 ಲಕ್ಷ ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 4682 ಮಂದಿಗೆ ಏಡ್ಸ್ ತಗುಲಿರುವುದು ಗೊತ್ತಾಗಿದೆ.

ನಾಲ್ಕು ವರ್ಷಗಳಲ್ಲಿ ಎಷ್ಟು ಹೆಚ್ಐವಿ ಪರೀಕ್ಷೆ

ನಾಲ್ಕು ವರ್ಷಗಳಲ್ಲಿ ಎಷ್ಟು ಹೆಚ್ಐವಿ ಪರೀಕ್ಷೆ

ಹೆಚ್ಐವಿ ಪರೀಕ್ಷೆ ಪ್ರಮಾಣವು 2020-21ನೇ ಸಾಲಿನಲ್ಲಿ ಇಳಿಮುಖವಾಗಿದೆ. ಇದಕ್ಕೂ ಮೊದಲು 2016-17ನೇ ಸಾಲಿನಲ್ಲಿ 16.98 ಲಕ್ಷ ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದ್ದು, 19.40 ಲಕ್ಷ ಜನರಿಗೆ ಅಂದರೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸಲಾಗಿತ್ತು. 2017-18ನೇ ಸಾಲಿನಲ್ಲಿ 19.73 ಲಕ್ಷ ಜನರಿಗೆ ಪರೀಕ್ಷೆ ನಡೆಸಲು ಅಂದುಕೊಳ್ಳಲಾಗಿದ್ದು, 22.20 ಲಕ್ಷ ಜನರಿಗೆ ತಪಾಸಣೆ ನಡೆಸಲಾಗಿತ್ತು. 2018-19ನೇ ಸಾಲಿನಲ್ಲಿ 22.25 ಲಕ್ಷ ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸುವ ಗುರಿ ಹಾಕಿಕೊಳ್ಳಲಾಗಿದ್ದು, 24.73 ಲಕ್ಷ ಜನರನ್ನು ಪರೀಕ್ಷಿಸಲಾಗಿತ್ತು. 2019-20ನೇ ಸಾಲಿನಲ್ಲಿ 26.34 ಲಕ್ಷ ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಕಳೆದ ವರ್ಷವಷ್ಟೇ ಅಂದುಕೊಂಡಿದ್ದಕ್ಕಿಂತ ಕಡಿಮೆ ಅಂದರೆ 25.78 ಲಕ್ಷ ಜನರಿಗೆ ಹೆಚ್ಐವಿ ಪರೀಕ್ಷೆ ನಡೆಸಲಾಗಿತ್ತು ಎಂಬುದು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಮಾಜದ ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗುತ್ತದೆ.

ಸಂತಾನೋತ್ಪತ್ತಿ ಪ್ರದೇಶದ ಸೋಂಕು ತಪಾಸಣೆಯಲ್ಲಿ ಇಳಿಕೆ

ಸಂತಾನೋತ್ಪತ್ತಿ ಪ್ರದೇಶದ ಸೋಂಕು ತಪಾಸಣೆಯಲ್ಲಿ ಇಳಿಕೆ

ಹೆಚ್ಐವಿ ಜೊತೆಜೊತೆಗೆ ಲೈಂಗಿಕತೆಯಿಂದ ಹರಡುವ ಸೋಂಕು ಮತ್ತು ಸಂತಾನೋತ್ಪತ್ತಿ ಪ್ರದೇಶದಿಂದ ಹರಡುವ ಸೋಂಕಿನ ಪರೀಕ್ಷೆಗಳ ಪ್ರಮಾಣದಲ್ಲೂ ಭಾರಿ ಇಳಿಕೆಯಾಗಿದೆ. ಒಟ್ಟು ನಿಗದಿಪಡಿಸಿದ ಪರೀಕ್ಷೆ ಸಂಖ್ಯೆಯಲ್ಲಿ ಶೇ.18.5ರಷ್ಟು ಅಂದರೆ 4.28 ಲಕ್ಷ ಜನರನ್ನು ಮಾತ್ರ ಈ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಸಾಂಕ್ರಾಮಿಕ ಪಿಡುಗಿನಿಂದಾಗಿ ಹೆಚ್ಐವಿ ಸೋಂಕಿನ ಪರೀಕ್ಷೆ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಐವಿ ಸೋಂಕಿನ ಪರೀಕ್ಷೆ ಪ್ರಮಾಣ ಹೆಚ್ಚಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಮಾಜದ ಉಪ ನಿರ್ದೇಶಕ ಟಿ.ಗೋವಿಂದ್ ರಾಜು ತಿಳಿಸಿದ್ದಾರೆ.

ಭಾರತದಲ್ಲಿ ರಕ್ತ ಸಂಗ್ರಹಣೆ ಪ್ರಮಾಣ ಇಳಿಕೆ

ಭಾರತದಲ್ಲಿ ರಕ್ತ ಸಂಗ್ರಹಣೆ ಪ್ರಮಾಣ ಇಳಿಕೆ

ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ರಕ್ತ ಸಂಗ್ರಹಣೆ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. 2020-21ನೇ ಸಾಲಿನಲ್ಲಿ ದೇಶದ 8.08 ಲಕ್ಷ ರಕ್ತ ಸಂಗ್ರಹಣೆ ಕೇಂದ್ರಗಳ ಪೈಕಿ ಕೇವಲ 3.22 ಲಕ್ಷ ಘಟಕಗಳಲ್ಲಿ ಮಾತ್ರ ರಕ್ತ ಸಂಗ್ರಹಿಸಲಾಗಿದೆ. ಈ ಪೈಕಿ 2.65 ಸ್ವಯಂ ಸೇವಕ ರಕ್ತದಾನ ಘಟಕಗಳಾಗಿವೆ ಎಂದು ತಿಳಿದು ಬಂದಿದೆ.

English summary
Testing For HIV And STDs Declines Sharply in Karnataka Due To Covid-19 Pandemic. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X